Viral Video: ವೆಲ್​ಕಮ್​ ಟು ಮರ್ಲಿ ಹೇರ್ ಸಲೂನ್​! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?

Cat Lover: ನೀವು ಬೆಳಗ್ಗೆ ಏಳಲು ಅಲರಾಂ ಇಟ್ಟುಕೊಳ್ಳುತ್ತೀರಿ, ಇನ್ನೂ ಕೆಲವರಿಗೆ ಮನೆಯ ಸದಸ್ಯರು ಏಳಿಸುತ್ತಾರೆ. ಇನ್ನೂ ಕೆಲವರಿಗೆ ತಂತಾನೇ ಎಚ್ಚರವಾಗುತ್ತದೆ. ಆದರೆ ಬೆಕ್ಕು ಸಾಕಿದವರಿಗೆ? ಬೆಕ್ಕೇ ಬಂದು ಎಬ್ಬಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತನ್ನ ಪೋಷಕಿಯನ್ನು ಎಬ್ಬಿಸುವ ಬೇರೆ ಬೇರೆ ವಿಡಿಯೋ ತುಣುಕುಗಳು ಇದರಲ್ಲಿ ಅಡಕವಾಗಿವೆ. ಮಿಲಿಯನ್​ಗಟ್ಟಲೆ ಜನರಿಗೆ ಇವು ಮೆಚ್ಚುಗೆಯಾಗಿವೆ.

Viral Video: ವೆಲ್​ಕಮ್​ ಟು ಮರ್ಲಿ ಹೇರ್ ಸಲೂನ್​! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?
Follow us
ಶ್ರೀದೇವಿ ಕಳಸದ
|

Updated on:Nov 02, 2023 | 10:45 AM

Cat: ಮರ್ಲಿ ಎಂಬ ಈ ಬೆಕ್ಕು ಚಿಕ್ಯಾಗೋನಲ್ಲಿ ವಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಂತ ಖಾತೆಗಳನ್ನು ಹೊಂದಿರುವ ಈ ಬೆಕ್ಕು ನೆಟ್ಟಿಗರಿಗೆ ಬಹುಪ್ರಿಯ. ಟಿಕ್​ಟಾಕ್​ನಲ್ಲಿ ಇದಕ್ಕೆ 3 ಮಿಲಿಯನ್​ಗಿಂತಲೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಇನ್​ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಇದೀಗ ಮರ್ಲಿಯ ವಿವಿಧ ವೇಕಪ್ (Wake-up)​ ವಿಡಿಯೋ ವೈರಲ್ ಆಗುತ್ತಿದೆ. ಮಿಲಿಯನ್​ಗಟ್ಟಲೇ ಜನರು ಈ ವಿಡಿಯೋಗಳನ್ನು ನೋಡಿದ್ದು, ಆ  ಎಲ್ಲ ವಿಡಿಯೋಗಳನ್ನು ಒಟ್ಟಾಗಿಸಿ ಮಾಡಿರುವ ವಿಡಿಯೋವನ್ನು ಇದೀಗ 7 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಹಾಗಿದ್ದರೆ ಈ ಕ್ಲಿಪ್ಪಿಂಗ್​​ಗಳಲ್ಲಿ ನಿಮಗೆ ತುಂಬಾ ಇಷ್ಟವಾಗುವ ವಿಡಿಯೋ ಯಾವುದು?

ಇದನ್ನೂ ಓದಿ : Viral Video: ಮುಂಬೈ; ಟ್ರಾಫಿಕ್​​ನಲ್ಲಿ ಆಟೊ ಚಾಲಕನ ಗಾಯನ, ಎಲ್ಲೆಡೆ ಇಂಥವರಿರಲಿ ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್ 16ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಮಿಲಿಯನ್​ಗಟ್ಟಲೇ ಜನರು ನೋಡಿದ್ದಾರೆ. ಪೋಷಕಿಯ ಕಣ್ಣನ್ನು ನೆಕ್ಕುವ ವಿಡಿಯೋ ಬಹಳ ಇಷ್ಟವಾಯಿತು ಎಂದು ಅನೇಕರು ಹೇಳಿದ್ದಾರೆ. ಅದು ಆಕೆಯ ಕೂದಲನ್ನು ಕಿತ್ತುವುದಿದೆಯಲ್ಲ ಅದು ಬಹಳ ಇಷ್ಟವಾಯಿತು ಎಂದು ಕೆಲವರು ಹೇಳಿದ್ದಾರೆ.

ಇಲ್ಲಿದೆ ಮರ್ಲಿಯ ವೇಕಪ್​ ವಿಡಿಯೋ

View this post on Instagram

A post shared by Marley (@marleymalin)

ಅಂದರೆ ಪ್ರತೀ ದಿನ ಬಂದು ಹೀಗೆ ನಿಮ್ಮನ್ನು ಎಬ್ಬಿಸಿದಾಗಲೇ ನೀವು ಏಳುತ್ತೀರಿ ಎಂದಾಯಿತು ಎಂದಿದ್ದಾರೆ ಒಬ್ಬರು. ಅವನು ನಿಮ್ಮ ಕೂದಲನ್ನು ಕತ್ತರಿಸಿದ್ದು ಮಹಾಕಾವ್ಯ! ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ವಿಡಿಯೋವನ್ನು ನಾನು ನೋಡುವಾಗ ನನ್ನ ಬೆಕ್ಕು ಮಲಗಿತ್ತು, ಎಚ್ಚರಗೊಂಡು ಮೇಲಿನಿಂದ ಜಿಗಿದು ನನ್ನ ಮೇಲೆ ಹಾರಿ ಬಂದು ಇಲ್ಲಿ ಏನು ನಡೆಯುತ್ತಿದೆ ಎಂಬಂತೆ ನೋಡಿತು ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿ : Viral: ‘ತುಂಬಾ ಮುದ್ದಾಗಿದ್ದೀರಿ’ ನಾಗಾಲ್ಯಾಂಡ್​ ಸಚಿವರಿಗೆ ಇಂಡಿಗೋ ಗಗನಸಖಿಯಿಂದ ಚೀಟಿ, ಮುಂದೆ?

ಓಹೋ ಇದು ಮಾರ್ಲಿ ಹೇರ್ ಸಲೂನ್​ ಎಂದಿದ್ದಾರೆ ಒಬ್ಬರು. ಬೆಕ್ಕುಗಳು ಬೆಳಗಿನ ಹೊತ್ತು ಹೀಗೆ ಬಹಳ ಮುದ್ದಾಡುತ್ತವೆ ಎಂದಿದ್ದಾರೆ ಇನ್ನೊಬ್ಬರು. ತನ್ನ ಪೋಷಕರು ಇನ್ನೂ ಬದುಕಿದ್ದಾರೆ ಎಂದು ಖುಷಿಪಡುತ್ತವೆ ಎಂದಿದ್ದಾರೆ ಮತ್ತೊಬ್ಬರು. ನನ್ನ ಬೆಕ್ಕು ಪ್ರತೀದಿನ ಬೆಳಗ್ಗೆ ನನ್ನನ್ನು ಹೀಗೆಯೇ ಏಳಿಸುತ್ತದೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:43 am, Thu, 2 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ