- TV9 Kannada Kannada News Photos Janhvi Kapoor Uploaded her new photo wearing coat like her mom Sridevi
Janhvi Kapoor: ಅಮ್ಮನಂತೆ ಕೋಟು ಧರಿಸಿ ಫೋಸು ಕೊಟ್ಟ ಶ್ರೀದೇವಿ ಪುತ್ರಿ ಜಾನ್ಹವಿ
Janhvi Kapoor: ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್, ಶ್ರೀದೇವಿ 'ಇಂಗ್ಲಿಷ್-ವಿಂಗ್ಲಿಷ್' ಸಿನಿಮಾದಲ್ಲಿ ತೊಟ್ಟಿದ್ದ ಕೋಟ್ ಮಾದರಿಯ ಕೋಟ್ ಧರಿಸಿ ಅಮ್ಮನಂತೆ ಫೋಸು ಕೊಟ್ಟಿದ್ದಾರೆ.
Updated on: Aug 17, 2023 | 11:36 PM

ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಥೇಟ್ ಅಮ್ಮನಂತೆಯೇ, ಅಮ್ಮನ ಹಾಗೆ ಕೋಟು ಧರಿಸಿ ಫೋಸು ಕೊಟ್ಟಿದ್ದಾರೆ.

ಜಾನ್ಹವಿ ಕಪೂರ್ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟರೆ ತುಸು ಶ್ರೀದೇವಿಯಂತೆ ಕಾಣುತ್ತಾರೆ.

ಆದರೆ ಜಾನ್ಹವಿಗೆ ಮಾಡರ್ನ್ ಉಡುಗೆಗಳೇ ಹೆಚ್ಚು ಇಷ್ಟ. ಸದಾ ಗ್ಲಾಮರಸ್ ಉಡುಗೆಗಳನ್ನು ತೊಡುತ್ತಾರೆ.

ಜಾನ್ಹವಿ ಕಪೂರ್ ನಟಿಯಾಗಿರುವ ಜೊತೆಗೆ ಮಾಡೆಲ್ ಸಹ ಫ್ಯಾಷನ್ ಶೋ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ

ಜಾನ್ಹವಿಯ ಇತ್ತೀಚೆಗಿನ ಸಿನಿಮಾ 'ಬವಾಲ್' ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿತ್ತು, ಸಿನಿಮಾ ಫ್ಲಾಪ್ ಎನಿಸಿಕೊಂಡಿತು.

ಜಾನ್ಹವಿ ಕಪೂರ್ ದಕ್ಷಿಣ ಭಾರತಕ್ಕೂ ಎಂಟ್ರಿ ಕೊಟ್ಟಿದ್ದು ಜೂ ಎನ್ಟಿಆರ್ ಜೊತೆ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಜಾನ್ಹವಿ ಕಪೂರ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಖಿಲ್ ಅಕ್ಕಿನೇನಿ ಆ ಸಿನಿಮಾದ ನಾಯಕ.

ಬಾಲಿವುಡ್ನಲ್ಲಿಯಂತೂ ಜಾನ್ಹವಿ ಕಪೂರ್ ಬಹಳ ಬ್ಯುಸಿ ಯುವಟಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



