Viral: ಲಂಡನ್​; ‘ಮಿಸ್ಟರ್​ ರೈಟ್​’ ಸಿಗದಿದ್ದಕ್ಕೆ ತನ್ನನ್ನು ತಾನೇ ಮದುವೆಯಾದ ಮಹಿಳೆ

Self Marriage? ಇದೀಗ ಲಂಡನ್​ನ ಮಹಿಳೆಯೊಬ್ಬಳು ತನ್ನನ್ನು ತಾನೇ ಮದುವೆಯಾಗಿದ್ದಾಳೆ. ಕಾರಣ ಏನೆಂದು ತಿಳಿದರೆ ಕೆಲವರಿಗೆ ಖುಷಿಯಾಗಬಹುದು, ಇನ್ನೂ ಕೆಲವರಿಗೆ ಅಚ್ಚರಿ ಎನ್ನಿಸಬಹುದು, ಮತ್ತೂ ಕೆಲವರಿಗೆ ಇದು ಮೂರ್ಖತನವೆನ್ನಿಸಬಹುದು. ಆದರೆ ಈ ಮಹಿಳೆಯಂತೂ ಫುಲ್​ ಖುಷ್​! ಯಾಕೆ ಎಂದು ತಿಳಿದುಕೊಳ್ಳಬೇಕೆ? ಈ ಸುದ್ದಿಯನ್ನು ಓದಿ .

Viral: ಲಂಡನ್​; 'ಮಿಸ್ಟರ್​ ರೈಟ್​' ಸಿಗದಿದ್ದಕ್ಕೆ ತನ್ನನ್ನು ತಾನೇ ಮದುವೆಯಾದ ಮಹಿಳೆ
ಸಾರಾ ವಿಲ್ಕಿನ್ಸನ್​
Follow us
ಶ್ರೀದೇವಿ ಕಳಸದ
|

Updated on:Oct 14, 2023 | 12:00 PM

London: ಮದುವೆಯಾಗಬಯಸುವ ಸಂಗಾತಿಯ ಬಗ್ಗೆ ನಿರೀಕ್ಷೆಗಳು ಸಹಜ. ಆದರೆ ಕೆಲವರ ನಿರೀಕ್ಷೆಗಳು  ಬಲುಬೇಗ ಪೂರೈಸುತ್ತವೆ ಇನ್ನೂ ಕೆಲವರವು ದೀರ್ಘಕಾಲ. ಇದೀಗ ಲಂಡನ್​ನ ಮಹಿಳೆಯೊಬ್ಬಳು ‘ಮಿಸ್ಟರ್​ ರೈಟ್​’ಗಾಗಿ ಕಾಯ್ದು ಕಾಯ್ದು ಬೇಸತ್ತಳೇನೋ ನಿಜ. ಆದರೆ ನಿರಾಸೆಗೊಳ್ಳಲಿಲ್ಲ. ಕೊನೆಗೆ ತನ್ನನ್ನು ತಾನೇ ಮದುವೆಯಾಗಿಬಿಟ್ಟಳು. ಈ ಮದುವೆಗಾಗಿ ರೂ. 10 ಲಕ್ಷ ಖರ್ಚು ಮಾಡಿದ್ದಾಳೆ. ಪ್ರತೀ ತಿಂಗಳು ತನ್ನ ಆದರ್ಶಯುತ ಮದುವೆಗಾಗಿ ಎಂದು ಮೀಸಲಿಡುತ್ತಿದ್ದ ಉಳಿತಾಯದ ಹಣವನ್ನೇ ಇದಕ್ಕೆ ತೊಡಗಿಸಿದ್ದಾಳೆ. ಈಕೆಯ ಹೆಸರು ಸಾರಾ ವಿಲ್ಕಿನ್ಸನ್​ (Sarah Wilkinson) ವಯಸ್ಸು 42. ಅಂತೂ ತನ್ನ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಬೇಕೆನ್ನುವ ಆಸೆಯನ್ನು ಈಕೆ ಈಡೇರಿಸಿಕೊಂಡಿದ್ದಾಳೆ.

ಇದನ್ನೂ ಓದಿ : Viral Video: ಎಲ್ಲಾದರೂ ಉಂಟೆ? ಕಸವೇ ಕಾಸು, ಅದುವೇ ಫೀಸು; ಆಸ್ಸಾಂನ ಈ ವಿಶಿಷ್ಟ ಶಾಲೆ ನೋಡಿ

ತನ್ನನ್ನು ತಾನೇ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಸಾರಾ​ ನಿಶ್ಚಿತಾರ್ಥಕ್ಕಾಗಿ ಉಂಗುರ ಖರೀದಿಸಿದಳು. ನಂತರ ಮದುವೆಯ ತಯಾರಿ ನಡೆಸಿದಳು. ಸಫೊಲ್ಕ್‌ನ ಫೆಲಿಕ್ಸ್‌ಸ್ಟೋವ್‌ನಲ್ಲಿರುವ ಹಾರ್ವೆಸ್ಟ್ ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಮದುವೆ ಎನ್ನುವ ವಿಶೇಷ ದಿನವನ್ನು ಆಚರಿಸಿಕೊಂಡಳು. ಸಾರಾಹ್​, ‘ತಾನು ಹೀಗೆ ಎಲ್ಲರ ಗಮನ ಸೆಳೆದು ಕೇಂದ್ರಬಿಂದುವಾಗಿರಲು ಈ ದಿನ ಅತ್ಯಂತ ಸೂಕ್ತ ಮತ್ತು ಸುಂದರವಾದ ದಿನ’ ಎಂದಿದ್ದಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ದಯಾಮರಣದಿಂದ ರಕ್ಷಿಸಲ್ಪಟ್ಟ ಈ ನಾಯಿ ಕಳೆದ 10 ವರ್ಷಗಳಲ್ಲಿ 150 ಬೆಕ್ಕುಗಳಿಗೆ ಸಾಕುತಂದೆಯಾದ ಕಥೆ

‘ಈ ಸಮಾರಂಭವು ಅಧಿಕೃತ ವಿವಾಹವಾಗಿರಲಿಲ್ಲ, ಆದರೆ ನನ್ನ ಮದುವೆಯ ದಿನವಾಗಿತ್ತು. ನನ್ನ ಪಕ್ಕದಲ್ಲಿ ನನ್ನ ಸಂಗಾತಿ ಇರಲಿಲ್ಲ ನಿಜ. ಆದರೆ ನಾನ್ಯಾಕೆ ಮದುವೆಯ ಅವಕಾಶವನ್ನು ತಪ್ಪಿಸಿಕೊಳ್ಳಬೇಕು? ಅದಕ್ಕಾಗಿಯೆಂದೇ ಹಣವನ್ನು ಕೂಡಿಟ್ಟಿದ್ದೆ. ಯಾವುದಕ್ಕೆ ಕೂಡಿಟ್ಟಿದ್ದೆನೋ ಅದಕ್ಕಾಗಿ ಆ ಹಣ ವಿನಿಯೋಗಿಸಿದೆ’ ಎಂದಿದ್ಧಾಳೆ ಸಾರಾ​.

ಇದನ್ನೂ ಓದಿ : Viral Video: ಸಿಂಗಲ್ ಪೇರೆಂಟ್​; ತಾಯಂದಿರ ದಿನಕ್ಕೆ ಅಮ್ಮನಂತೆ ವೇಷ ಧರಿಸಿ ಅಪ್ಪ ಶಾಲೆಗೆ ಬಂದ ಆ ದಿನ

ಸೆಪ್ಟೆಂಬರ್ 30 ರಂದು ನಡೆದ ಸಮಾರಂಭದಲ್ಲಿ ಸಾರಾ​ಳ 40 ಆತ್ಮೀಯ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು. ಪ್ರತಿಯೊಬ್ಬರೂ ಇಡೀ ದಿನ ನಗುನಗುತ್ತಲೇ ಇದ್ದರು. ಇದು ತುಂಬಾ ವಿಶೇಷವಾದ ದಿನ ಎಂದು ಅವರೆಲ್ಲ ಹಾರೈಸಿದರು ಎಂದಿದ್ದಾಳೆ ಸಾರಾ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:55 am, Sat, 14 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ