AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸರ್ಕೋಮಾ ಕ್ಯಾನ್ಸರ್; ‘ಈತನಕವೂ ನನ್ನ ಚಿಕಿತ್ಸೆಗೆ ನಾನೇ ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದೇನೆ’

Cancer Treatment : ಚಿಕ್ಕವಯಸ್ಸಿನಲ್ಲಿಯೇ ಸರ್ಕೋಮಾ ಕ್ಯಾನ್ಸರ್​ಗೆ ಒಳಗಾದೆ. ಅಪ್ಪ ಅಮ್ಮ ನನಗೆ ಚಿಕಿತ್ಸೆ ಕೊಡಿಸಲಿಲ್ಲ. ಆಗ ನಿಧಿ ಸಂಗ್ರಹ ಮಾಡಿ ಚಿಕಿತ್ಸೆ ತೆಗೆದುಕೊಳ್ಳಲಾರಂಭಿಸಿದೆ. ಇದೀಗ ಕ್ಯಾನ್ಸರ್​ ನಾಲ್ಕನೇ ಸ್ಟೇಜ್​ನಲ್ಲಿದೆ. ನನ್ನ ಹೋರಾಟ ನಿರಂತರವಾಗಿರುತ್ತದೆ. ನನ್ನ ಚಿಕಿತ್ಸೆಗೆ ನಾನೇ ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದೇನೆ. ನಾನು ಈ ಯುದ್ಧದಲ್ಲಿ ಜಯಶಾಲಿಯಾಗುತ್ತೇನೆ.'

Viral Video: ಸರ್ಕೋಮಾ ಕ್ಯಾನ್ಸರ್; 'ಈತನಕವೂ ನನ್ನ ಚಿಕಿತ್ಸೆಗೆ ನಾನೇ ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದೇನೆ'
ದೀಬಾ ಫರ್ಯಾಲ
ಶ್ರೀದೇವಿ ಕಳಸದ
|

Updated on: Oct 14, 2023 | 2:51 PM

Share

Cancer: ‘ನನ್ನ ಅಪ್ಪ ನನ್ನೆದುರೇ ಅಮ್ಮನನ್ನು ಹೊಡೆಯುತ್ತಿದ್ದರು. ಕ್ರಮೇಣ ಅಪ್ಪ ನನ್ನ ಶಾಲೆಯ ಫೀಸ್​ ತುಂಬುವುದನ್ನೂ ಕಡೆಗಣಿಸಿದರು. ಈ ಎಲ್ಲಾ ಪರಿಣಾಮವಾಗಿ ನಾನು ಖಿನ್ನತೆಗೆ ಜಾರಿದೆ. ಚಿಕ್ಕವಯಸ್ಸಿನಲ್ಲಿಯೇ ಸರ್ಕೋಮಾ ಕ್ಯಾನ್ಸರ್​ಗೆ ಒಳಗಾದೆ. ನನ್ನ ಪೋಷಕರು ನನ್ನ ಚಿಕಿತ್ಸೆಗೆ ಹಣವನ್ನೂ ಹೊಂದಿಸಲಿಲ್ಲ. ಆಗ ನಾನೇ ನನ್ನ ಚಿಕಿತ್ಸೆಗೆ ನಿಧಿ ಸಂಗ್ರಹಿಸಲಾರಂಭಿಸಿದೆ. ಚಿಕಿತ್ಸೆ ಆರಂಭವಾಯಿತು. ಆದರೆ 8 ತಿಂಗಳ ನಂತರ ಮತ್ತೆ 8 ಗಡ್ಡೆಗಳು ಕಾಣಿಸಿಕೊಂಡವು. ಆಗಲೂ ಧೃತಿಗೆಡಲಿಲ್ಲ. ಈತನಕ ಆರು ಗಡ್ಡೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗಿದೆ. ಪಾರ್ಟ್​ ಟೈಮ್​ ಕೆಲಸ, ಟ್ಯೂಷನ್​ ಹೇಳುವ ಮೂಲಕ ನನ್ನ ಚಿಕಿತ್ಸೆಗೆ ನಾನೇ ಹಣ ಹೊಂದಿಸಿಕೊಳ್ಳುತ್ತಿದ್ದೇನೆ. ಕ್ಯಾನ್ಸರ್ ಈಗ 4ನೇ ಹಂತದಲ್ಲಿದ್ದರೂ ಇದರಿಂದ ಮುಕ್ತಳಾಗುತ್ತೇನೆ ಎಂಬ ಭರವಸೆ ಇದೆ.’ ದೀಬಾ ಫರ್ಯಾಲ 

ಇದನ್ನೂ ಓದಿ : Viral: ಲಂಡನ್​; ‘ಮಿಸ್ಟರ್​ ರೈಟ್’; ಸಿಗದಿದ್ದಕ್ಕೆ ತನ್ನನ್ನು ತಾನೇ ಮದುವೆಯಾದ ಮಹಿಳೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

3 ಗಂಟೆಗಳ ಹಿಂದೆ ಇನ್​ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಈತನಕ ಸುಮಾರು 30,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ದೀಬಾಗೆ ಸ್ಥೈರ್ಯ ತುಂಬಿದ್ದಾರೆ. ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುವ ಪೋಷಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಬಾ ಫರ್ಯಾಲ ಪ್ರಯಾಣ ಇಲ್ಲಿದೆ

ಇಂಥ ತಂದೆತಾಯಿಗಳ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ, ಇಷ್ಟೊಂದು ಸ್ವಾರ್ಥಪರ ಸಮಾಜದಲ್ಲಿ ಇಂಥವರು ಹೇಗೆ ಬದುಕಬೇಕು ಎಂದು ಕೇಳಿದ್ದಾರೆ ಒಬ್ಬರು. ನಿಮ್ಮ ಹೆತ್ತವರ ಬಗ್ಗೆ ಬೇಸರವಿದೆ, ನೀವು ಈ ಯುದ್ಧದಲ್ಲಿ ಏಕಾಂಗಿಯಾಗಿ ಹೋರಾಡಬೇಕು, ಈ ಬಗ್ಗೆ ಅತ್ಯಂತ ವಿಷಾದವಿದೆ ಕ್ಷಮಿಸಿ, ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಎಲ್ಲಾದರೂ ಉಂಟೆ? ಕಸವೇ ಕಾಸು, ಅದುವೇ ಫೀಸು; ಆಸ್ಸಾಂನ ಈ ವಿಶಿಷ್ಟ ಶಾಲೆ ನೋಡಿ

ಸಂಬಂಧದಲ್ಲಿ ಪರಸ್ಪರ ಗೌರವ, ಸೌಹಾರ್ದ ಇಲ್ಲದೇ ಇದ್ದಾಗ ಯಾಕೆ ಮಕ್ಕಳನ್ನು ಹುಟ್ಟಿಸುತ್ತಾರೆ ಎಂದು ಮತ್ತೊಬ್ಬರು. ನೀವು ಭರವಸೆಯಂತೆ ಕಾಣುತ್ತಿದ್ದೀರಿ, ಈ ಹಂತದಲ್ಲಿಯೂ ನಿಮ್ಮನ್ನು ನೀವೇ ನಿಭಾಯಿಸಿಕೊಳ್ಳುತ್ತಿದ್ದೀರಿ, ಅದೂ ಕ್ಯಾನ್ಸರ್​ನಂತಹ ಮಾರಕ ಮತ್ತು ತುಟ್ಟಿ ರೋಗದೊಂದಿಗೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ