Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?

Apple Pencil : ಮುಂಬೈನಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಆಕಾಂಕ್ಷಾ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯ ಬೀಚ್​ಗೆ ವಿಹಾರಕ್ಕೆ ಹೋಗುತ್ತಾರೆ. ಆಗ ಅಕಸ್ಮಾತ್ ಆಗಿ ಅವರ ಆ್ಯಪಲ್​ ಪೆನ್ಸಿಲ್​ ಕಳೆದುಹೋಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಳ್ಳುತ್ತಾರೆ. ನೆಟ್ಟಿಗರು ಈ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಆದರೆ ಅಚಾನಕ್ ಆಗಿ ಕಳೆದುಹೋದ ವಸ್ತು ಆಕಾಂಕ್ಷಾಗೆ ಸಿಗುತ್ತದೆ. ಅದು ಹೇಗೆ?

Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?
ಕಳೆದುಹೋದ ಆ್ಯಪಲ್​ ಪೆನ್ಸಿಲ್​ ಮರಳಿ ದೊರೆತಾಗ
Follow us
ಶ್ರೀದೇವಿ ಕಳಸದ
|

Updated on:Oct 25, 2023 | 11:32 AM

Mumbai: ಅನೇಕ ಸಲ ನಮ್ಮ ವಸ್ತುಗಳು ಕಳೆದುಹೋಗುತ್ತವೆ. ಅದರಲ್ಲೂ ನೆಚ್ಚಿನ ಮತ್ತು ದುಬಾರಿ ವಸ್ತುಗಳು ಕಳೆದಾಗಲಂತೂ ಆಗುವ ಸಂಕಟ ಹೇಳತೀರದು. ಆದರೆ ಅಕಸ್ಮಾತ್​ ಆ ವಸ್ತುಗಳು ನಮಗೆ ಸಿಕ್ಕರೆ? ಆ ಖುಷಿಯನ್ನು ಹಂಚಿಕೊಳ್ಳದೇ ಇರಲಾಗದು. ಇದೀಗ ವೈರಲ್ ಆಗಿರುವ ಈ ಪೋಸ್ಟ್​ ನೋಡಿ. ಮಹಿಳೆಯೊಬ್ಬರು ಕಳೆದುಹೋದ ಆ್ಯಪಲ್​ ಪೆನ್ಸಿಲ್​ (Apple Pencil) ತಮ್ಮನ್ನು ತಲುಪಿದ್ದು ಹೇಗೆ ಎಂದು ಹಂಚಿಕೊಂಡಿದ್ದಾರೆ. Xನಲ್ಲಿ ಪೋಸ್ಟ್ ಮಾಡಲಾದ ಈ ಪೋಸ್ಟ್​ ಅನ್ನು ಈತನಕ 2 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮುಂಬೈನಲ್ಲಿ ಇಂಟಿರೀಯರ್ ಡಿಸೈನರ್ ಆಗಿರುವ ಆಕಾಂಕ್ಷಾ ದುಗಾಡ್ ತನ್ನ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯಲ್ಲಿ ಆರೋವಿಲ್ಲೆ ಬೀಚಿನಲ್ಲಿ ವಿಹರಿಸುತ್ತಿದ್ದ ವೇಳೆ ಆ್ಯಪಲ್ ಪೆನ್ಸಿಲ್ ಕಳೆದುಕೊಂಡರು. ಈ ಬಗ್ಗೆ ಬೇಸರವನ್ನು Xನಲ್ಲಿ ತೋಡಿಕೊಂಡರು. ನಂತರ ನಿರಾಸೆಯಿಂದ ಪ್ರವಾಸವನ್ನೂ ಮುಂದುವರಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡ ಆಕಾಂಕ್ಷಾ

THIS IS UNREAL!!! pic.twitter.com/uf3oJgHhbQ

ಪ್ರವಾಸ ಮುಗಿಸಿ ಮುಂಬೈಗೆ ವಾಪಾಸಾದ ನಂತರ ಆಕಾಂಕ್ಷಾಳ ಹಾಸ್ಟೆಲ್​ಗೆ ಪಾಂಡಿಚೇರಿಯಲ್ಲಿ ಭೇಟಿಯಾಗಿದ್ದ ರಕ್ಷಿತ್​ ಎಂಬ ವ್ಯಕ್ತಿಯಿಂದ ಎನ್ವಲಪ್​ ಬಂದಿತು. ಅದನ್ನು ಅಚ್ಚರಿಯಂದ ತೆರೆದು ನೋಡಿದಾಗ ಅದರಲ್ಲಿ ಅಪ್ಸರಾ ಪೆನ್ಸಿಲ್‌ಗಳ ಬಾಕ್ಸ್ ಇತ್ತು. ಇದೇನು ಹುಡುಗಾಟವೇ ಎಂಬಂತೆ ಅನುಮಾನದಿಂದ ಆ ಬಾಕ್ಸ್ ತೆರೆದರು. ಅಪ್ಸರಾ ಪೆನ್ಸಿಲ್​ನಲ್ಲಿ ಕಳೆದುಹೋದ ಆ್ಯಪಲ್​ ಪೆನ್ಸಿಲ್​ ಇತ್ತು!

ಇದನ್ನೂ ಓದಿ : Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?

ಇದನ್ನು ನಂಬಲಾಗುತ್ತಿಲ್ಲ, ಜಗತ್ತಿನಲ್ಲಿ ದಯೆ ಇನ್ನೂ ಇದೆ ಎಂದು ಅಚ್ಚರಿಯಿಂದ ಪೋಸ್ಟ್ ಹಾಕಿದ್ದಾರೆ ಆಕಾಂಕ್ಷಾ. ಈ ಪ್ರಕರಣವನ್ನು ಕೆಲವರು ತಮಾಷೆಯಾಗಿ ನೋಡಿದ್ದಾರೆ. ನಾನಿನ್ನು ರಕ್ಷಿತ್​ ಎಂಬ ಹೆಸರಿನ ಹುಡುಗರೊಂದಿಗೆ ಡೇಟಿಂಗ್ ಶುರು ಮಾಡಬೇಕು ಎಂದಿದ್ದಾರೆ ಒಬ್ಬರು. ನೀವು ಹುಡುಗಿಯ ಬದಲಾಗಿ ಹುಡುಗನಾಗಿದ್ದರೆ ಖಂಡಿತ ನಿಮಗೆ ಅಪ್ಸರಾ ಪೆನ್ಸಿಲ್​ ಕೂಡ ಸಿಗುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಮನುಷ್ಯರು ಮನುಷ್ಯರಾಗಿಯೇ ವರ್ತಿಸುತ್ತಾರೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:31 am, Wed, 25 October 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್