AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮುಂಬೈ; ಟ್ರಾಫಿಕ್​​ನಲ್ಲಿ ಆಟೊ ಚಾಲಕನ ಗಾಯನ, ಎಲ್ಲೆಡೆ ಇಂಥವರಿರಲಿ ಎಂದ ನೆಟ್ಟಿಗರು

Singing: ಎಷ್ಟೋ ಸಲ ಆಟೋದಲ್ಲಿ ಪ್ರಯಾಣಿಸುವಾಗ ಡ್ರೈವರ್​​ಗಳ ಕೋಪತಾಪ, ಕಿರಿಕಿರಿಗೆ ಪ್ರಯಾಣಿಕರು ವಿನಾಕಾರಣ ಗುರಿಯಾಗಬೇಕಾಗುತ್ತಿರುತ್ತದೆ. ಆಗ ಯಾವಾಗ ಆಟೋದಿಂದ ಕೆಳಗಿಳಿಯುತ್ತೇವೋ ಎಂದು ಕಾಯಬೇಕಾಗುತ್ತದೆ. ಅದರಲ್ಲೂ ಟ್ರಾಫಿಕ್​ನಲ್ಲಿ ಹೀಗೆಲ್ಲ ಆದರೆ ಇಳಿದು ಓಡಿಬಿಡೋಣ ಎನ್ನಿಸುತ್ತಿರುತ್ತದೆ. ಆದರೆ ಈ ವಿಡಿಯೋ ನೋಡಿದ ಮೇಲೆ ನೀವೇನು ಹೇಳುತ್ತೀರಿ?

Viral Video: ಮುಂಬೈ; ಟ್ರಾಫಿಕ್​​ನಲ್ಲಿ ಆಟೊ ಚಾಲಕನ ಗಾಯನ, ಎಲ್ಲೆಡೆ ಇಂಥವರಿರಲಿ ಎಂದ ನೆಟ್ಟಿಗರು
ಮುಂಬೈ ಟ್ರಾಫಿಕ್​ನಲ್ಲಿ ಹಾಡುತ್ತಿರುವ ಆಟೋ ಡ್ರೈವರ್
ಶ್ರೀದೇವಿ ಕಳಸದ
|

Updated on: Nov 01, 2023 | 3:54 PM

Share

Mumbai: ಮುಂಬೈ ಎಂಬ ಮಹಾನಗರಿಯಲ್ಲಿ ದಿನಕ್ಕೊಂದು ವಿಸ್ಮಯ ನಡೆಯುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಟೋಚಾಲಕನೊಬ್ಬ ಅಂಧೇರಿ ಸಿಗ್ನಲ್ (Andheri Signal) ಅನ್ನು ಕರೋಕೆ ಸ್ಪಾಟ್​ನಂತೆ ಪರಿವರ್ತಿಸಿದ್ದಾನೆ. ಟ್ರಾಫಿಕ್​​ನಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಕರೋಕೆಯೊಂದಿಗೆ ಹಾಡಿ ಅಲ್ಲಿದ್ದವರ ಗಮನ ಸೆಳೆದಿದ್ದಾನೆ. ಸಮಯ್ ರೈನಾ ಎನ್ನುವವರು, ‘ಐಸಾ ಲಗಾ ಹೀ ನಹೀಂ ಕೀ ಅಂಧೇರಿ ಸಿಗ್ನಲ್ ಪೇ ಫಸಾ ಹೂಂ… ಎಂತಹ ಸುಂದರ ಈ ಮನುಷ್ಯ! ಎಂದು Xನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ‘ತುಂಬಾ ಮುದ್ದಾಗಿದ್ದೀರಿ’ ನಾಗಾಲ್ಯಾಂಡ್​ ಸಚಿವರಿಗೆ ಇಂಡಿಗೋ ಗಗನಸಖಿಯಿಂದ ಚೀಟಿ, ಮುಂದೆ?

ಆಟೋ ಡ್ರೈವರ್​ಗೆ ಗಾಯನ ಹವ್ಯಾಸವೆಂದು ತೋರುತ್ತದೆ. ಏಕೆಂದರೆ ತನ್ನ ಆಟೋಗೆ ಮೈಕ್​ ಮತ್ತು ಸ್ಪೀಕರ್ ಜೋಡಿಸಿದ್ದಾನೆ. ಅವನು ಜನರನ್ನು ರಂಜಿಸಲು ಆಗಾಗ ಹಾಡುತ್ತಾನೆಂದು ತೋರುತ್ತದೆ. ಅಕ್ಟೋಬರ್ 31 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ ಸುಮಾರು 62,000 ಜನರು ನೋಡಿದ್ದಾರೆ. 2,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು ಅನೇಕರು ಪ್ರತಿಕ್ರಿಯಿಸಿದ್ದಾರೆ.

ನಿಜಕ್ಕೂ ಇದು ತುಂಬಾ ಚೆಂದದ ವಿಡಿಯೋ ಎಂದಿದ್ದಾರೆ ಅನೇಕರು. ಬೆಂಗಳೂರು ಆಟೋದವರು ಹೀಗೆ ಕೂಲ್ ಆಗಿ ಇರಲು ಎಂದೂ ಸಾಧ್ಯವಿಲ್ಲ ಎಂದಿದ್ದಾರೆ ಒಬ್ಬರು. ಎಂಥ ಪಾಸಿಟಿವ್​ ವೈಬ್​ ಎಂದಿದ್ದಾರೆ ಇನ್ನೊಬ್ಬರು. ಪ್ರತೀ ಮನುಷ್ಯನಿಗೆ ಅವನ ಹವ್ಯಾಸವೇ ಗೆಳೆಯ. ಅದನ್ನು ಮರೆಯದೇ ರೂಢಿಸಿಕೊಂಡರೆ ತನಗೂ ಹಿತ ತನ್ನ ಸುತ್ತಮುತ್ತಲಿನವರಿಗೂ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಹ್ಯಾಲ್ಯೋವೀನ್​; ಹ್ಯಾರಿಪಾಟರ್​ ಪಾತ್ರಧಾರಿಗಳ ವೇಷದಲ್ಲಿ ಝ್ಯುಕರ್​ಬರ್ಗ್​ ಕುಟುಂಬ

ನಿಜಕ್ಕೂ ಈ ವಿಡಿಯೋ ನೋಡಿ ನನಗೆ ಬಹಳ ಖುಷಿಯಾಗುತ್ತಿದೆ. ಪ್ರತೀ ಊರಿನಲ್ಲಿಯೂ ಇಂಥ ಆಟೋದವರಿದ್ದರೆ ಟ್ರಾಫಿಕ್​ನಿಂದ ತಲೆನೋವು ಬರುವುದಿಲ್ಲ ಎಂದಿದ್ದಾರೆ ಒಬ್ಬರು. ಹಾಡು ಎನ್ನುವುದು ತನ್ನ ಖುಷಿಗೆ ನಂತರ ಉಳಿದವರ ಖುಷಿಗೆ ಎನ್ನುವುದನ್ನು ಈತ ಹೀಗೆ ಸಾಬೀತುಪಡಿಸಿದ್ದಾನೆ, ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಒಟ್ಟಿನಲ್ಲಿ ಇಂಥ ಒಳ್ಳೆಯ ಸಂಗತಿಯನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದ ಎಂದಿದ್ದಾರೆ ಅನೇಕ ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ