Electric Jacket: ಚಳಿಗಾಲದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ ಎಲೆಕ್ಟ್ರಿಕ್ ಜಾಕೆಟ್ಗಳು; ಇದರ ಬೆಲೆ ಎಷ್ಟು ಗೊತ್ತಾ?
ಚಳಿಯಿಂದ ದೂರವಿರಲು ಮನೆಯಲ್ಲಿ ರೂಮ್ ಹೀಟರ್ ಅಳವಡಿಸಿದಂತೆ, ಹೊರಗಡೆ ಪ್ರಯಾಣಿಸುವಾಗ ಚಳಿಯಿಂದ ದೂರವಿರಲು ಎಲೆಕ್ಟ್ರಿಕ್ ಜಾಕೆಟ್ ಖರೀದಿಸಬಹುದು. ಈ ಎಲೆಕ್ಟ್ರಿಕ್ ಜಾಕೆಟ್‌ಗಳನ್ನು ಆನ್ಲೈನ್ನಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದೆ. ಇದರ ವಿಶೇಷತೆ ಏನು ಹಾಗೂ ಬೆಲೆ ಎಷ್ಟು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಳಿಗಾಲ ಬಂತೆಂದರೆ ಎಲ್ಲರೂ ಸ್ವೆಟರ್, ಜಾಕೆಟ್ ಧರಿಸಲು ಶುರು ಮಾಡುತ್ತಾರೆ ಆದರೆ ಜಾಕೆಟ್ ಹಾಕಿಕೊಂಡ ಮೇಲೂ ಚಳಿ ಅನಿಸಿದರೆ ನೀವೇ ಎಲೆಕ್ಟ್ರಿಕ್ ಜಾಕೆಟ್ ಖರೀದಿಸಬಹುದು. ಸಾಮಾನ್ಯವಾಗಿ ಚಳಿಗಾಲದಲ್ಲಿ ಮನೆಯೊಳಗೆ ರೂಮ್ ಹೀಟರ್ಗಳನ್ನು ಬಳಸಿದ ರೀತಿಯಲ್ಲಿಯೇ, ನೀವು ಹೊರಗಡೆ ಹೋಗುವಾಗ ಈ ಎಲೆಕ್ಟ್ರಿಕ್ ಜಾಕೆಟ್ ಧರಿಸಬಹುದಾಗಿದೆ. ಇದು ನಿಮ್ಮ ದೇಹವನ್ನು ಚಳಿಯಲ್ಲೂ ಬೆಚ್ಚಗಾಗಿಸುತ್ತದೆ. ಚಳಿಗಾಲದಲ್ಲಿ ಉಪಯುಕ್ತವಾಗಿರುವ ಈ ಎಲೆಕ್ಟ್ರಿಕ್ ಜಾಕೆಟ್ 5 ಹೀಟಿಂಗ್ ಝೋನ್‌ಗಳನ್ನು ಹೊಂದಿದೆ ಅಂದರೆ ಈ ಜಾಕೆಟ್ ನಿಮಗೆ ಐದು ವಿಭಿನ್ನ ಸ್ಥಳಗಳಿಂದ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಇದಲ್ಲದೆ, ಈ ಜಾಕೆಟ್‌ನಲ್ಲಿ ತಾಪಮಾನ ಸೆಟ್ಟಿಂಗ್ ಆಯ್ಕೆಯೂ ಲಭ್ಯವಿದೆ. ಈ ಎಲೆಕ್ಟ್ರಿಕ್ ಜಾಕೆಟ್‌ಗಳನ್ನು ಆನ್ಲೈನ್ನಲ್ಲಿ ಖರೀದಿಸಬಹುದಾಗಿದೆ. ಇದರ ವಿಶೇಷತೆ ಏನು ಹಾಗೂ ಬೆಲೆ ಎಷ್ಟು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಎಲೆಕ್ಟ್ರಿಕ್ ಜಾಕೆಟ್‌ನ ವಿಶೇಷತೆ ಏನು?
ಈ ಎಲೆಕ್ಟ್ರಿಕ್ ಜಾಕೆಟ್ ನೀವು ಆನ್ಲೈನ್ನಲ್ಲಿ ಖರೀದಿ ಮಾಡಬಹುದು. ಜೊತೆಗೆ ಚಳಿಗಾಲದಲ್ಲಿ ವಿಶೇಷ ಆಫರ್ಗಳೊಂದಿಗೆ ನೀವಿದನ್ನು ಖರೀದಿಸಬಹುದಾಗಿದೆ. ಸಾಕಷ್ಟು ಬ್ರಾಂಡ್ಗಳಲ್ಲಿ ಈ ಜಾಕೆಟ್ ಲಭ್ಯವಿದೆ. ಈ ಎಲೆಕ್ಟ್ರಿಕ್ ಜಾಕೆಟ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟು 5 ಕಾರ್ಬನ್ ಫೈಬರ್ ಹೀಟಿಂಗ್ ಪ್ಯಾಡ್‌ಗಳನ್ನು ಒದಗಿಸಲಾಗಿದ್ದು ಅದು ನಿಮ್ಮನ್ನು ಬೆಚ್ಚಗಾಗಿಸುತ್ತದೆ. ತಾಪನ ಮಟ್ಟವನ್ನು ಸರಿಹೊಂದಿಸಲು, ಮೂರು ತಾಪಮಾನ ಸೆಟ್ಟಿಂಗ್ಗಳನ್ನು ಸಹ ಒದಗಿಸಲಾಗಿದೆ, ಜಾಕೆಟ್ನಲ್ಲಿ ನೀಡಲಾದ ಎಲ್ಇಡಿ ಬಟನ್ ಅನ್ನು ನಿಮಗೆ ಬೇಕಾದಷ್ಟು ತಾಪಮಾನದಲ್ಲಿ ಇಟ್ಟುಕೊಳ್ಳಬಹುದು. ಜೊತೆಗೆ ಈ ಜಾಕೆಟನ್ನು ಸುಲಭವಾಗಿ ನೀರಿನಿಂದ ತೊಳೆಯಬಹುದಾಗಿದೆ.
ಇದನ್ನೂ ಓದಿ: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? ಇಂದೇ ಬಿಟ್ಟು ಬಿಡಿ
ಎಲೆಕ್ಟ್ರಿಕ್ ಜಾಕೆಟ್‌ನ ಬೆಲೆ ಎಷ್ಟು?
ವಿವಿಧ ಬ್ರಾಂಡ್ಗಳಲ್ಲಿ ಜಾಕೆಟ್ಗಳು ಲಭ್ಯವಿರುವುದರಿಂದ ಗುಣಮಟ್ಟಗಳಿಗೆ ಅನುಗುಣವಾಗಿ ಬೆಲೆಯು ಭಿನ್ನವಾಗಿರುತ್ತದೆ. ಈಗ ಆನ್ಲೈನ್ ಮಾರುಕಟ್ಟೆಗಳಲ್ಲಿ ನೀವು ರಿಯಾಯಿತಿಯ ದರದಲ್ಲಿ ಖರೀದಿಸಬಹುದಾಗಿದೆ. ಈ ಜಾಕೆಟ್ ಬ್ರಾಂಡ್ಗಳಿಗೆ ಅನುಗುಣವಾಗಿ 10,000 ದಿಂದ ಪ್ರಾರಂಭವಾಗಿ 25,000 ರೂಪಾಯಿಗಳ ವರೆಗೆ ಬೆಲೆಯನ್ನು ಹೊಂದಿದೆ.
ಗಮನಿಸಿ: ಈ ಲೇಖನವು ಮಾಹಿತಿಗಾಗಿ ಮಾತ್ರ, ಯಾವುದೇ ಆನ್ಲೈನ್ ಮಾರುಕಟ್ಟೆಯಿಂದ ಎಲೆಕ್ಟ್ರಿಕ್ ಜಾಕೆಟ್ ಖರೀದಿಸುವ ಮೊದಲು, ಜಾಕೆಟ್ ಬಗ್ಗೆ ಜನರು ನೀಡಿದ ವಿಮರ್ಶೆಗಳನ್ನು ಖಂಡಿತವಾಗಿ ಓದಿ. ವಿಮರ್ಶೆಯನ್ನು ಓದಿದ ನಂತರ ಜಾಕೆಟ್ ಖರೀದಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: