ಹಣ ಪಾವತಿಸಿ ಮೊಬೈಲ್ ಬುಕ್ ಮಾಡಿದರೆ ಸಿಕ್ಕಿದ್ದು ರಟ್ಟಿನ ಚೂರುಗಳು.. ಆನ್ಲೈನ್ ಶಾಪಿಂಗ್ ಗ್ರಾಹಕರೇ ಎಚ್ಚರ!
Online Shopping: ಕಡಿಮೆ ದರಕ್ಕೆ ಇದೆ ಎಂದು ಯಾವ್ಯಾವುದೋ ಆನ್ಲೈನ್ ಶಾಪಿಂಗ್ ಸೈಟ್ಗಳಿಗೆ ಮಾರು ಹೋಗಬೇಡಿ. ಸಿಕ್ಕ ಲಿಂಕ್ಗಳನ್ನೆಲ್ಲಾ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಈ ಎಚ್ಚರಿಕೆಯ ಅಗತ್ಯ ಏನು ಎಷ್ಟು ಎಂಬುದು ಮತ್ತೆ ಸಾಬೀತಾಗಿದೆ.
ತುಮಕೂರು: ಆನ್ಲೈನ್ನಲ್ಲಿ ವಸ್ತುಗಳನ್ನ ಖರೀದಿಸುವ ಮುನ್ನ ಎಚ್ಚರ ಎಚ್ಚರ! ಹೌದು, ಆನ್ಲೈನ್ ಶಾಪಿಂಗ್ ಜಾಲದಲ್ಲಿ ಸಿಲುಕಿ ಮೋಸ ಹೋಗದಿರುವುದು ಬಹಳ ಮುಖ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಸಮಸ್ಯೆ ಎದುರಾಗಬಹುದು. ಕಡಿಮೆ ದರಕ್ಕೆ ಇದೆ ಎಂದು ಯಾವ್ಯಾವುದೋ ಆನ್ಲೈನ್ ಶಾಪಿಂಗ್ ಸೈಟ್ಗಳಿಗೆ ಮಾರು ಹೋಗಬೇಡಿ. ಸಿಕ್ಕ ಲಿಂಕ್ಗಳನ್ನೆಲ್ಲಾ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಈ ಎಚ್ಚರಿಕೆಯ ಅಗತ್ಯ ಏನು ಎಷ್ಟು ಎಂಬುದು ಮತ್ತೆ ಸಾಬೀತಾಗಿದೆ. ಇಲ್ಲೊಬ್ಬರು ಗ್ರಾಹಕರು ಆನ್ಲೈನ್ ಶಾಪಿಂಗ್ ಮಾಡಿ ಮೋಸ ಹೋಗಿದ್ದಾರೆ. ಬುಕಿಂಗ್ ಮಾಡಿದ ವಸ್ತು ಬದಲು ಬೇರೆ ವಸ್ತು ಬಂದಿದೆ. ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ನಿವಾಸಿ ಸುಬಾನುಲ್ಲಾ ಎಂಬವರು ಮುಂಗಡವಾಗಿ ಹಣ ಪಾವತಿಸಿ ಮೊಬೈಲ್ ಬುಕ್ ಮಾಡಿದ್ದರು. ಆದ್ರೆ ಪಾರ್ಸಲ್ ಬಾಕ್ಸ್ನಲ್ಲಿ ಬಂದಿದ್ದು ರಟ್ಟಿನ ಚೂರುಗಳು! ₹3,855 ಮೌಲ್ಯದ ಮೊಬೈಲ್ ಬುಕ್ ಮಾಡಿದ್ದ ಸುಬಾನುಲ್ಲಾಗೆ ಬಾಕ್ಸ್ನಲ್ಲಿ ರಟ್ಟಿನ ಚೂರುಗಳು ಸಿಕ್ಕಿವೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬುಕ್ಕಿಂಗ್ ಪಾರ್ಸೆಲ್ ಮೂಲಕ ನಿಮಗೆ ಟೋಪಿ ಹಾಕ್ತಾರೆ. ಜಾಹೀರಾತು ನಂಬಿ ಮೋಸಹೋಗಬೇಡಿ. ಸಾಮಾಜಿಕ ಜಾಲತಾಣದಲ್ಲಿ ಇರುವ ಮಾರುಕಟ್ಟೆಯನ್ನೂ ಅಂಧವಾಗಿ ನಂಬಬೇಡಿ. ನೀವು ಬುಕ್ ಮಾಡೋದೆ ಒಂದು ನಿಮ್ಮ ಮನೆ ಬಾಗಿಲಿಗೆ ಬರೋದೆ ಮತ್ತೊಂದು. ಇಲ್ಲಿ ನಡೆದ ಘಟನೆಯಲ್ಲಿ ಬೆಲೆಬಾಳುವ ಸ್ಯಾಮ್‌ಸಂಗ್ ಕಂಪನಿಯ ಮೊಬೈಲ್ ಅನ್ನು 1,395 ರೂಪಾಯಿ ರಿಯಾಯಿತಿಗೆ ನೀಡುತ್ತೇವೆ ಎಂದು ಆನ್ಲೈನ್ನಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆ, ಸುಬಾನುಲ್ಲಾ ಮೊಬೈಲ್ ಬುಕ್ಕಿಂಗ್ ಮಾಡಿ ಮುಂಗಡವಾಗಿ ಹಣವನ್ನು ಪಾವತಿ ಮಾಡಿದ್ದರು. ಹಣ ಪಾವತಿ ಮಾಡಿ ಬುಕ್ಕಿಂಗ್ ಮಾಡಿದ ಎರಡು ದಿನಕ್ಕೆ ಮನೆಗೆ ಪಾರ್ಸೆಲ್ ಬಾಕ್ಸ್ ಬಂದಿದೆ. ಆದರೆ, ಪಾರ್ಸಲ್ ಬಾಕ್ಸ್ ತೆಗೆದು ನೊಡಿದಾಗ ರಟ್ಟಿನ ಚೂರುಗಳು ಕಂಡುಬಂದಿದೆ. ಮೊಬೈಲ್ ಬದಲು ಪಾರ್ಸೆಲ್ ಬಾಕ್ಸ್ ನಲ್ಲಿ ರಟ್ಟಿನ ಚೂರುಗಳನ್ನ ಹಾಕಿ ಮೋಸ ಮಾಡಲಾಗಿದೆ.
ತುಮಕೂರು: ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ; ಎರಡು ಹಸು ಒಂದು ಕರು ಮೂರು ನಾಯಿ ಸಾವು
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊದಲೂರು ಗ್ರಾಮದ ಚಂದ್ರಯ್ಯ ಎಂಬುವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಎರಡು ಸೀಮೆ ಹಸು ಹಾಗೂ ಒಂದು ಕರು ಬೆಂಕಿಗಾಹುತಿ ಆಗಿದೆ. ಎರಡು ಹಸು ಒಂದು ಕರು ಮೂರು ನಾಯಿ, 1500 ಕೊಬ್ಬರಿ ಬೆಂಕಿಗಾಹುತಿ ಆಗಿದೆ. ಸೂಕ್ತ ಪರಿಹಾರ ನೀಡುವಂತೆ ರೈತ ಚಂದ್ರಯ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಘಟನೆ ಹಿನ್ನೆಲೆ ಲಕ್ಷಾಂತರ ನಷ್ಟವಾಗಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು: ಗಾಂಜಾ ಮಾರಾಟ ಯುವಕನ ಬಂದನ
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ರಾಘವೇಂದ್ರ ಸ್ವಾಮಿ ದೇವಾಲಯ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ ಮಾಡಲಾಗಿದೆ. ಗಾಂಜಾ ಮಾರುತ್ತಿದ್ದ ವೇಳೆ ಅಬಕಾರಿ ನಿರಿಕ್ಷಕ ನಾಗರಾಜ್ ದಾಳಿ ಮಾಡಿ ಬಂಧಿಸಿದ್ದಾರೆ. ಬಂದಿತನಿಂದ 225 ಗ್ರಾಮ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಡಗು: ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ
ಕೊಡಗು ಜಿಲ್ಲೆಯ ವಿರಾಜಪೇಟೆ ನಗರದ ಪಂಜರ್ ಪೇಟೆಯಲ್ಲಿ ಕಾರ್ಯಾಚರಣೆ ನಡೆಸಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ ಹಿಡಿಯಲಾಗಿದೆ. ಸಿಐಡಿ ಅರಣ್ಯ ಪೊಲೀಸ್ ದಳದಿಂದ ಕಾರ್ಯಾಚರಣೆ ನಡೆಸಲಾಗಿದೆ. ಮೈಸೂರು ಜಿಲ್ಲೆ ಹೆಚ್ಡಿಕೋಟೆಯ ರವಿ (40) ಬಂಧಿತ ಆರೋಪಿ. ಆರೋಪಿಯಿಂದ ಮೂರು ಕೊಂವುಗಳನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿಮೇರೆ ಅರಣ್ಯ ಸಂಚಾರಿ ದಳದಿಂದ ದಾಳಿ ನಡೆಸಿ ಬಂಧಿಸಿದ್ದಾರೆ.
ಗದಗ: ಹೊತ್ತಿ ಉರಿದ ಮೇವಿನ ಬಣವೆಗಳು
ಗದಗ ಜಿಲ್ಲೆ ರೋಣದಲ್ಲಿ ಮೇವಿನ ಬಣವೆಗಳು ಹೊತ್ತಿ ಉರಿದ ಘಟನೆ ನಡೆದಿದೆ. ರೋಣ ಪಟ್ಟಣದ ಬಾದಾಮಿ ರಸ್ತೆಯಲ್ಲಿ ತಡರಾತ್ರಿ ದುರ್ಘಟನೆ ಸಂಭವಿಸಿದೆ. ಪೆಟ್ರೋಲ್ ಬಂಕ್ ಹಿಂಭಾಗದಲ್ಲಿದ್ದ 14- 20 ಬಣವೆಗಳು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: Crime News: ರಾತ್ರಿ ಬಸ್ನಲ್ಲಿ ಮೈ-ಕೈ ಮುಟ್ಟಿದವನಿಗೆ ಪಿನ್ನಲ್ಲಿ ಚುಚ್ಚಿ, ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ
ಇದನ್ನೂ ಓದಿ: Bengaluru Crime: ವಾಕಿಂಗ್ ಮಾಡುವ ಮಹಿಳೆಯರ ಪೋಟೋ ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿಯ ಬಂಧನ
Published On - 11:09 am, Sat, 9 April 22