Viral Video: ಕಾರು ಚಾಲಕನ ಸಣ್ಣ ತಪ್ಪು, ಸ್ಕೂಟಿ ಚಾಲಕನ ಪ್ರಾಣಕ್ಕೆ ಕುತ್ತು ತಂತು; ವಿಡಿಯೋ ವೈರಲ್​​

ರಸ್ತೆ ಅಪಘಾತದ ಹೃದಯ ವಿದ್ರಾವಕ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಒಂದು ಕ್ಷಣಕ್ಕೆ ನಿಮಗೆ ನಡುಕ ಹುಟ್ಟಿಸುವುದಂತೂ ಖಂಡಿತಾ. ವೈರಲ್​ ವಿಡಿಯೋ ಇಲ್ಲಿದೆ ನೋಡಿ.

Viral Video: ಕಾರು ಚಾಲಕನ ಸಣ್ಣ ತಪ್ಪು, ಸ್ಕೂಟಿ ಚಾಲಕನ ಪ್ರಾಣಕ್ಕೆ ಕುತ್ತು ತಂತು; ವಿಡಿಯೋ ವೈರಲ್​​
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on: Nov 08, 2023 | 11:46 AM

ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು. ಕೆಲವೊಮ್ಮೆ ನೀವು ಮಾಡುವ ಸಣ್ಣ ತಪ್ಪು ಇಲ್ಲೊಬ್ಬರ ಜೀವಕ್ಕೆ ಕುತ್ತು ತರಬಹುದು. ಅಂತದ್ದೇ ವಿಡಿಯೋ ಒಂದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಎಲ್ಲೆಂದರಲ್ಲಿ ಕಾರು ನಿಲ್ಲಿಸಿ, ಕೆಲವೊಮ್ಮೆ ರಸ್ತೆಬದಿಯಲ್ಲಿ ನಿಲ್ಲಿಸಿ ಹಿಂದಿನಿಂದ ಬರುವ ವಾಹನಗಳತ್ತ ಕಣ್ಣು ಹಾಯಿಸದೆ, ಕಾರು ಬಾಗಿಲು ತೆರೆದು ಕೆಳಗಿಳಿಯಲು ಯತ್ನಿಸುವ ಕೆಲವರನ್ನು ನೀವು ಗಮನಿಸಿರಬಹುದು. ಇದು ಎಷ್ಟು ಅಪಾಯಕಾರಿ ಎಂಬುದನ್ನು ಈ ವೈರಲ್ ವೀಡಿಯೊದಲ್ಲಿ ಕಾಣಬಹುದು.

ವಿಡಿಯೋದಲ್ಲಿ ರಸ್ತೆಬದಿಯಲ್ಲಿ ಕಾರು ನಿಂತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಒಬ್ಬ ಸ್ಕೂಟಿಯಲ್ಲಿ ಹಿಂದಿನಿಂದ ಬರುತ್ತಾನೆ. ಆದರೆ ಕಾರಿನಲ್ಲಿ ಕುಳಿತವನು ಯಾರು ಬರುತ್ತಿದ್ದಾರೆಂದು ಹಿಂದೆ ನೋಡದೆ ಕಾರು ಡೋರ್​​​ ತೆಗೆದು ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ, ಕೂಡಲೇ ಹಿಂದಿನಿಂದ ಬಂದ ಸ್ಕೂಟಿ ಚಾಲಕ ಕಾರಿನ ಡೋರ್​​ ತಾಗಿ ರಸ್ತೆಗೆ ಬೀಳುತ್ತಾನೆ. ಆಗಲೇ ಮುಂದಿನಿಂದ ವೇಗವಾಗಿ ಬಂದ ವಾಹನ ಸ್ಕೂಟಿ ಚಾಲಕ ಮೈ ಮೇಲೆ ಹಾದು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಎದೆ ನಡುಕ ಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ  ಓದಿ: ಮದುವೆಯಾದ 6 ತಿಂಗಳಿಗೆ ಪತಿಗೆ ವಿಚ್ಛೇದನ ನೀಡಿದ ಪತ್ನಿ; ಕಾರಣ ತಿಳಿದರೆ ನೀವು ಶಾಕ್​​ ಆಗುದಂತೂ ಖಂಡಿತಾ

ಟ್ವಿಟರ್‌ನಲ್ಲಿ @1000waystod1e ಎಂಬ ಖಾತೆಯಲ್ಲಿ ಈ ವಿಡಿಯೋ ನಿನ್ನೆ(ನ.07) ಹಂಚಿಕೊಂಡಿದ್ದು, ಇದೀಗಾಗಲೇ 7.6 ಮಿಲಿಯನ್ ಅಂದರೆ 76 ಲಕ್ಷ ಜನರು ವೀಕ್ಷಿಸಿದ್ದಾರೆ. ಇದಲ್ಲದೇ 10 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.ಅದೇ ಸಮಯದಲ್ಲಿ, ವೀಡಿಯೊವನ್ನು ನೋಡಿದ ನಂತರ, ಹಲವು ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘ಸ್ಕೂಟರ್ ಓಡಿಸುತ್ತಿದ್ದವರು ಬದುಕಿದ್ದಾರಾ?’ ಎಂದು ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ‘ಈ ವಿಡಿಯೋ ನಕಲಿ’ ಎಂದು ಕಾಮೆಂಟ್​ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ತೋರಿಸಿರುವ ಅಪಘಾತ ಅಸಲಿಯೋ, ನಕಲಿಯೋ ಎಂಬುದು ತಿಳಿದಿಲ್ಲ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ