Viral: ಯುವರಾಜ್ ಸಿಂಗ್ ಪತ್ನಿ ಹೆಝೆಲ್ ಕೀಚ್ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ
Cancer Patients : 'ಕತ್ತರಿಸಿದ ಕೂದಲು ವ್ಯರ್ಥವಾಗದೇ ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಸಹಾಯವಾಗಲಿ ಎಂದು ದಾನ ಮಾಡಿದೆ. ಇದು ಪೇಡ್ ಪ್ರೊಮೋಷನ್ ಅಲ್ಲ, ಈ ಚಾರಿಟಿಗೂ ನನಗೂ ಸಂಬಂಧವಿಲ್ಲ. ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಬೇಕೆಂದು ಗೂಗಲ್ ಸರ್ಚ್ಗೆ ಕೇಳಿದೆ. ಅದು ತೋರಿದ ಹಾದಿಯಲ್ಲಿ ನಡೆದೆ' ಎಂದಿದ್ದಾರೆ ಯುವರಾಜ್ ಸಿಂಗ್ ಪತ್ನಿ ಹೆಝೆಲ್ ಕೀಚ್.
Donate Hair: ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ (Yuvraj Singh) ಹೆಝೆಲ್ ಕೀಚ್ ಸಿಂಗ್ (Hazel Keech) ಎರಡನೇ ಪ್ರಸವಾನಂತರ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವಾಗ ರೋಗಿಗಳು ಕೂದಲು ಕಳೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ವಿಗ್ ಧರಿಸುವುದು ಅನಿವಾರ್ಯವಾಗುತ್ತದೆ. ಈ ವಿಗ್ ತಯಾರಿಸಲು ಸಹಾಯವಾಗಲೆಂದು ಹೆಝೆಲ್ ಈ ನಿರ್ಧಾರ ತೆಗೆದುಕೊಂಡರು. 2022ರಲ್ಲಿ ಯುವರಾಜ್ ಮತ್ತು ಹೆಝೆಲ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಈ ಆಗಸ್ಟ್ನಲ್ಲಿ ಎರಡನೇ ಮಗು ಔರಾ ಅವರ ಮಡಿಲನ್ನು ತುಂಬಿದ್ದಾಳೆ.
ಇದನ್ನೂ ಓದಿ : Viral; ಸೆಕೆಂಡಿನಲ್ಲಿ ನಿಮ್ಮ ವಯಸ್ಸನ್ನು ತಿಳಿದುಕೊಳ್ಳಬೇಕೆ, ಈ ಚಾರ್ಟ್ ನೋಡಿ
ಪ್ರಸವಾನಂತರ ಕೂದಲು ಉದುರುವಿಕೆ ಅತ್ಯಂತ ಸಹಜ. ಅದನ್ನು ಚಿಕಿತ್ಸೆಯ ಮೂಲಕ ನಿಭಾಯಿಸುವುದರ ಬದಲಾಗಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಲು ಹೆಝೆಲ್ ನಿರ್ಧರಿಸಿದರು. ತಮ್ಮ ಈ ನಿರ್ಧಾರವು ಒಳ್ಳೆಯ ಕಾರ್ಯಕ್ಕೆ ಸದುಪಯೋಗವಾಗಲಿ ಎಂದು ಕ್ಯಾನ್ಸರ್ ರೋಗಿಗಳ ವಿಗ್ ತಯಾರಿಕೆಗೆ ಕೂದಲನ್ನು ದಾನ ಮಾಡಿದರು.
ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಹೆಝೆಲ್
View this post on Instagram
‘ಮಗು ಹುಟ್ಟಿದ ಮೇಲೆ ಅನೇಕ ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುತ್ತಾರೆ ಎನ್ನುವುದು ಈ ಮೊದಲು ನನಗೆ ಅರ್ಥವಾಗಿರಲಿಲ್ಲ. ಪ್ರಸವಾನಂತರ ನನಗಿದು ಅರ್ಥವಾಯಿತು. ಬಾತ್ರೂಮಿಗೆ ಹೋಗಲು ಬಿಡದೆ ಸತತ ಅಳುತ್ತಲೇ ಇರುವ ಮುದ್ದು ಕೂಸನ್ನು ಸಂಭಾಳಿಸುವಾಗ ಉದುರುವ ಕೂದಲಿನ ಕಡೆ ಗಮನ ಕೊಡಲು ಸಾಧ್ಯವಾಗುವುದೆ? ಹಾಗಾಗಿ ಮತ್ತೊಮ್ಮೆ ಕೂದಲನ್ನು ಕತ್ತರಿಸಿಕೊಳ್ಳಬೇಕೆಂದು ನಿರ್ಧರಿಸಿದೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ದಾನವನ್ನೂ ಮಾಡಿದೆ’ ಎಂದಿದ್ದಾರೆ ಹೆಝೆಲ್.
ಟಿವಿ9 ಕನ್ನಡ ಡಿಜಿಟಲ್ ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಲು ಕ್ಲಿಕ್ ಮಾಡಿ
ಲಂಡನ್ನಲ್ಲಿ ವಾಸವಾಗಿರುವ ಹೆಝೆಲ್, ‘ನನ್ನ ಕೂದಲನ್ನು ಸ್ವೀಕರಿಸಿದ್ದಕ್ಕೆ @officiallittleprincesstrust ಗೆ ಧನ್ಯವಾದ. ದಯವಿಟ್ಟು ಗಮನಿಸಿ, ಇದು ಯಾವುದೇ ರೀತಿಯ ಪೇಡ್ ಪ್ರೊಮೋಷನ್ ಅಲ್ಲ. ನನಗೂ ಈ ಚಾರಿಟಿಗೂ ಸಂಬಂಧವಿಲ್ಲ, ಪರಿಚಯವೂ ಇಲ್ಲ. ನಾನು ಕೂದಲನ್ನು ದಾನ ಮಾಡಲು hair donation for wig ಎಂದು ಗೂಗಲ್ನಲ್ಲಿ ಸರ್ಚ್ ಕೊಟ್ಟಾಗ ಈ ಚಾರಿಟಿ ಸಿಕ್ಕಿತು’ ಎಂದಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:04 pm, Mon, 16 October 23