AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಶೇ 2 ರಷ್ಟು ಜನರು ಮಾತ್ರ ಈ ಭ್ರಮಾತ್ಮಕ ಚಿತ್ರದೊಳಗಿನ ಸವಾಲನ್ನು ಬಿಡಿಸಿದ್ದಾರೆ, ನೀವು?

Monday Blues: ಸೋಮವಾರ ಯಾಕಾದರೂ ಬರುತ್ತದೋ, ಈ ಟ್ರಾಫಿಕ್ಕಿನಲ್ಲಿ ಆಫೀಸಿಗೆ ಯಾಕಾದರೂ ಹೋಗಬೇಕು, ಆಫೀಸಿಗೆ ಹೋದಮೇಲೆ ಕೆಲಸವನ್ನು ಮಾಡುವುದಾದರೂ ಹೇಗೋ... ಎಂದು ಸಪ್ಪೆಮುಖ ಮಾಡಿ ಕುಳಿತಿರಬಹುದು. ನಿಮ್ಮ ಬುದ್ಧಿಯನ್ನು ಚುರುಕುಗೊಳಿಸಲು ಈ ಚಿತ್ರ ಸಹಾಯ ಮಾಡಬಹುದು. ಕಠಿಣವಾದ ಸವಾಲನ್ನು ಬಿಡಿಸುವಲ್ಲಿ ನೆಟ್ಟಿಗರು ಸೋತಿದ್ದಾರೆ ನೀವು?

Viral Optical Illusion: ಶೇ 2 ರಷ್ಟು ಜನರು ಮಾತ್ರ ಈ ಭ್ರಮಾತ್ಮಕ ಚಿತ್ರದೊಳಗಿನ ಸವಾಲನ್ನು ಬಿಡಿಸಿದ್ದಾರೆ, ನೀವು?
ಇಲ್ಲಿ ಒಟ್ಟು ಎಷ್ಟು ಮಹಿಳೆಯರ ಮುಖಗಳು ಅಡಗಿವೆ?
Follow us
ಶ್ರೀದೇವಿ ಕಳಸದ
|

Updated on: Oct 16, 2023 | 10:45 AM

Optical Illusion: ಉಕ್ರೇನಿಯನ್ ಕಲಾವಿದರೊಬ್ಬರು ರಚಿಸಿದ ಈ ಭ್ರಮಾತ್ಮಕ ಚಿತ್ರದೊಳಗೆ ಅಡಗಿರುವುದನ್ನು  ಕೇವಲ ಶೇ. 2 ಜನರಷ್ಟೇ ಕಂಡುಹಿಡಿದಿದ್ದಾರೆ. ಉಳಿದವರು ಸೋತಿದ್ದಾರೆ. ನೀವು ಈ ಸವಾಲನ್ನು ಗೆಲ್ಲುತ್ತೀರಿ ಎಂಬ ಆಶಾಭಾವನೆ ನಮ್ಮದು. ಕಲಾವಿದ ಓಲೆಗ್ ಶುಪ್ಲಿಯಾಕ್ (Oleg Shupliak) ರಚಿಸಿದ ಈ ಕಲಾಕೃತಿಯಲ್ಲಿ ಒಂದಿಷ್ಟು ಮಹಿಳೆಯರನ್ನು ಅಡಗಿಸಿಟ್ಟಿದ್ದಾರೆ. ಒಟ್ಟಾರೆ ಚಿತ್ರ ನೋಡಿದಾಗ ಕೂದಲು ಬಿಟ್ಟುಕೊಂಡಿರುವ ಮಹಿಳೆ ಸುಂದರವಾದ ಉಡುಗೆ ಧರಿಸಿರುವುದು, ನಗುತ್ತ ಫೋನ್​ನಲ್ಲಿ ಮಾತನಾಡುತ್ತಿರುವುದು ಕಾಣುತ್ತದೆ. ಆದರೆ ಈ ಮಹಿಳೆ ರೂಪುಗೊಂಡಿರುವುದು ಇನ್ನೂ ನಾಲ್ಕು ಮಹಿಳೆಯರೊಂದಿಗೆ. ಅವರುಗಳನ್ನು ಗುರುತಿಸುವ ಜವಾಬ್ದಾರಿ ನಿಮ್ಮದು.

ಇದನ್ನೂ ಓದಿ : Viral Video: ‘ನನ್ನ ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಯೊಳಗೆ ಇಳಿದ ನಾಯಿ

ಎರಡನೇ ಮಹಿಳೆ ಈ ಮಹಿಳೆಯ ಕೆನ್ನೆಯ ಬಳಿ ಅಡಗಿದ್ದಾಳೆ. ಮೊದಲ ನೋಟಕ್ಕೆ ಅಡಗಿರುವ ಮಹಿಳೆ ಮೊಬೈಲ್​ನಂತೆ ತೋರಬಹುದು. ಇನ್ನು ಮೂರನೇ ಮಹಿಳೆಯನ್ನು ಹುಡುಕಲು ತುಸು ಜಾಸ್ತಿಯೇ ಶ್ರಮ ಬೇಕು. ಏಕೆಂದರೆ ಆ ಮಹಿಳೆಯ ತೋಳಿನ ಮೇಲೆ ಪಾರ್ಶ್ವಮುಖಿಯಾಗಿ ಆಕೆ ಕಾಣಿಸಿಕೊಂಡಿದ್ದಾಳೆ. ನಾಲ್ಕನೇ ಮಹಿಳೆಯ ತುಟಿಗಳು ಆ ಮಹಿಳೆಯ ಹೊಟ್ಟೆಯ ಮೇಲೆ ಕಾಣುತ್ತಿವೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಚಿತ್ರವನ್ನು ಮತ್ತೊಮ್ಮೆ ಗಮನಿಸಿ ಉತ್ತರವನ್ನು ಕಂಡುಕೊಳ್ಳಿ

ಬುದ್ಧಿ ಮತ್ತು ಕಣ್ಣಿನ ಮಧ್ಯೆ ಇಂಥ ಸೃಜನಾತ್ಮಕ ಚಿತ್ರಗಳು ಸವಾಲನ್ನು ಎಸೆಯುತ್ತವೆ. ಈ ಸೃಜನಾತ್ಮಕ ಚಿತ್ರಗಳನ್ನು ರಚಿಸಬೇಕೆಂದರೆ ಕಲಾವಿದ ಸಾಕಷ್ಟು ತಾಳ್ಮೆ, ಸಮಯವನ್ನು ವಿನಿಯೋಗಿಸಿ ಏಕಾಗ್ರತೆ ತಂದುಕೊಳ್ಳಬೇಕಾಗುತ್ತದೆ. ಅನೇಕ ನೆಟ್ಟಿಗರಿಗೆ ಎಲ್ಲ ಮಹಿಳೆಯರನ್ನೂ ಗುರುತಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ : Viral Video: ಸರ್ಕೋಮಾ ಕ್ಯಾನ್ಸರ್; ‘ಈತನಕವೂ ನನ್ನ ಚಿಕಿತ್ಸೆಗೆ ನಾನೇ ದುಡಿದು ಹಣ ಹೊಂದಿಸಿಕೊಳ್ಳುತ್ತಿದ್ದೇನೆ’

ಕೆಲವರು ಒಂದೇ ಮಹಿಳೆ ಎಂದಿದ್ದಾರೆ, ಇನ್ನೂ ಕೆಲವರು ಇಬ್ಬರು ಎಂದಿದ್ದಾರೆ, ಮತ್ತೂ ಕೆಲವರು ಮೂರು ಎಂದಿದ್ದಾರೆ. ನಾಲ್ಕು ಎಂದವರು ಕೇವಲ ಶೇ. 2 ಜನ ಮಾತ್ರ. ಬಹುಶಃ ಇದನ್ನು ಓದುತ್ತಿದ್ದಂತೆ ನಿಮಗೆ ಎಲ್ಲ ಮಹಿಳೆಯರು ಕಣ್ಣಿಗೆ ಬಿದ್ದಿರಲು ಸಾಧ್ಯ. ಮಂಡೇ ಬ್ಲ್ಯೂಸ್​ ನಿಮ್ಮನ್ನು ಬಿಟ್ಟು ಈಗ ಓಡಿರಬೇಕಲ್ಲವೆ? ನಿನ್ನೆಯಷ್ಟೇ ವಾರಾಂತ್ಯದ ವಿಶ್ರಾಂತಿಯಿಂದ ಕೆಲಸ ಮಾಡಲು ಮನಸ್ಸು ಹಠ ಹಿಡಿದಿತ್ತೇನೋ. ಇದೀಗ ಮನಸ್ಸು ಉಲ್ಲಸಿತಗೊಂಡಿರಬೇಕು. ಮತ್ತಷ್ಟು ಇಂಥ ಭ್ರಮಾತ್ಮಕ ಚಿತ್ರಗಳಿಗಾಗಿ ಎದುರು ನೋಡುತ್ತಾ ಇರಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು