ವಿಮಾನದಲ್ಲಿ ಬಾಂಬ್ ಶಂಕೆ: ಅದು ಬಾಂಬ್ ಅಲ್ಲ, ಅಡಲ್ಟ್ ಡೈಪರ್
ಅಮೆರಿಕದ ಪನಾಮ ಸಿಟಿಯಿಂದ ಫ್ಲೋರಿಡಾದ ಟ್ಯಾಂಪಾ ನಗರಕ್ಕೆ ತೆರಳುತ್ತಿದ್ದ ವಿಮಾನದಲ್ಲಿನ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಶಂಕಿಸಿ, ಪನಾಮ ವಿಮಾನ ನಿಲ್ದಾಣದಲ್ಲಿಯೇ ಆ ವಿಮಾನವನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ, ಆದರೆ ತನಿಖೆ ವೇಳೆ ಶೌಚಾಲಯದಲ್ಲಿ ಬಾಂಬ್ ಅಲ್ಲ ಬದಲಿಗೆ ಅಡಲ್ಟ್ (ವಯಸ್ಕರ) ಡೈಪರ್ ಎಂದು ತಿಳಿದು ಬಂದಿದೆ.
ವಿಮಾನಗಳಲ್ಲಿ ಬಾಂಬ್ ಇಟ್ಟು ಜನಸಾಮಾನ್ಯರಿಗೆ ಬೆದರಿಸುವಂತಹ ಹಲವಾರು ಘಟನೆಗಳನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಇಂತಹ ಘಟನೆಗಳು ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತದೆ. ಇದೇ ರೀತಿಯ ಘಟನೆ ಇತ್ತೀಚಿಗೆ ಅಮೆರಿಕದಲ್ಲಿ ನಡೆದಿದ್ದು, ಪನಾಮ ಸಿಟಿಯಿಂದ ಟ್ಯಾಂಪಾ ಸಿಟಿಗೆ ಹೊರಟಿದ್ದ ಕೋಪಾ ಏರ್ಲೈನ್ಸ್ ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಶಂಕಿಸಿ, ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಏನಿದು ಘಟನೆ ಎಂದು ನೋಡುವುದಾದರೆ, ಕೋಪಾ ಏರ್ಲೈನ್ ವಿಮಾನವು ಶುಕ್ರವಾರ ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಟ್ಯಾಂಪಾ ನಗರಕ್ಕೆ ತೆರಳುತ್ತಿದ್ದಾಗ, ವಿಮಾನದೊಳಗಿನ ಶೌಚಾಲಯದಲ್ಲಿ ಅನುಮಾನಾಸ್ಪದ ವಸ್ತುವಿನ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆ ವಸ್ತುವನ್ನು ಬಾಂಬ್ ಎಂದು ತಪ್ಪಾಗಿ ತಿಳಿದು ವಿಮಾನವನ್ನು ಪನಾಮ ಏರ್ಪೋರ್ಟ್ನಲ್ಲಿಯೇ ತುರ್ತು ಭೂಸ್ಪರ್ಷ ಮಾಡಲಾಯಿತು. ಆ ವಿಮಾನದಲ್ಲಿದ್ದ 144 ಪ್ರಯಾಣಿಕರನ್ನು ಕೆಳಗಿಳಿಸಿ, ವಿಮಾನವನ್ನು ಭದ್ರತಾ ತಂಡದ ಸಹಾಯದಿಂದ ಸಂಪೂರ್ಣವಾಗಿ ಪರಿಶೀಲಿಸಲಾಯಿತು.
ಪನಾಮ ನಗರದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ತಂಡವು ವಿಮಾನದ ಶೋಧವನ್ನು ನಡೆಸಿ ಮತ್ತು ಶಂಕಿತ ಬಾಂಬ್ ವಾಸ್ತವವಾಗಿ ಅಡಲ್ಟ್ ಡೈಪರ್ ಆಗಿದ್ದು, ವಿಮಾನದಲ್ಲಿ ಯಾವುದೇ ರೀತಿಯ ಬಾಂಬ್ ಇಲ್ಲ ಎಂದು ಹೇಳಲಾಗಿದೆ. ಬಾಂಬ್ ಇದೆ ಎಂಬ ಗೊಂದಲದಿಂದ ಉಂಟಾದ ವಿಳಂಬದ ಹೊರತಾಗಿಯೂ ಕೋಪಾ ಏರ್ಲೈನ್ ವಿಮಾನವು ಅಂತಿಮವಾಗಿ ತನ್ನ ಪ್ರಯಾಣವನ್ನು ಪುನರಾರಂಭಿಸಿ, ಸುರಕ್ಷಿತವಾಗಿ ಟ್ಯಾಂಪಾ ನಗರಕ್ಕೆ ತಲುಪಿತು.
ಇದನ್ನೂ ಓದಿ:ಅಳುವುದಕ್ಕೆ ಅನುಮತಿಯಿದೆ, ಆದರೆ ಸದ್ದಿಲ್ಲದೆ ಅಳಬೇಕು, ಹೀಗೊಂದು ಪ್ರಶ್ನೆಪತ್ರಿಕೆಯಲ್ಲಿ ಸಾಮಾನ್ಯ ಸೂಚನೆ
ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್
Luego de una alerta por el @aacivilpty, de un objeto extraño en una aerolínea las unidades de Fuerzas Especiales activaron el protocolo de emergencia y al ser verificado resultó ser un pañal desechable de adulto. #Prevención pic.twitter.com/n3pBqQZki9
— Policía Nacional (@ProtegeryServir) October 13, 2023
ವಿಮಾನವನ್ನು ಸುರಕ್ಷಿತ ರನ್ ವೇಯಲ್ಲಿ ಲ್ಯಾಂಡಿಗ್ ಮಾಡಿ, ವಿಶೇಷ ಶ್ವಾನದಳ ಮತ್ತು ಸಶಸ್ತ್ರ ಪಡೆಗಳ ಸಹಾಯದಿಂದ ವಿಮಾನವನ್ನು ಸಂಪೂರ್ಣವಾಗಿ ಪರೀಕ್ಷಿಸಲಾಯಿತು. ಮತ್ತು ಆ ಶಂಕಿತ ವಸ್ತು ಬಾಂಬ್ ಅಲ್ಲ ಬದಲಿಗೆ ಅದು ಅಡಲ್ಟ್ ಡೈಪರ್ ಅಷ್ಟೆ. ವಿಮಾನದಲ್ಲಿ ಯಾವುದೇ ರೀತಿಯ ಬಾಂಬ್ ಇಲ್ಲ” ಎಂದು ವಿಮಾನ ನಿಲ್ದಾಣದ ಭದ್ರತಾ ತಂಡದ ಮುಖ್ಯಸ್ಥ ಜೋಸ್ ಕ್ಯಾಸ್ಟ್ರೋ ಹೇಳಿಕೆ ನೀಡಿದ್ದಾರೆ. ಪನಾಮದ ರಾಷ್ಟ್ರೀಯ ಪೋಲಿಸ್ ದಳ ತನ್ನ X ಖಾತೆಯಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ