Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ

Dance: ಕಲಾವಿದೆ ದೃಶ್ಯಾ ರಘುರಾಮ್ ನವರಾತ್ರಿಯ ಸಂದರ್ಭದಲ್ಲಿ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಮರುಹಂಚಿಕೊಂಡಿದ್ದಾರೆ. ಮಿಲಿಯನ್​ಗಟ್ಟಲೆ ಜನರು ಈ ವಿಡಿಯೋ ನೋಡಿ ಶ್ಲಾಘಿಸುತ್ತಿದ್ದಾರೆ. ನೀವಿಬ್ಬರೂ ನರ್ತಿಸಿಲ್ಲ, ಕಲೆಯನ್ನು ನಿಜಕ್ಕೂ ಅನುಭವಿಸಿದ್ದೀರಿ ಎಂದಿದ್ದಾರೆ. ನಾಲ್ಕು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ನೀವು ಓಮ್ಮೆ ನೋಡಲೇಬೇಕು!

Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ
ಹೆಜ್ಜೆ ಹಾಕಿ ಮೋಡಿ ಮಾಡಿದ ಜೋಡಿ
Follow us
ಶ್ರೀದೇವಿ ಕಳಸದ
|

Updated on: Oct 25, 2023 | 10:35 AM

Navaratri: ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್​ವೀರ್ ಸಿಂಗ್ ಅಭಿನಯದ ‘ಗೋಲಿಯೋಂಕೀ ರಾಸ್​ಲೀಲಾ ರಾಮ್​ಲೀಲಾ’ ಸಿನೆಮಾ ಬಿಡುಗಡೆಯಾಗಿದ್ದು 2013ರಲ್ಲಿ. ಈ ಸಿನೆಮಾದ ‘ಲಹೂ ಮುನ್​ ಲಗ್ ಗಯಾ (Lahu Munh Lag Gaya)’ ಹಾಡು ಇದೀಗ ಟ್ರೆಂಡಿಂಗ್​ನಲ್ಲಿದೆ. ನವರಾತ್ರಿಯ ಸಂದರ್ಭದಲ್ಲಿ ಜೋಡಿಯೊಂದು ಈ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ. ಇವರಿಬ್ಬರ ಸಾಂಪ್ರದಾಯಿಕ ಉಡುಪು ಮತ್ತು ಅತ್ಯಾಕರ್ಷಕವಾಗಿ ಹಾಕಿದ ಹೆಜ್ಜೆ ನೆಟ್ಟಿಗರ ಮನಸೂರೆಗೊಂಡಿದೆ. ಇನ್​ಸ್ಟಾಗ್ರಾಂನಲ್ಲಿ ಕಲಾವಿದೆ ದೃಶ್ಯಾ ರಘುರಾಮ್​ ಈ ವಿಡಿಯೋವನ್ನು ಮರುಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಯುವರಾಜ್​ ಸಿಂಗ್​ ಪತ್ನಿ ಹೆಝೆಲ್ ಕೀಚ್​ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾಲ್ಕು ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 2.8 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 10 ಮಿಲಿಯನ್​ ಜನರು ವಿಡಿಯೋ ನೋಡಿದ್ದು, ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ನವರಾತ್ರಿಯನ್ನು ರಂಗೇರಿಸಿದ ಈ ಜೋಡಿ

ನಿಜಕ್ಕೂ ಈ ಜೋಡಿ ಅತ್ಯದ್ಭುತವಾಗಿ ನರ್ತಿಸಿದೆ ಎಂದಿದ್ದಾರೆ ಒಬ್ಬರು. ಇವರ ಅಭಿವ್ಯಕ್ತಿಗೆ ಶರಣಾದೆ ಎಂದಿದ್ದಾರೆ ಮತ್ತೊಬ್ಬರು. ಹಾಡು ಮತ್ತು ನೃತ್ಯ ಎರಡೂ ಸೂಪರ್​ ಎಂದಿದ್ದಾರೆ ಇನ್ನೊಬ್ಬರು. ವಾಹ್​ ಬೆಳಗ್ಗೆಯಿಂದ ಇಷ್ಟೊಂದು ಚೆಂದದ ನೃತ್ಯವನ್ನು ನೋಡಿದ್ದೇ ಇಲ್ಲ ಎಂದಿದ್ದಾರೆ ಮತ್ತೊಬ್ಬರು. ನೀವು ನೃತ್ಯವನ್ನು ಅನುಭವಿಸುತ್ತಿದ್ದೀರಿ, ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ವಿಚ್ಛೇದನ; ಈ ವಕೀಲೆ ಪಟ್ಟಿ ಮಾಡಿದ ‘ಅಸಂಬದ್ಧ ಕಾರಣ’ಗಳ ಬಗ್ಗೆ ನೀವೇನು ಹೇಳುತ್ತೀರಿ?

ಈ ಸಂದರ್ಭದಲ್ಲಿ ನೀವು ಇಯರ್ ಪಾಡ್ ಧರಿಸಿದ್ದು ಸೂಕ್ತವಾಗಿದೆ ಎಂದಿದ್ದಾರೆ ಒಬ್ಬರು. ನಿಮ್ಮ ಕಾಸ್ಟ್ಯೂಮ್​ಗೆ ನಾನು ಫಿದಾ ಆದೆ ಎಂದಿದ್ದಾರೆ ಇನ್ನೊಬ್ಬರು. ನವರಾತ್ರಿ ನಿಜಕ್ಕೂ ಅರ್ಥಪೂರ್ಣವಾಯಿತು ನಿಮ್ಮ ನೃತ್ಯ ನೋಡಿದ ಮೇಲೆ ಎಂದಿದ್ದಾರೆ ಅನೇಕರು. ಇವರಿಬ್ಬರ ತನ್ಮಯತೆ ನಿಜಕ್ಕೂ ಮುದಗೊಳಿಸಿದೆ ಎಂದಿದ್ದಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ