Viral Video: ವಿಚ್ಛೇದನ; ಈ ವಕೀಲೆ ಪಟ್ಟಿ ಮಾಡಿದ ‘ಅಸಂಬದ್ಧ ಕಾರಣ’ಗಳ ಬಗ್ಗೆ ನೀವೇನು ಹೇಳುತ್ತೀರಿ?

Divorce Reasons: 'ಹಾಗಿದ್ದರೆ ಮದುವೆಯನ್ನಾದರೂ ಯಾಕೆ ಆಗಬೇಕು?' ಎಂಬ ಶೀರ್ಷಿಕೆಯಲ್ಲಿ ತಾನ್ಯಾ ಅಪ್ಪಚು ಕೌಲ್​​ ಎಂಬ ವಕೀಲೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಒಂದೊಂದು ಕಾರಣವನ್ನು ನೋಡಿದರೆ ಖಂಡಿತ ಅಚ್ಚರಿಯೂ, ಬೇಸರವೂ ಆಗುತ್ತದೆ. ವಿವಾಹಪೂರ್ವ ಆಪ್ತಸಲಹೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ. ನೀವೇನಂತೀರಿ?

Viral Video: ವಿಚ್ಛೇದನ; ಈ ವಕೀಲೆ ಪಟ್ಟಿ ಮಾಡಿದ 'ಅಸಂಬದ್ಧ ಕಾರಣ'ಗಳ ಬಗ್ಗೆ ನೀವೇನು ಹೇಳುತ್ತೀರಿ?
ವಕೀಲೆ ತಾನ್ಯಾ ಅಪ್ಪಚು ಕೌಲ್
Follow us
ಶ್ರೀದೇವಿ ಕಳಸದ
|

Updated on:Oct 16, 2023 | 1:54 PM

Divorce: ಗಂಡಹೆಂಡತಿ (Husband Wife) ಒಟ್ಟಿಗೆ ಇರುವುದು ಅಸಾಧ್ಯವೆನ್ನಿಸಿದಾಗ ವಿಚ್ಛೇದನಕ್ಕೆ ಮೊರೆ ಹೋಗುತ್ತಾರೆ. ಆದರೆ ಯಾವೆಲ್ಲ ಕಾರಣಗಳಿಗೆ ವಿಚ್ಛೇದನವಾಗುತ್ತದೆ ಎನ್ನುವ ಸಂಗತಿಗಳಿಗೆ ಬಹುಶಃ ಕೊನೆಯೇ ಇಲ್ಲ. ಕೆಲ ಕಾರಣಗಳನ್ನು ನೋಡಿದಾಗ ಗಂಭೀರ ಎನ್ನಿಸಬಹುದು, ಇನ್ನೂ ಕೆಲವು ಅಸಂಬದ್ಧ ಎನ್ನಿಸಬಹುದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಕೀಲೆಯೊಬ್ಬರು ಪಟ್ಟಿ ಮಾಡಿದ ಕಾರಣಗಳನ್ನು ನೆಟ್ಟಿಗರು ಕುತೂಹಲದಿಂದ ಓದುತ್ತಿದ್ದಾರೆ. ನೆಟ್ಟಿಗರು ಈ ಬಗ್ಗೆ ಚರ್ಚಿಸಿದ್ದಾರೆ. ಈ ಪೋಸ್ಟ್​ ಓದಿದ ನಂತರ ನಿಮ್ಮ ಅಭಿಪ್ರಾಯ ಏನಿರುತ್ತದೆ?

ಇದನ್ನೂ ಓದಿ : Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು? 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಈತನಕ 1 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. yourinstalawyer ಎಂಬ ಇನ್​ಸ್ಟಾಗ್ರಾಂನಲ್ಲಿ ‘ಹಾಗಿದ್ದರೆ ಮದುವೆಯನ್ನಾದರೂ ಯಾಕೆ ಆಗಬೇಕು?’ ಎಂಬ ಶೀರ್ಷಿಕೆಯಲ್ಲಿ ತಾನ್ಯಾ ಅಪ್ಪಚು ಕೌಲ್​​ ಎಂಬ ವಕೀಲೆ ಈ ವಿಡಿಯೋ ಹಂಚಿಕೊಂಡಿದ್ದಾರೆ.

ವಿಚ್ಛೇದನ; ಇಲ್ಲಿವೆ ಆ ಅಸಂಬದ್ಧ ಕಾರಣಗಳು

ಹನಿಮೂನ್ ಸಮಯದಲ್ಲಿ ಹೆಂಡತಿ ಅಸಭ್ಯವಾಗಿ ಬಟ್ಟೆ ಧರಿಸಿದ್ದಕ್ಕಾಗಿ. ಗಂಡನು ತುಂಬಾ ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಾನೆ,  ಆದರೆ ಜಗಳವನ್ನೇ ಆಡುವುದಿಲ್ಲ. ಗಂಡ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ. ಹಾಗಾಗಿ ಅವನು ಹೆಂಡತಿಗೆ ಸಮಯ ನೀಡಲಾಗುತ್ತಿಲ್ಲ. ಹೆಂಡತಿ ಗಂಡನ ಪಾದಗಳನ್ನು ಮುಟ್ಟಲು ನಿರಾಕರಿಸಿದಳು. ಹೆಂಡತಿಗೆ ಅಡುಗೆ ಬರುವುದಿಲ್ಲ, ತಿಂಡಿ ತಿನ್ನದೇ ಆಫೀಸಿಗೆ ಹೊರಡಬೇಕಾಗುತ್ತದೆ… ಇಂಥ ಕಾರಣಗಳನ್ನು ವಕೀಲೆ ಪಟ್ಟಿ ಮಾಡಿದ್ದಾರೆ.

ಟಿವಿ9 ಕನ್ನಡ ಡಿಜಿಟಲ್​ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಲು ಕ್ಲಿಕ್ ಮಾಡಿ ಅಕ್ಟೋಬರ್ 3 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಈತನಕ ಸುಮಾರು 2 ಮಿಲಿಯನ್​ ಜನರು ನೋಡಿದ್ದಾರೆ. ಎರಡನೇ ಕಾರಣದ ಬಗ್ಗೆ ಮನಃಶಾಸ್ತ್ರದಲ್ಲಿ ವ್ಯಾಪಕವಾದ ಸಂಶೋಧನೆ ನಡೆಯಬೇಕಿದೆ ಎಂದಿದ್ದಾರೆ ಒಬ್ಬರು. ಗಂಡನಿಗಿಂತ ಹೆಂಡತಿಯು ವೃತ್ತಿಯಲ್ಲಿ ಯಶಸ್ಸನ್ನು ಹೊಂದಿದ್ದರೆ ಗಂಡನಾದವನು ಹೆಂಡತಿಯನ್ನು ಸಹಿಸುವುದಿಲ್ಲ ಎಂದಿದ್ದಾರೆ ಇನ್ನೊಬ್ಬರು. ಕೆಲವರು ಶಾಶ್ವತವಾಗಿ ಏಕಾಂಗಿಯಾಗಿ ಉಳಿಯಬೇಕೆಂದು ಬಯಸುತ್ತಾರೆ. ಕುಟುಂಬದ ಪ್ರೀತಿವಾತ್ಸಲ್ಯ ಮದುವೆಯಲ್ಲಿಯೇ ಅಂತ್ಯವಾಗಬಾರದು ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:49 pm, Mon, 16 October 23