Viral Story: ಅಳುವುದಕ್ಕೆ ಅನುಮತಿಯಿದೆ, ಆದರೆ ಸದ್ದಿಲ್ಲದೆ ಅಳಬೇಕು, ಹೀಗೊಂದು ಪ್ರಶ್ನೆಪತ್ರಿಕೆಯಲ್ಲಿ ಸಾಮಾನ್ಯ ಸೂಚನೆ
ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರಶ್ನೆ ಪತ್ರಿಕೆಯ ಮೊದಲ ಪುಟದಲ್ಲಿಯೇ ಕೆಲವೊಂದು ಅಗತ್ಯ ಮಾರ್ಗದರ್ಶಿಗಳನ್ನು ನೀಡಲಾಗಿರುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಉತ್ತರಿಸಿ, ಪ್ರಶ್ನೆಪತ್ರಿಕೆಯ ಮೇಲೆ ಪೆನ್ನಿನಿಂದ ಗೀಚಬಾರದು ಇತ್ಯಾದಿ ಅತಿ ಅಗತ್ಯ ಮಾರ್ಗದರ್ಶಿಗಳನ್ನು ನೀಡಿರಲಾಗುತ್ತದೆ. ಆದರೆ ಇಲ್ಲೊಂದು ವೈರಲ್ ಆಗಿರುವ ಪ್ರಶ್ನೆ ಪತ್ರಿಕೆಯಲ್ಲಿ ಪರಿಕ್ಷಾ ಕೊಠಡಿಯಲ್ಲಿ ಅಳುವುದಕ್ಕೆ ಅನುಮತಿಯಿದೆ ಆದರೆ ಸದ್ದಿಲ್ಲದೆ ಅಳಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.
ಶಾಲಾ ಕಾಲೇಜುಗಳಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರಶ್ನೆ ಪತ್ರಿಕೆಯ ಮೊದಲ ಪುಟದಲ್ಲಿಯೇ ಕೆಲವೊಂದು ಅಗತ್ಯ ಸೂಚನೆಗಳನ್ನು ಅಥವಾ ಮಾರ್ಗದರ್ಶಿಗಳನ್ನು ನೀಡಲಾಗಿರುತ್ತದೆ. ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಉತ್ತರ ಬರೆಯಿರಿ, ಪ್ರಶ್ನೆ ಪತ್ರಿಕೆಯು ಮೂರು ವಿಭಾಗಗಳನ್ನು ಒಳಗೊಂಡಿದೆ, ಪ್ರತಿ ಪ್ರಶ್ನೆಗೆ ನಮೂದಿಸಲಾದ ಅಂಕಗಳನ್ನು ಪ್ರಶ್ನೆ ಪತ್ರಿಕೆಯ ಕೊನೆಯಲ್ಲಿ ನೀಡಲಾಗಿದೆ. ಪ್ರಶ್ನೆ ಪತ್ರಿಕೆಯ ಮೇಲೆ ಏನನ್ನೂ ಗೀಚಬಾರದು ಹೀಗೆ ಕೆಲವೊಂದು ಅಗತ್ಯ ಮಾರ್ಗದರ್ಶಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಹಾಗೂ ಈ ಮಾರ್ಗದರ್ಶಿಗಳನ್ನು ಪರೀಕ್ಷೇ ಬರೆಯುವಂತಹ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆದರೆ ಇಲ್ಲೊಂದು ಪ್ರಶ್ನೆಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿಚಿತ್ರ ಮಾರ್ಗದರ್ಶಿಯೊಂದನ್ನು ನೀಡಲಾಗಿದೆ. ಅದೇನೆಂದರೆ ಅಳುವುದಕ್ಕೆ ಅನುಮತಿಯಿದೆ, ಆದರೆ ಸದ್ದಿಲ್ಲದೆ ಅಳಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಈ ಒಂದು ವಿಚಿತ್ರ ಮಾರ್ಗದರ್ಶಿಯನ್ನು ಒಳಗೊಂಡಿರುವ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.
ಹೌದು ಯಾವುದೋ ಒಂದು ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ಬ್ಯಾಚ್ ಪ್ರಶ್ನೆ ಪತ್ರಿಕೆಯಲ್ಲಿ ಈ ಮಾರ್ಗದರ್ಶಿಯನ್ನು ನೀಡಲಾಗಿದ್ದು, ಅಳುವುದಕ್ಕೆ ಅನುಮತಿಯಿದೆ, ಆದರೆ ದಯವಿಟ್ಟು ಸದ್ದಿಲ್ಲದೆ ಅಳಬೇಕು, ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಕಣ್ಣೀರು ಒರೆಸಬಾರದೆಂದು” ಸೂಚನೆಯನ್ನು ನೀಡಲಾಗಿದೆ.
ಇದನ್ನೂ ಓದಿ: ಸೆಕೆಂಡಿನಲ್ಲಿ ನಿಮ್ಮ ವಯಸ್ಸನ್ನು ತಿಳಿದುಕೊಳ್ಳಬೇಕೆ, ಈ ಚಾರ್ಟ್ ನೋಡಿ
ವೈರಲ್ ಪ್ರಶ್ನೆ ಪ್ರತಿಕೆ
ಸದ್ಯ ಈ ಪ್ರಶ್ನೆ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಒಂದು ವಿಚಿತ್ರ ಸೂಚನೆಗಳನ್ನು ಕಂಡು ಜನರು ನಸುನಕ್ಕಿದ್ದಾರೆ. ಇನ್ನೂ ಕೆಲವರು ಬಹುಷಃ ಪರೀಕ್ಷೆ ಬಹಳ ಕಷ್ಟವಿರಬೇಕು ಎಂದು ಹೇಳಿಕೊಂಡಿದ್ದಾರೆ. ಆದರೂ ಪ್ರಶ್ನೆಪತ್ರಿಕೆಯಲ್ಲಿ ಈ ವಿಚಿತ್ರ ಮಾರ್ಗದರ್ಶಿಯನ್ನು ಯಾಕಾಗಿ ಹಾಕಿದ್ದಾರೆ ಎಂದು ತಿಳಿದುಬಂದಿಲ್ಲ.