ದೇಶಕ್ಕೆ 100 ಜನ ಮೋದಿ ಬಂದರೂ ಯಾರನ್ನು ದೇಶ ಬಿಡಿಸಲು ಸಾಧ್ಯವಿಲ್ಲ; ಎಲ್ಲರೂ ಸಮಾನವಾಗಿ ಬದುಕುವ ಹಕ್ಕಿದೆ -ಗುಬ್ಬಿ ಶಾಸಕ ಶ್ರೀನಿವಾಸ್

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿರಿವಾರದ ಗಳಗ ಗ್ರಾಮದಲ್ಲಿ ನಡೆದ ಮೆಹಬೂಬ ಸುಬಾನಿ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ್, ದೇಶದಲ್ಲಿ ಸ್ವಾಭಿಮಾನದಿಂದ ಬದುಕಲು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದಲ್ಲಿ ಹಕ್ಕಿದೆ. ಇಲ್ಲಿ ಯಾರನ್ನ ಯಾರು ಸಹ ಏನು ಮಾಡಲು ಸಾಧ್ಯವಿಲ್ಲ.

ದೇಶಕ್ಕೆ 100 ಜನ ಮೋದಿ ಬಂದರೂ ಯಾರನ್ನು ದೇಶ ಬಿಡಿಸಲು ಸಾಧ್ಯವಿಲ್ಲ; ಎಲ್ಲರೂ ಸಮಾನವಾಗಿ ಬದುಕುವ ಹಕ್ಕಿದೆ -ಗುಬ್ಬಿ ಶಾಸಕ ಶ್ರೀನಿವಾಸ್
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್
Follow us
TV9 Web
| Updated By: ಆಯೇಷಾ ಬಾನು

Updated on:Apr 10, 2022 | 9:16 AM

ತುಮಕೂರು: ದೇಶಕ್ಕೆ 100 ಜನ ಮೋದಿ ಬಂದರೂ ಯಾರನ್ನು ದೇಶ ಬಿಡಿಸಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯ ಯಾವುದೇ ಕೋಮು ದ್ವೇಷಕ್ಕೆ ಬಲಿಯಾಗದೆ ತಾಳ್ಮೆಯಿಂದ ಇರಬೇಕು ಎಂದು ಮುಸ್ಲಿಂ ಸಮುದಾಯ‌ದ ಮುಖಂಡರು ಹಾಗೂ ಸಾರ್ವಜನಿಕರಿಗೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿರಿವಾರದ ಗಳಗ ಗ್ರಾಮದಲ್ಲಿ ನಡೆದ ಮೆಹಬೂಬ ಸುಬಾನಿ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ್, ದೇಶದಲ್ಲಿ ಸ್ವಾಭಿಮಾನದಿಂದ ಬದುಕಲು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದಲ್ಲಿ ಹಕ್ಕಿದೆ. ಇಲ್ಲಿ ಯಾರನ್ನ ಯಾರು ಸಹ ಏನು ಮಾಡಲು ಸಾಧ್ಯವಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಪ್ರತಿಯೊಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸವನ್ನ ಮಾಡ್ತಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ಮಾಡ್ತಿದೆ. ತಲೆ ಕೆಟ್ಟ ಸ್ವಾಮಿಯೊಬ್ಬ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡ್ತಾರೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನರು ಕೆತ್ತಿರುವ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಬಾರದು ಅಂತ ಹೇಳಿಕೆ ನೀಡ್ತಾನೆ.

ನಮ್ಮ ಗುಬ್ಬಿ ತಾಲೂಕಿನಲ್ಲಿ ಶೇಕಡಾ 99ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದ ಕಲ್ಲು ಕೆತ್ತನೆಗಾರರು ವಿಗ್ರಹಗಳಿಗೆ ರೂಪ ನೀಡಿದ್ದಾರೆ. ಚುನಾವಣೆ ಹತ್ರ ಬರ್ತಿದ್ದಂತೆ ಪ್ರತಿನಿತ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಕೆಲವರು ಹೇಳಿಕೆ ಕೊಡ್ತಿದ್ದಾರೆ. ಅದ್ಯಾವುದಕ್ಕು ಮುಸ್ಲಿಂ ಸಮುದಾಯ ಕಿವಿ ಕೊಡಬಾರದು, ನನ್ನ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಯಾವುದೇ ತರಹದ ಸಮಸ್ಯೆ ಆಗಲು ನಾನು ಬಿಡುವುದಿಲ್ಲ. ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಹಕ್ಕಿದೆ. ಅದನ್ನ ಬಿಟ್ಟು ಈ ಬಡ್ಡಿ ಮಕ್ಕಳು ಸುಖಾಸುಮ್ಮನೆ ತೊಂದರೆ ಕೊಡ್ತಾರೆ ಎಂದು ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಗುಬ್ಬಿ ಶಾಸಕ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ರು.

ಮೋದಿಗೆ ಸಂಸಾರವಿಲ್ಲ, ಅವರಿಗೇನು ಬೆಲೆ ಏರಿಕೆ ಗೊತ್ತಾಗತ್ತೆ ಇನ್ನು ಮೋದಿಗೆ ಸಂಸಾರವಿಲ್ಲ. ಅವರಿಗೇನು ಬೆಲೆ ಏರಿಕೆ ಗೊತ್ತಾಗತ್ತೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರ ವ್ಯಂಗ್ಯವಾಡಿದ್ದಾರೆ. ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ ಲತಾ, ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.

ಮೊದಲು‌ ಗ್ಯಾಸ್ ಫ್ರೀ ಕೊಡ್ತೀನಿ ಅಂತಾ ಆಸೆ ತೋರಿಸಿದ್ರು. ಆ ಮೇಲೆ ಸಬ್ಸಿಡಿ ಕೊಡ್ತೀನಿ ಅಂತಾ ಆಸೆ ತೋರಿಸಿದ್ರು. ಇದೀಗ ಸಿಲಿಂಡರ್ ಬೆಲೆ 1000 ದಾಟಿದೆ. ಮೋದಿ ಅವರಿಗೆ ಇದ್ಯಾವುದೂ ಗೊತ್ತಾಗಲ್ಲ. ಅವರಿಗೆ ಸಂಸಾರ ಇಲ್ಲ ಎಂದು ಲತಾ ಚಿನ್ನೂರ ವ್ಯಂಗ್ಯವಾಡಿದ್ದಾರೆ. ಕೊಪ್ಪಳದ ಅಶೋಕ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರ ಮೋದಿ ವಿರುದ್ದ ವ್ಯಂಗ್ಯವಾಡಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಏಪ್ರಿಲ್ 22ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ; ಪಿಯುಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ

ಚಾಮುಂಡಿ ಬೆಟ್ಟದಲ್ಲಿ ರೋಪ್ವೇ ಅಗತ್ಯವಿಲ್ಲ; ಸರ್ಕಾರಕ್ಕೆ ಗಣ್ಯರ ಮೂಲಕ ಪತ್ರ ಬರೆಸಲು ಮುಂದಾದ ಚಾಮುಂಡಿಬೆಟ್ಟ ಉಳಿಸಿ ಸಮಿತಿ

Published On - 9:15 am, Sun, 10 April 22