Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ

Animal Lovers: ರಕ್ತಸಂಬಂಧಿಕರಲ್ಲಿಯೂ ದ್ವೇಷ ಹೊಕ್ಕಾಡಿ ಬುಸುಗುಡುತ್ತಿದೆ. ಇನ್ನು ಅನ್ಯವರ್ಗದ ಪ್ರಾಣಿಗಳು ಸೌಹಾರ್ದ ಮತ್ತು ಸ್ನೇಹದಿಂದ ಇರಲು ಸಾಧ್ಯವೆ? ಖಂಡಿತ ಸಾಧ್ಯ ಎನ್ನುತ್ತಿದೆ ಈ ವಿಡಿಯೋ. ನಾಯಿ ಮತ್ತು ಜಿಂಕೆ 11 ವರ್ಷಗಳ ಸ್ನೇಹಿತರು. ಜಿಂಕೆ ತನ್ನ ಮರಿಗಳೊಂದಿಗೆ ನಾಯಿಯ ಮನೆಗೆ ಬಂದು ಬಾಗಿಲು ತಟ್ಟಿದೆ. ಮುಂದೆ ಏನಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೀವೇ ನೋಡಿಬೇಕು.

Viral Video: 'ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ' ಜಿಂಕೆ ನಾಯಿಗೆ ಕರೆದಾಗ
ನಾಯಿಯ ಮನೆಗೆ ಬಂದು ತನ್ನ ಮಕ್ಕಳನ್ನು ನೋಡಲು ಬಾ ಎಂದು ಕರೆಯುತ್ತಿರುವ ಜಿಂಕೆ
Follow us
ಶ್ರೀದೇವಿ ಕಳಸದ
|

Updated on:Nov 07, 2023 | 3:24 PM

Deer: ಟಕ್​ ಟಕ್​ ಟಕ್​, ಹೇಯ್​ ಫ್ರೆಂಡ್​ (Friend) ಬಾಗಿಲು ತೆಗೀ ಬೇಗ… ಬಾಗಿಲಿನಾಚೆ ಜಿಂಕೆ ನಿಂತಿರುವುದು ನಾಯಿಗೆ ಕಾಣುತ್ತದೆ. ಹನ್ನೊಂದು ವರ್ಷದ ಗೆಳತಿ ಇಂದು ತನ್ನ ಮನೆಯ ಬಾಗಿಲಿನಾಚೆ ನಿಂತಿದ್ದಾಳೆ. ಎಷ್ಟೋ ದಿನಗಳ ನಂತರ ಈಕೆ ಮನೆಗೆ ಬಂದಿದ್ದಾಳೆ. ಏನಿರಬಹುದು ವಿಶೇಷ ಎಂಬ ಕುತೂಹಲದಲ್ಲಿಯೇ ನಾಯಿ ಹೊರಹೋಗುತ್ತದೆ. ನೋಡಿದರೆ ಜಿಂಕೆಯ ಪುಟಾಣಿಗಳು! ಜಿಂಕೆ ತನ್ನ ಬೆಸ್ಟ್​ ಫ್ರೆಂಡ್​ಗೆ ತನ್ನ ಮಕ್ಕಳನ್ನು ಭೇಟಿ ಮಾಡಿಸಲು ಕರೆತಂದಿದ್ದಾಳೆ. ನಾಯಿ ಆಕೆಯ ಮಕ್ಕಳನ್ನು ತನ್ನವೇ ಮಕ್ಕಳೆಂಬಂತೆ ನೆಕ್ಕಿ ಮುದ್ದಿಸಿ ಅಚ್ಛಾ ಮಾಡುತ್ತದೆ. ಈ ವಿಡಿಯೋ ಅನೇಕ ನೆಟ್ಟಿಗರ ಮನಸೂರೆಗೊಂಡಿದೆ!

ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್​ಮಂದಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿನ್ನೆಯಷ್ಟೇ X ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಈತನಕ 6.7 ಲಕ್ಷ ಜನರು ನೋಡಿದ್ದಾರೆ. ಸುಮಾರು 2,000 ಜನರು ರೀಪೋಸ್ಟ್ ಮಾಡಿದ್ದಾರೆ. 16,000 ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ಬಹಳ ಮುದ್ದಾದ ವಿಡಿಯೋ, ಅನೇಕ ಸಲ ನೋಡುತ್ತಲೇ ಇರುವೆ ಎಂದಿದ್ದಾರೆ ಹಲವಾರು ಜನರು.

ತನ್ನ ಮಕ್ಕಳನ್ನು ಸ್ನೇಹಿತರನಿಗೆ ತೋರಿಸಲು ಬಂದ ಜಿಂಕೆಯ ವಿಡಿಯೋ

ನಿಜಕ್ಕೂ ಮನುಷ್ಯರೂ ಈ ವಿಡಿಯೋ ನೋಡಿ ನಾಚಬೇಕು ಎಂದಿದ್ದಾರೆ ಒಬ್ಬರು. ಭಾಷೆ, ನೀರು, ನೆಲ, ಬಣ್ಣ, ಮೇಲು ಕೀಳು, ಜಾತಿ, ಧರ್ಮ ಎಂದು ಕಿತ್ತಾಡುಕೊಳ್ಳುವ ಮನುಷ್ಯರು ಈ ವಿಡಿಯೋ ನೋಡಿ ನಾಚಿಕೆ ಪಡಬೇಕು ಎಂದಿದ್ದಾರೆ ಇನ್ನೊಬ್ಬರು. ಪ್ರಾಣಿಗಳ ಜಗತ್ತಿನಲ್ಲಿಯೂ ಸೌಹಾರ್ದತೆ ಇದೆ, ಆದರೆ ಮನುಷ್ಯ ಜಗತ್ತಿನಲ್ಲಿ? ಎಂದಿದ್ದಾರೆ ಮತ್ತೊಬ್ಬರು. ಅನ್ಯವರ್ಗದ ಪ್ರಾಣಿಗಳ ನಡುವೆ ಇರುವ ಸ್ನೇಹ ರಕ್ತಸಂಬಂಧವುಳ್ಳ ಮನುಷ್ಯರಲ್ಲಿಯೇ ಇಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಗದೊಬ್ಬರು.

ಇದನ್ನೂ ಓದಿ : Viral: ಮುಂಬೈ; ಕಳೆದುಕೊಂಡ ‘ಶಾಂತಿ’ ಹುಡುಕಲು ಪೊಲೀಸರ ಬಳಿ ಹೋಗುತ್ತಿದ್ದೇನೆ ಎಂದ ಮಹಿಳೆ; ಪೊಲೀಸರ ಉತ್ತರ ಇಲ್ಲಿದೆ

ಒಟ್ಟಿನಲ್ಲಿ ನೆಟ್ಟಿಗರ ಮನಸ್ಸನ್ನು ಈ ವಿಡಿಯೋ ಆರ್ದ್ರವಾಗಿಸಿದೆ. ಇಂಥ ಪ್ರಾಣಿಗಳೊಂದಿಗೆ ನಾನು ಬದುಕಲು ಇಷ್ಪಟಡುತ್ತೇನೆ ಎಂದಿದ್ದಾರೆ ಹಲವಾರು ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:22 pm, Tue, 7 November 23

ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್