Viral: ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ

Mother Sentiment: ನನ್ನ ಅಮ್ಮ ಹೇಗೆ ಅಡುಗೆ ಮಾಡುತ್ತಾಳೆ, ಹೇಗೆ ಸೀರೆ ಉಡುತ್ತಾಳೆ, ಹೇಗೆ ಎಲ್ಲವನ್ನೂ ಎಲ್ಲರನ್ನೂ ಸಂಭಾಳಿಸುತ್ತಾಳೆ, ಸದಾ ನಗುಮುಖದಿಂದಲೇ ಇರುತ್ತಾಳೆ... ಅಂತೆಲ್ಲ ಕ್ಷಣಕ್ಷಣವೂ ಹೆಂಡತಿಯನ್ನು ತಿವಿಯುತ್ತಿರುವ ಗಂಡಸರು ಮತ್ತು ಇದೇ ಆಶಯದಿಂದ ಮದುವೆಯಾಗಬೇಕೆಂದು ಕನಸು ಕಾಣುತ್ತಿರುವವರಿಗಾಗಿ ಇದು. ಉಳಿದವರೂ ಕಡ್ಡಾಯವಾಗಿ ಓದಿ.

Viral: ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Nov 03, 2023 | 2:58 PM

Marriage: ‘ನನ್ನ ಮದುವೆ ಡಿಸೆಂಬರ್​ನಲ್ಲಿದೆ. ನನ್ನ ಭಾವೀಪತಿ ನನಗೆ ಮತ್ತು ತನ್ನ ಅಮ್ಮನಿಗೆ (Mother) ಒಂದೇ ವಿನ್ಯಾಸದ ಆದರೆ ಬೇರೆ ಬೇರೆ ಬಣ್ಣದ ಸೀರೆಯನ್ನು ಖರೀದಿಸಬೇಕೆಂದು ದುಂಬಾಲು ಬಿದ್ದಿದ್ದಾನೆ. ಅವನ ಈ ವಿಚಿತ್ರ ಆಸೆಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ. ನನಗಿದು ಉಸಿರುಗಟ್ಟಿಸುತ್ತಿದೆ. ನನ್ನನ್ನು ಬಲವಂತ ಮಾಡಬೇಡ ನನಗಿದು ಇಷ್ಟವಿಲ್ಲ ಎಂದು ಹೇಳುತ್ತಲೇ ಇದ್ದೇನೆ. ಆದರೂ ಅವನು ಒತ್ತಾಯಿಸುತ್ತಿದ್ದಾನೆ ಅಷ್ಟೇ ಅಲ್ಲ, ನೀನು ಇದಕ್ಕೆ ಒಪ್ಪದಿದ್ದರೆ ಮದುವೆಯನ್ನೇ ನಿಲ್ಲಿಸುತ್ತೇನೆ ಎಂಬ ಬೆದರಿಕೆ ಹಾಕುತ್ತಿದ್ದಾನೆ. ಇದು ಸಂಸ್ಕೃತಿಯೇ?’ ಎಂದು ಕೇರಳದ ಯುವತಿಯೊಬ್ಬರು ರೆಡ್ಡಿಟ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ನೆಟ್ಟಿಗರು ಗಂಡಿನ ಈ ವರ್ತನೆಯ ಬಗ್ಗೆ ತೋಚಿದ ಸಲಹೆಗಳನ್ನು ನೀಡಿದ್ದಾರೆ.

ಇದನ್ನು ಓದಿ : Viral: ಮುಂಬೈ; ಕಳೆದುಕೊಂಡ ‘ಶಾಂತಿ’ ಹುಡುಕಲು ಪೊಲೀಸರ ಬಳಿ ಹೋಗುತ್ತಿದ್ದೇನೆ ಎಂದ ಮಹಿಳೆ; ಪೊಲೀಸರ ಉತ್ತರ ಇಲ್ಲಿದೆ

ಈ ಪೋಸ್ಟ್​ ಅನ್ನು ಮೂರು ತಾಸುಗಳ ಹಿಂದೆ ಹಂಚಿಕೊಳ್ಳಲಾಗಿದೆ. ಸುಮಾರು 60 ಜನರು ಲೈಕ್ ಮಾಡಿದ್ದು, 100ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಖಂಡಿತ ಅವನೊಂದಿಗೆ ಮದುವೆಯಾಗಬೇಡಿ, ಈಗಲೇ ಅವನಿಗೆ ಮಾನಸಿಕ ಸಮಸ್ಯೆ ಇದ್ದ ಹಾಗಿದೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೆಡ್ಡಿಟ್​ನಲ್ಲಿ ಹಂಚಿಕೊಂಡ ಕೇರಳದ ಯುವತಿಯ ಪೋಸ್ಟ್​ ಇಲ್ಲಿದೆ

ಅವನು ಇಷ್ಟಪಡುವ ಸೀರೆಯನ್ನು ನೀವು ಉಟ್ಟುಕೊಳ್ಳದಿದ್ದರೆ ಅವನು ಮದುವೆಯನ್ನೇ ರದ್ದುಗೊಳಿಸಲು ಸಿದ್ಧನಿದ್ದಾನೆ ಎಂದಮೇಲೆ ನೀವೇಕೆ ಕಾಯುತ್ತೀರಿ, ಅವನಿಗಿಂತ ಮೊದಲೇ ಮದುವೆಯನ್ನು ರದ್ದುಗೊಳಿಸಿ ಎಂದಿದ್ದಾರೆ ಒಬ್ಬರು. ಒಂದು ವರ್ಷದ ನಂತರ ನೀವು ಇದೇ ರೆಡ್ಡಿಟ್‌ನಲ್ಲಿ ನಾರ್ಸಿಸಿಸಮ್‌ನ ಲಕ್ಷಣಗಳ ಕುರಿತಾಗಿ ಪೋಸ್ಟ್ ಮಾಡುತ್ತೀರಿ ಎಂದಿದ್ದಾರೆ ಇನ್ನೊಬ್ಬರು. ನಿರಾಕರಣೆ ಕಷ್ಟ, ಆದರೆ ಒಮ್ಮೆ ಈ ಕಷ್ಟವನ್ನು ತೆಗೆದುಕೊಂಡುಬಿಡಿ, ಜೀವನಪೂರ್ತಿ ನರಳಬೇಡ ಎನ್ನುವ ಮುನ್ಸೂಚನೆ ನಿಮಗೆ ಸಿಕ್ಕಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್​ ಎಲ್ಲಿ ಎಂದ ನೆಟ್ಟಿಗರು 

ಇದು ಖಂಡಿತ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ, ಇದು ಈಡಿಪಸ್​, ಮನೋರೋಗ. ರೆಡ್​ ಫ್ಲ್ಯಾಗ್​! ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದಿದ್ದಾರೆ ಒಬ್ಬರು. ಅವನು ಈ ಬಗ್ಗೆ ಇಷ್ಟೊಂದೇಕೆ ತಲೆ ಕೆಡಿಸಿಕೊಂಡಿದ್ದಾನೆ ಕೇಳಿ, ಇದು ಕೇವಲ ಸೀರೆಗೆ ಮಾತ್ರ ಸಂಬಂಧಿಸಿದ್ದೇ ಅಥವಾ.. ಆದರೆ ಖಂಡಿತ ಈ ರೀತಿ ವರ್ತನೆ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ ಇನ್ನೊಬ್ಬರು. ಇವನು ಮುಂದೆಯೂ ನಿಮ್ಮಲ್ಲಿ ತನ್ನ ತಾಯಿಯನ್ನೇ ಹುಡುಕುತ್ತ ಹೊರಡುತ್ತಾನೆ, ಸಿಗ್ಮಂಡ್ ಫ್ರಾಯ್ಡ್​ ಹೇಳಿದ್ದು ಸರಿ ಇದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ವೆಲ್​ಕಮ್​ ಟು ಮರ್ಲಿ ಹೇರ್ ಸಲೂನ್​! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?

ನಿಮ್ಮ ಆದ್ಯತೆ, ಭವಿಷ್ಯದ ಯೋಜನೆಗಳ ಬಗ್ಗೆ ಅವನೊಂದಿಗೆ ಮಾತನಾಡಿ, ನೀವು ಅವನ ಮೊದಲ ಆದ್ಯತೆಯಾಗಿರಬೇಕು ಮತ್ತು ಅವನ ಹೆತ್ತವರಿಗೆ ಈ ವಿಷಯವನ್ನುಅರ್ಥ ಮಾಡಿಸಬೇಕೆಂದು ಹೇಳಿನೋಡಿ. ಅವನ ಉತ್ತರ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಿ ಎಂದಿದ್ದಾರೆ ಇನ್ನೂ ಕೆಲವರು. ಒಟ್ಟಾರೆಯಾಗಿ ಇವನಿಂದ ಬಿಡಿಸಿಕೊಂಡು ಓಡಿ! ಎಂದೇ ಹೇಳಿದ್ದಾರೆ ಎಲ್ಲರೂ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:47 pm, Fri, 3 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ