Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್​ಮಂದಿ

ಬೆರಳ ಮೇಲೆ, ಕೈಮೇಲೆ, ತೋಳಮೇಲೆ, ಭುಜದ ಮೇಲೆ, ಕತ್ತಿನ ಮೇಲೆ, ಎದೆಯ ಮೇಲೆ, ಬೆನ್ನ ಮೇಲೆ, ಹೊಟ್ಟೆಯ ಮೇಲೆ ಹೀಗೆ ತಮಗೆ ಬೇಕಾದ ಜಾಗಗಳಲ್ಲಿ ತಮ್ಮ ಪ್ರೀತಿಪಾತ್ರರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಮುಖದ ಮೇಲೆ? ಅದರಲ್ಲೂ ಹಣೆಯ ಮೇಲೆ ದೊಡ್ಡದಾಗಿ? ಈ ಯುವತಿಯ ಟ್ಯಾಟೂ ನೋಡಿ ಇದು ನಕಲಿ ಎಂದು ನೆಟ್ಟಿಗರು. ಇಲ್ಲಾ, ನನ್ನ ನಂಬಿ ಪ್ಲೀಸ್​ ಎಂದು ಯುವತಿ.

Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್​ಮಂದಿ
ಪ್ರಿಯಕರನ ಹೆಸರು ಹಣೆಯ ಮೇಲೆ
Follow us
ಶ್ರೀದೇವಿ ಕಳಸದ
|

Updated on: Nov 07, 2023 | 2:28 PM

Tattoo: ಪ್ರೇಮದಲ್ಲಿ ಮುಳುಗಿರುವವರಿಗೆ ಪರಸ್ಪರ ತಾವೆಷ್ಟು ಪ್ರೀತಿಸುತ್ತೇವೆ ಎನ್ನುವುದನ್ನು ಗೊತ್ತುಮಾಡುವುದಕ್ಕಿಂತ ಪರಮ ಸಂತೋಷ ಯಾವುದೂ ಇರುವುದಿಲ್ಲವೇನೋ. ಅದಕ್ಕಾಗಿ ಅನೇಕರು ಸಾಯುವತನಕವೂ ತನ್ನೊಂದಿಗೆ ಆತನ ಅಥವಾ ಆಕೆಯ ಹೆಸರು ತನ್ನ ಮೈಮೇಲಿರಲಿ ಎಂದು ಹಚ್ಚೆ ಹಾಕಿಸಿಕೊಳ್ಳುವುದು ವಾಡಿಕೆ. ಕೈಮೇಲೆ, ಎದೆಮೇಲೆ, ಕುತ್ತಿಗೆಯ ಮೇಲೆ, ಹೊಟ್ಟೆಮೇಲೆ, ಬೆನ್ನಮೇಲೆ ಹೀಗೆ ಎಲ್ಲಿ ಬೇಕೋ ಅಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಹಣೆಯ ಮೇಲೆ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ  ಯುವತಿಯೊಬ್ಬಳು ತನ್ನ ಪ್ರಿಯಕರನ (Lover) ಹೆಸರನ್ನು ಹಣೆಯ ಮೇಲೆ ದೊಡ್ಡದಾಗಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದೆಂಥಾ ಮೂರ್ಖತನ, ಮನುಷ್ಯರು ಶಾಶ್ವತವೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಇದರ ಸತ್ಯಾಸತ್ಯೆತೆಯ ಬಗ್ಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ Viral Brain Teaser: ಕಾಣೆಯಾದ ಸಂಖ್ಯೆಯನ್ನು ಪತ್ತೆ ಹಚ್ಚುವಿರೇ? ಆದರೆ ಉತ್ತರ 6 ಅಲ್ಲ

ಇನ್‌ಸ್ಟಾಗ್ರಾಮ್​ನ ಕಂಟೆಂಟ್ ಕ್ರಿಯೇಟರ್​ ಎನಾ ಸ್ಟ್ಯಾನ್ಸ್‌ಕೊವ್ಸ್ಕಿ ತನ್ನ ಪ್ರಿಯಕರ ಕೆವಿನ್​ ಹೆಸರನ್ನು ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಯುವತಿ. ನಿನ್ನೆ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಈತನಕ ಸುಮಾರು 1,800 ಜನರು ನೋಡಿದ್ದಾರೆ. ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಇಂದು ನೋಡಿದ ಅತ್ಯಂತ ಮೂರ್ಖತನಕ ವಿಡಿಯೋ ಇದು ಎಂದಿದ್ದಾರೆ ಹಲವಾರು ಜನ. ಇದು ನಿಜವಾದ ಇಂಕ್​? ಎಂದಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಈ ಮೊಸಳೆಗೆ ಈ ಮನುಷ್ಯನನ್ನು ಮುದ್ದಾಡಬೇಕು ಎನ್ನಿಸಿತು, ಮುಂದೆ?

ಆಕೆ ತನ್ನ ಪ್ರಿಯಕರನನ್ನು ಮೆಚ್ಚಿಸಲು ತಮಾಷೆ ಮಾಡುತ್ತಿದ್ದಾಳೆ ಎಂದಿದ್ಧಾರೆ ಒಬ್ಬರು. ಆಕೆ ಕಂಟೆಂಟ್​ ಕ್ರಿಯೇಟರ್​ ಲೈಕ್ಸ್​, ಶೇರ್ಸ್​ಗಾಗಿ ಹೀಗೆ ನಕಲಿ ಶಾಯಿ ಬಳಸಿ ಟ್ಯಾಟೈ ಹಾಕಿಸಿಕೊಂಡಿದ್ದಾಳೆ ಎಂದಿದ್ದಾರೆ ಇನ್ನೊಬ್ಬರು. ಅನೇಕರು ಹೀಗೆ ಹೇಳಿದ್ದನ್ನು ನೋಡಿದ ಈ ಟ್ಯಾಟೂ ಹಾಕಿದ ಕಲಾವಿದ, ಆಕೆ ನಿಜಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದಾಳೆ, ಇದು ನಕಲಿ ಶಾಯಿ ಅಲ್ಲ ಎಂದಿದ್ದಾರೆ.

ಇದನ್ನೂ ಓದಿ : Viral: ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ

ಸ್ಟ್ಯಾನ್ಸ್‌ಕೊವ್ಸ್ಕಿ ಕೂಡ, ಇದು ನಿಜವಾಗಲೂ ನಾನು ಹಾಕಿಸಿಕೊಂಡ ಟ್ಯಾರೂ, ನಂಬಿ. ಈ ವಿಷಯವನ್ನು ನಾನು ನನ್ನ ತಾಯಿಗೆ ಈತನಕ ತಿಳಿಸಿಲ್ಲ. ಬಹುಶಃ ಆಕೆ ಕಂಗೆಡಬಹುದು ಎಂದಿದ್ದಾರೆ ಆಕೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ