Viral Video: ‘ಕಬ್ಬಿನ ಟೋಲ್’​ ಇಲ್ಲಿಯ ಆನೆಗಳಿಗೆ ಕೇಳಿ ಪಡೆಯುವ ಸುಖ ಗೊತ್ತು

Thailand: ಆನೆ ಮನೆಯ ಮೇಲೆ ದಾಳಿ ಮಾಡಿತು, ಮನುಷ್ಯರ ಮೇಲೆ ದಾಳಿ ಮಾಡಿತು, ಮರಗಳನ್ನು ಮುರಿಯಿತು ಹೀಗೆ ಆಗಾಗ ಕೇಳುತ್ತಲೇ ಇರುತ್ತೀರಿ. ಆದರೆ ಇದೆಲ್ಲದಕ್ಕೆ ವ್ಯತಿರಿಕ್ತ ಎನ್ನುವಂತೆ ಕಾಂಬೋಡಿಯಾ ಥೈಲ್ಯಾಂಡ್​ಗಳಲ್ಲಿರುವ ಆನೆಗಳು ವರ್ತಿಸುತ್ತವೆ. ರಸ್ತೆ ಬದಿಯಲ್ಲಿ ನಿಂತು ಟ್ರಕ್ ನಿಲ್ಲಿಸಿ ತಮಗೆ ಬೇಕಾದಷ್ಟು ಕಬ್ಬನ್ನು ತೆಗೆದುಕೊಳ್ಳುತ್ತವೆ. ಆ ಶಾಂತರೀತಿ ಇವುಗಳ ಮೇಲೆ ಮತ್ತಷ್ಟು ಮುದ್ದು ಬರಿಸುವಂತಿದೆ.

Viral Video: 'ಕಬ್ಬಿನ ಟೋಲ್'​ ಇಲ್ಲಿಯ ಆನೆಗಳಿಗೆ ಕೇಳಿ ಪಡೆಯುವ ಸುಖ ಗೊತ್ತು
ಪ್ರಾತಿನಿಧಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on: Nov 08, 2023 | 10:55 AM

Elephant: ಅನೇಕ ವಿಡಿಯೋಗಳಲ್ಲಿ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿರುವುದನ್ನು ನೋಡಿದ್ದೀರಿ. ಅದರಲ್ಲೂ ಕಬ್ಬು (Sugarcane) ತುಂಬಿದ ಟ್ರಕ್ ಕಂಡರೆ ತನ್ನದೇ ಸ್ವತ್ತು ಎಂಬಂತೆ ಟ್ರಕ್​ ತಡೆದುಬಿಡುತ್ತವೆ. ಡ್ರೈವರ್​​ ಗಾಬರಿಯಾಗದೆ ಟ್ರಕ್​ ನಿಲ್ಲಿಸಿದರೆ ತನಗೆ ಬೇಕಾದಷ್ಟು ಕಬ್ಬು ತೆಗೆದುಕೊಂಡು ಪಕ್ಕದಲ್ಲಿ ಸರಿಯುತ್ತವೆ ಇಲ್ಲವೇ ದಾರಿಯನ್ನು ಅಡ್ಡಗಟ್ಟುತ್ತವೆ. ಒಟ್ಟಿನಲ್ಲಿ ಸಹಕಾರ ತತ್ವ ಇದ್ದಲ್ಲಿ ಎಲ್ಲವೂ ಸುಗಮ. ಇದೀಗ ವೈರಲ್ ಆಗಿರುವ ವಿಡಿಯೋ ಕಾಂಬೋಡಿಯಾ ಮತ್ತು ಥೈಲ್ಯಾಂಡ್​ನದು. ರಸ್ತೆಬದಿ ನಿಂತಿರುವ ಆನೆ ಕಬ್ಬು ತುಂಬಿಕೊಂಡು ಬರುವ ಒಂದೊಂದೇ ಟ್ರಕ್​ಗಳನ್ನು ತಡೆದು ತನಗೆ ಬೇಕಾದಷ್ಟು ಕಬ್ಬನ್ನು ತೆಗೆದುಕೊಂಡು ಟ್ರಕ್​ ಮುಂದೆ ಹೋಗಲು ಅನುವು ಮಾಡಿ ಕೊಡುತ್ತಿದೆ.

ಇದನ್ನೂ ಓದಿ : Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋವನ್ನು ನವೆಂಬರ್ 7ರಂದು Xನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 4.7 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. ಸುಮಾರು 60,000 ಜನರು ಲೈಕ್ ಮಾಡಿದ್ದು, 7,300 ಜನರು ರೀಪೋಸ್ಟ್ ಮಾಡಿದ್ದಾರೆ. ಸುಮಾರು 800 ಜನರು ಪ್ರತಿಕ್ರಿಯಿಸಿದ್ದಾರೆ.

ಕಬ್ಬು ಕೊಡೋ ಟ್ರಕ್ಕಣ್ಣ!

ಇರಿ, ಆನೆಗಳೆಲ್ಲ ಗುಂಪಿನಲ್ಲಿ ಬಂದರೆ ನಿಮ್ಮ ಟ್ರಕ್​ ಗತಿ ಅಷ್ಟೇ ಎಂದಿದ್ದಾರೆ ಒಬ್ಬರು. ಟೋಲ್​ ಕಲೆಕ್ಟ್​ ಮಾಡುತ್ತಿರುವ ಆನೆ ಎಂದಿದ್ದಾರೆ ಒಬ್ಬರು. ದಾಳಿಮಾಡುವ ಆನೆ ನೋಡಿದ್ದೆ, ಹೀಗೆ ಶಾಂತರೀತಿಯಿಂದ ಕೇಳಿ ಪಡೆಯುವ ಆನೆಯನ್ನು ಈತನಕ ನೋಡಿದ್ದಿಲ್ಲ ಎಂದಿದ್ದಾರೆ ಇನ್ನೊಬ್ಬರು. ಸಮಾಧಾನವಾಗಿ ವ್ಯವಹರಿಸಿದರೆ ಎಂಥ ಸಮಸ್ಯೆಯನ್ನೂ ನೀಗಿಸಬಹುದು ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ

ಈ ಆನೆಗಳ ಮೇಲೆ ಮುದ್ದು ಉಕ್ಕಿಬರುತ್ತಿದೆ ಎಂದಿದ್ದಾರೆ ಒಬ್ಬರು. ಹೀಗೆ ಆನೆಗಳು ಕಬ್ಬಿನ ಗಳುವನ್ನು ಹಿರಿದುಕೊಂಡ ಮೇಲೆಯೇ ಡ್ರೈವರ್​ಗಳಿಗೆ ಒಂದು ರೀತಿ ಸಾರ್ಥಕ ಹೊಮ್ಮುವುದೇನೋ ಎಂದಿದ್ದಾರೆ ಇನ್ನೊಬ್ಬರು. ಇದು ಇಲ್ಲಿ ನಿತ್ಯವೂ ಕಂಡುಬರುವ ಸಾಮಾನ್ಯ ದೃಶ್ಯ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ