AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಂಜೀವಿಗೆ ಸಂಭಾವನೆ ಕೊಡಲು ಮನೆ ಮಾರಿಕೊಂಡ್ರಾ ನಿರ್ಮಾಪಕರು? ಕೊನೆಗೂ ಸಿಕ್ತು ಸ್ಪಷ್ಟನೆ

ಚಿರಂಜೀವಿ ಅವರು ಪ್ರತಿ ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆಯುತ್ತಾರೆ. ‘ಭೋಲಾ ಶಂಕರ್’ ಚಿತ್ರಕ್ಕೂ ಅವರು ದೊಡ್ಡ ಮಟ್ಟದ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ. ಅಷ್ಟೇ ಅಲ್ಲ, ಚಿರಂಜೀವಿಗೆ ಸಂಭಾವನೆ ಕೊಡೋಕೆ ನಿರ್ಮಾಪಕ ಅನಿಲ್ ಸುಂಕರ ಅವರು ತಮ್ಮ ಮನೆ ಮಾರಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿತ್ತು.

ಚಿರಂಜೀವಿಗೆ ಸಂಭಾವನೆ ಕೊಡಲು ಮನೆ ಮಾರಿಕೊಂಡ್ರಾ ನಿರ್ಮಾಪಕರು? ಕೊನೆಗೂ ಸಿಕ್ತು ಸ್ಪಷ್ಟನೆ
ಭೋಲಾ ಶಂಕರ್
ರಾಜೇಶ್ ದುಗ್ಗುಮನೆ
|

Updated on:Aug 18, 2023 | 7:48 AM

Share

ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ (Bhola Shankar Movie) ದೊಡ್ಡ ಮಟ್ಟದಲ್ಲಿ ಫ್ಲಾಪ್ ಆಯಿತು. ಆಗಸ್ಟ್ 11ರಂದು ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಮ್ಯಾಜಿಕ್ ಮಾಡೋದು ಹಾಗಿರಲಿ ಹಾಕಿದ ದುಡ್ಡನ್ನು ಮರಳಿ ಪಡೆಯಲು ವಿಫಲವಾಯಿತು. ಚಿರಂಜೀವಿ, ತಮನ್ನಾ, ಕೀರ್ತಿ ಸುರೇಶ್ (Keerthi Suresh) ಮೊದಲಾದವರು ನಟಿಸಿದ ಹೊರತಾಗಿಯೂ ಸಿನಿಮಾ ಮೋಡಿ ಮಾಡಿಲ್ಲ. ಈ ಚಿತ್ರದ ನಿರ್ದೇಶಕ ಮೆಹರ್ ರಮೇಶ್ ಅವರನ್ನು ಟ್ರೋಲ್ ಮಾಡಲಾಗಿದೆ. ಈ ಮಧ್ಯೆ ಚಿತ್ರದ ಬಗ್ಗೆ ವದಂತಿ ಒಂದು ಹಬ್ಬಿತ್ತು. ಇದಕ್ಕೆ ನಿರ್ಮಾಪಕರು ಉತ್ತರಿಸಿದ್ದಾರೆ.

ಚಿರಂಜೀವಿ ಅವರು ಪ್ರತಿ ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆಯುತ್ತಾರೆ. ‘ಭೋಲಾ ಶಂಕರ್’ ಚಿತ್ರಕ್ಕೂ ಅವರು ದೊಡ್ಡ ಮಟ್ಟದ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ. ಅಷ್ಟೇ ಅಲ್ಲ, ಚಿರಂಜೀವಿಗೆ ಸಂಭಾವನೆ ಕೊಡೋಕೆ ನಿರ್ಮಾಪಕ ಅನಿಲ್ ಸುಂಕರ ಅವರು ತಮ್ಮ ಮನೆ ಮಾರಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿತ್ತು. ಆದರೆ, ಈ ವಿಚಾರವನ್ನು ಅಲ್ಲಗಳೆದಿದ್ದಾರೆ.

‘ವದಂತಿಗಳು ಕೆಲವು ಜನರಿಗೆ ಖುಷಿ ನೀಡಬಹುದು. ಆದರೆ, ಹಲವು ವರ್ಷಗಳಿಂದ ಕಟ್ಟಲ್ಪಟ್ಟ ವರ್ಚಸ್ಸಿಗೆ ಕಳಂಕ ತರುವುದು ಒಪ್ಪಲಾರದ ಅಪರಾಧ. ಸಂಬಂಧಿಸಿದವರ ಎಲ್ಲಾ ಕುಟುಂಬದವರಿಗೂ ಇದರಿಂದ ತೊಂದರೆ ಉಂಟಾಗುತ್ತದೆ. ನನ್ನ ಮತ್ತು ಚಿರಂಜೀವಿ ಅವರ ನಡುವೆ ವಿವಾದ ಆಗಿದೆ ಎಂಬ ಸುದ್ದಿ ಶುದ್ಧ ಸುಳ್ಳು. ಅವರು ನನಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಅವರಿಗೆ ನನ್ನೊಂದಿಗೆ ಉತ್ತಮ ಸಂಬಂಧ ಇದೆ. ದಯವಿಟ್ಟು ಸತ್ಯಗಳ ತಿರುಚಬೇಡಿ. ನಕಲಿ ಸುದ್ದಿಗಳನ್ನು ಸೃಷ್ಟಿಸುವುದು ಕೆಲವರಿಗೆ ಖುಷಿ ನೀಡುತ್ತದೆ. ಆದರೆ ಇದು ಅನೇಕರ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ನನ್ನ ಎಲ್ಲಾ ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಮತ್ತಷ್ಟು ಬಲ ಪಡೆದು ಬರುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫ್ಲಾಪ್​ನಲ್ಲಿ ತಮ್ಮ ದಾಖಲೆಯನ್ನು ತಾವೇ ಮುರಿದ ಚಿರಂಜೀವಿ:ಭೋಲಾ ಶಂಕರ್; ಸಿನಿಮಾದ ನಷ್ಟವೆಷ್ಟು?

ಚಿರಂಜೀವಿ ನಟನೆಯ ‘ಗಾಡ್ ಫಾದರ್’ ಸೋತಿತು. ‘ವಾಲ್ತೇರು ವೀರಯ್ಯ’ ಮಿಶ್ರಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾದಲ್ಲಿ ರವಿತೇಜ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಭೋಲಾ ಶಂಕರ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ. ಚಿರಂಜೀವಿ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಸಿನಿಮಾ ಮಾಡಲಿ ಎಂದು ಅನೇಕರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:03 am, Fri, 18 August 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್