Viral Video: ‘ನನ್ನ ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಯೊಳಗೆ ಇಳಿದ ನಾಯಿ’

Funeral: ಈ ಪ್ರಕರಣವನ್ನುಕೆಲವರು ಇದನ್ನು ಕರುಣಾಜನಕವಾಗಿ ನೋಡಿದ್ದಾರೆ. ಇನ್ನೂ ಕೆಲವರು ಹಾಸ್ಯದಿಂದ. ಆದರೆ ಇದನ್ನು ಪೋಸ್ಟ್ ಮಾಡಿದವರು ಮಾತ್ರ ವಸ್ತುನಿಷ್ಠವಾಗಿ ಇದನ್ನು ನೋಡಿದ್ದಾರೆ. ಈ ನಾಯಿ ಅಕಸ್ಮಾತ್ ಆಗಿ ಕುಣಿಯೊಳಗೆ ಇಳಿದಿದೆಯೋ ಅಥವಾ ಚಿಕ್ಕಪ್ಪನನ್ನು ಸಮಾಧಿ ಮಾಡಲು ನಾನು ಬಿಡುವುದಿಲ್ಲ ಎಂದು ಹಠ ಮಾಡುತ್ತಿದೆಯೋ? ನೀವು ಹೇಗೆ ಗ್ರಹಿಸುತ್ತೀರಿ ಎಂಬ ಕುತೂಹಲ ನಮ್ಮದು.

Viral Video: 'ನನ್ನ ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಯೊಳಗೆ ಇಳಿದ ನಾಯಿ'
ಚಿಕ್ಕಪ್ಪನನ್ನು ಸಮಾಧಿ ಮಾಡುವ ಮುನ್ನ ನಾಯಿ ಕುಣಿಯೊಳಗೆ ಇಳಿದಿರುವುದು
Follow us
ಶ್ರೀದೇವಿ ಕಳಸದ
|

Updated on: Oct 14, 2023 | 5:03 PM

Dog: ನಿಮ್ಮಲ್ಲಿ ನಿಮ್ಮ ನಾಯಿಯನ್ನೂ ಅಂತ್ಯಕ್ರಿಯೆಗೆ ಕರೆತರುವ ಪದ್ಧತಿ ಇದೆಯಾ? ನಾಯಿ ನಿಮ್ಮ ಚಿಕ್ಕಪ್ಪನ  ಅಂತ್ಯಕ್ರಿಯೆಗೆ (Funeral) ಪ್ರತಿರೋಧ ವ್ಯಕ್ತಪಡಿಸುತ್ತಿದೆ, ಅದರ ನಡೆಯನ್ನು ಪ್ರೀತಿಸಿ. ಚಿಕ್ಕಪ್ಪ ಸಮಾಧಿಯಲ್ಲಿ ಇರುವುದು ಅದಕ್ಕೆ ಇಷ್ಟವಿಲ್ಲ, ಅದಕ್ಕೇ ಅದು ಹಾಗೆ ಮಾಡುತ್ತಿದೆ. ನಾಯಿಯ ಬಗ್ಗೆ ನಿಮ್ಮೆಲ್ಲರಿಗೂ ಕೋಪ ಬಂದಿರಬಹುದು, ಆದರೆ ಅದಕ್ಕೆ ಅದರದೇ ಆದ ಸಂಕಟವಿದೆ ಅರ್ಥ ಮಾಡಿಕೊಳ್ಳಿ. ಇದನ್ನು ತಮಾಷೆಯಾಗಿ ನೋಡುತ್ತಿರುವ ಮತ್ತು ಪ್ರತಿಕ್ರಿಯಿಸುತ್ತಿರುವ ಮನಸ್ಸುಗಳ ಬಗ್ಗೆ ಬೇಸರವೆನ್ನಿಸುತ್ತಿದೆ. ನಾಯಿ ತನ್ನ ದುಃಖವನ್ನು ವ್ಯಕ್ತಪಡಿಸುತ್ತಿದೆ, ಚಿಕ್ಕಪ್ಪನನ್ನು ಬಿಟ್ಟಿರಲು ಅದಕ್ಕೆ ಮನಸ್ಸಿಲ್ಲ, ಅದು ಅಳುತ್ತಿದೆ, ಎದೆಗುಂದಿದೆ… ಹೀಗೆ ಅನೇಕರು ರೆಡ್ಡಿಟ್​ನ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಸರ್ಕೋಮಾ ಕ್ಯಾನ್ಸರ್; ‘ಈತನಕವೂ ನನ್ನ ಚಿಕಿತ್ಸೆಗೆ ನಾನೇ ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದೇನೆ’

ಈ ಪೋಸ್ಟ್​ ಅನ್ನು ರೆಡ್ಡಿಟ್​ನಲ್ಲಿ ಸುಮಾರು 12 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈತನಕ ಇದನ್ನು 34,000 ಜನರು ಲೈಕ್ ಮಾಡಿದ್ದಾರೆ. 1,300 ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು, ಯಾರಾದರೂ ಇಂಥ ಸಂದರ್ಭದಲ್ಲಿ ನಾಯಿಯನ್ನು ಕರೆತರುತ್ತಾರಾ ಎಂದು ಕೇಳಿದ್ದಾರೆ. ಇಲ್ಲಿ ಎಲ್ಲರೂ ಎಷ್ಟು ಶಾಂತವಾಗಿದ್ದಾರೆ ಆ ನಾಯಿಯೊಂದನ್ನು ಬಿಟ್ಟು ಎಂದಿದ್ದಾರೆ ಉಳಿದವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಗಿಳಿದ ನಾಯಿ

My curious dog fell in to my uncle’s grave at his funeral. byu/paulie07 infunny

ನನ್ನ ಅಂತ್ಯಸಂಸ್ಕಾರದ ವೇಳೆ ನನ್ನೊಂದಿಗೆ ನನ್ನ ನಾಯಿಯೂ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ಒಬ್ಬರು. ಬಹುಶಃ ಇದು ನ್ಯೂಝಿಲ್ಯಾಂಡ್​ನಲ್ಲಿ ನಡೆದಿಸಬೇಕು ಎಂದಿದ್ದಾರೆ ಇನ್ನೊಬ್ಬರು. ಎಂಥ ಮೂರ್ಖತನ ಇದು ಯಾರಾದರೂ ಹೀಗೆ ಇಂಥ ಸಂದರ್ಭದಲ್ಲಿ ನಾಯಿಯನ್ನು ಕರೆತರುತ್ತಾರೆಯೇ? ಎಂದಿದ್ದಾರೆ ಮತ್ತೊಬ್ಬರು. ಹೌದು ಇದು ನ್ಯೂಝಿಲ್ಯಾಂಡ್​ ಮೂಲದ್ದೇ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಎಲ್ಲಾದರೂ ಉಂಟೆ? ಕಸವೇ ಕಾಸು, ಅದುವೇ ಫೀಸು; ಆಸ್ಸಾಂನ ಈ ವಿಶಿಷ್ಟ ಶಾಲೆ ನೋಡಿ

ನಿಮ್ಮ ಅಂಕಲ್​ ಕುಬ್ಜ ವ್ಯಕ್ತಿಯಾಗಿದ್ದರೆ? ಯಾಕೆ ಶವಪೆಟ್ಟಿಗೆ ಇಷ್ಟೊಂದು ಚಿಕ್ಕದಾಗಿದೆ ಎಂದು ಕೇಳಿದ್ದಾರೆ ಒಬ್ಬರು. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಉಡುಗೆ ತೊಡುಗೆ ನೋಡಿ ನಾನು ನಿರಾಶನಾಗಿದ್ದೇನೆ, ಅವರ ಬೂಟುಗಳು, ಶರ್ಟ್​, ಜೀನ್ಸ್… ಎಂದಿದ್ದಾರೆ ಇನ್ನೊಬ್ಬರು. ಅಂತ್ಯಸಂಸ್ಕಾರಕ್ಕೆ ನಾಯಿಯನ್ನು ನೀವೇಕರೆತಂದು, ಅದು ಅಲ್ಲೆಲ್ಲಾ ಓಡಾಡುವಂತೆ ಮಾಡಿ ಕೊನೆಗೆ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದೀರಿ ತಾನೆ? ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ