Viral​; ಸೆಕೆಂಡಿನಲ್ಲಿ ನಿಮ್ಮ ವಯಸ್ಸನ್ನು ತಿಳಿದುಕೊಳ್ಳಬೇಕೆ, ಈ ಚಾರ್ಟ್​ ನೋಡಿ

Age Calculator: 'ನಾವು, ನಮ್ಮದು' ಎನ್ನುವ ಸಾಕಷ್ಟು ವೈಯಕ್ತಿಕ ಮಾಹಿತಿಗಾಗಿಯೂ ನಾವು ಡಿಜಿಟಲ್​ ಅನ್ನು ಅವಲಂಬಿಸಿದ್ದೇವೆ. ನಮಗೆ ವಯಸ್ಸು ಎಷ್ಟು ಎಂದು ನೆನಪಿಟ್ಟುಕೊಳ್ಳಲು ಅಥವಾ ಲೆಕ್ಕ ಮಾಡಲು ಆಗದಷ್ಟು ದೈನಂದಿನ ಚಟುವಟಿಕೆಗಳಲ್ಲಿ ಮುಳುಗಿ ಹೋಗಿದ್ದೇವೆ. ಏನಿದ್ದರೂ ಗೂಗಲ್​ ದೇವೋಭವ. ಈ ಎಲ್ಲದರ ಮಧ್ಯೆ ಈ ಏಜ್​ ಚಾರ್ಟ್​ ಮಾತ್ರ ಭಾರೀ ಗಮನ ಸೆಳೆಯುತ್ತಿದೆ.

Viral​; ಸೆಕೆಂಡಿನಲ್ಲಿ ನಿಮ್ಮ ವಯಸ್ಸನ್ನು ತಿಳಿದುಕೊಳ್ಳಬೇಕೆ, ಈ ಚಾರ್ಟ್​ ನೋಡಿ
ನಿಮ್ಮ ವಯಸ್ಸನ್ನು ನಿಖರವಾಗಿ ತಿಳಿಸುತ್ತದೆ ಈ ಚಾರ್ಟ್​
Follow us
ಶ್ರೀದೇವಿ ಕಳಸದ
|

Updated on:Oct 16, 2023 | 3:13 PM

Viral Chart: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸಂಗತಿಗಳನ್ನು ನೀವು ಗಮನಿಸುತ್ತಿರುತ್ತೀರಿ. ಡ್ಯಾನ್ಸ್, ಹಾಡು, ಪೇಂಟಿಂಗ್​, ಅಡುಗೆ, ಕೌಶಲ, ತಂತ್ರ, ಸಾಹಸ, ಕಾಮಿಡಿ ರೀಲ್ ಮತ್ತು ಅಚ್ಚರಿ ಎನ್ನಿಸುವ ಸಾಕಷ್ಟು ವಿಷಯಗಳು . ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral) ಆಗುತ್ತಿರುವ ಈ ಚಾರ್ಟ್​ ಗಮನಿಸಿ. ಇದು ಕೆಲ ಸೆಕೆಂಡುಗಳಲ್ಲೇ ನಿಮ್ಮ ವಯಸ್ಸನ್ನು ಅತ್ಯಂತ ನಿಖರವಾಗಿ ತಿಳಿಸುತ್ತಿದೆ. ನೆಟ್ಟಿಗರಂತೂ ಈ ಚಾರ್ಟ್ ನೋಡಿ ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ಬಂಧುಬಳಗದವರಿಗೆಲ್ಲಾ ಈ ಚಾರ್ಟ್​ ಕಳಿಸಿ ವೈರಲ್ ಮಾಡುತ್ತಲೇ ಇದ್ದಾರೆ. ನೀವು?

ಇದನ್ನೂ ಓದಿ : Viral Video: ವಿಚ್ಛೇದನ; ಈ ವಕೀಲೆ ಪಟ್ಟಿ ಮಾಡಿದ ‘ಅಸಂಬದ್ಧ ಕಾರಣ’ಗಳ ಬಗ್ಗೆ ನೀವೇನು ಹೇಳುತ್ತೀರಿ?

ನೆಟ್ಟಿಗರಿಗೆ ಈ ಚಾರ್ಟ್​ ಇಷ್ಟವಾಗಿದೆ ಎನ್ನುವುದು ಅವರು ನೀಡಿರುವ ಪ್ರತಿಕ್ರಿಯೆಗಳ ಮೂಲಕ ತಿಳಿಯುತ್ತಲಿದೆ. ನಿಮ್ಮ ವಯಸ್ಸನ್ನು ತಿಳಿದುಕೊಳ್ಳಲು, ನೀವು ನಿಮ್ಮ ಹುಟ್ಟಿದ ವರ್ಷವನ್ನು ತಿಳಿದುಕೊಂಡಿದ್ದರೆ ಸಾಕು. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಸ್ತುತ ವಯಸ್ಸನ್ನು ತಿಳಿದುಕೊಳ್ಳುತ್ತೀರಿ. ಈ ಚಾರ್ಟ್​ನಲ್ಲಿ 1943ರಿಂದ 2022ರ ಒಳಗೆ ಹುಟ್ಟಿದವರಿಗೆ ಇದು ಅನ್ವಯವಾಗುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿದೆ ಆ ವೈರಲ್ ಚಾರ್ಟ್​

ಹುಟ್ಟಿದ ವರ್ಷ ಹುಡುಕಿ, ಮತ್ತದರ  ಮುಂದಿರುವ ಅಂಕಿಯೇ ನಿಮ್ಮ ವಯಸ್ಸು. ಸರಿ ಇದೆಯೇ?

ನೀವು ಹುಟ್ಟಿದ ಇಸ್ವಿಯನ್ನು ಹುಡುಕಿ ಮತ್ತದರ ಮುಂದೆ ದಪ್ಪಕ್ಷರಗಳಲ್ಲಿರುವ ಅಂಕಿಯನ್ನು ಗಮನಿಸಿ. ಆ ಅಂಕಿಯೇ ನಿಮ್ಮ ವಯಸ್ಸು. ನಿಜಕ್ಕೂ ಇದು ಅಚ್ಚರಿಯಿಂದ ಕೂಡಿದೆ ಎಂದು ಶ್ಲಾಘಿಸುತ್ತಿದ್ದಾರೆ ನೆಟ್ಟಿಗರು. ಗೂಗಲ್​ (Google) ಬಂದಮೇಲೆ ನಮ್ಮ ವಯಸ್ಸನ್ನೂ ನಾವು ಗೂಗಲ್ಲಿಗೇ ಕೇಳುವಂಥ ಪರಿಸ್ಥಿತಿಗೆ ಬಂದಿದ್ದೇವೆ. ಹಾಗಾಗಿ ಆಗಾಗ ನಾವು Age Calculator ಗೆ ಮೊರೆಹೋಗುತ್ತಿರುತ್ತೇವೆ.

ಟಿವಿ9 ಕನ್ನಡ ಡಿಜಿಟಲ್​ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಲು ಕ್ಲಿಕ್ ಮಾಡಿ

ಯಾವುದೋ ಕಾಗದಪತ್ರದಲ್ಲಿ ನಿಮ್ಮ ವಯಸ್ಸನ್ನು ದಾಖಲಿಸುವಾಗ ನಿಮಗೆ ನಿಮ್ಮ ವಯಸ್ಸಿನಲ್ಲಿ ಗೊಂದಲವಾದರೆ ಅಥವಾ ಇಂಟರ್​ನೆಟ್ ಸಂಪರ್ಕ ಕಡಿದುಕೊಂಡಿದ್ದರೆ ಈ ಒಂದು ಚಾರ್ಟ್​ ಖಂಡಿತ ನಿಮ್ಮ ಸಹಾಯಕ್ಕೆ ಒದಗುತ್ತದೆ. ನಾನಂತೂ ನನ್ನ ಕಾಂಟ್ಯಾಕ್ಟ್​ ಲಿಸ್ಟ್​ನಲ್ಲಿರುವ ಎಲ್ಲರಿಗೂ ಈ ಚಾರ್ಟ್​ ಕಳಿಸಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?

ಈ ಚಾರ್ಟ್​ ಸೃಷ್ಟಿಸಿದವರು ಯಾರು? ಅತ್ಯಂತ ಜಾಣ್ಮೆಯಿಂದ ಇದನ್ನು ತಯಾರಿಸಲಾಗಿದೆ ಎಂದಿದ್ದಾರೆ ಇನ್ನೊಬ್ಬರು. ನಿಜಕ್ಕೂ ನಾನಂತೂ ಈ ಚಾರ್ಟ್​ ಹಿಡಿದುಕೊಂಡು ನನ್ನ ಸ್ನೇಹಿತರ ವಯಸ್ಸನ್ನು ಪಟಪಟನೆ ಹೇಳುತ್ತ ಮಜಾ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:09 pm, Mon, 16 October 23