Viral: 90 ವರ್ಷಗಳ ನಂತರ ನ್ಯೂಯಾರ್ಕ್ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?
Library Book: ಒಂದು ತಿಂಗಳ ನಂತರ ಪುಸ್ತಕವನ್ನು ಗ್ರಂಥಾಲಯಕ್ಕೆ ಮರಳಿಸದಿದ್ದರೆ, ಗ್ರಂಥಾಲಯವು ಪುಸ್ತಕವು ಕಳೆದುಹೋಗಿದೆ ಎಂದು ಸದಸ್ಯರಿಂದ ಪುಸ್ತಕದ ಬೆಲೆಯನ್ನು ವಸೂಲಿ ಮಾಡಿಕೊಳ್ಳುತ್ತದೆ. ಆದರೆ ಈ ಪುಸ್ತಕ ಕಳೆದದ್ದು 90 ವರ್ಷಗಳ ಹಿಂದೆ. ಈಗ ಗ್ರಂಥಾಲಯಕ್ಕೆ ಮರಳಿಸಿದ ಮೇಲೆ ಸಂಬಂಧಿಸಿದ ವಾರಸುದಾರರು ಕಟ್ಟಬೇಕಾದ ದಂಡ ಕೇಳಿದರೆ ಖಂಡಿತ ಹೌಹಾರುತ್ತೀರಿ!
New York: ಅನೇಕರು ನಿಮ್ಮಲ್ಲಿ ಲೈಬ್ರರಿಯಿಂದ (Library) ಪುಸ್ತಕ ತಂದು ಓದುವ ಅಭ್ಯಾಸವನ್ನು ಇನ್ನೂ ಇಟ್ಟುಕೊಂಡಿರುತ್ತೀರಿ. ಅಬ್ಬಬ್ಬಾ ಎಂದರೆ ಒಂದು ವಾರದಿಂದ ಒಂದು ತಿಂಗಳೊಳಗೆ ಪುಸ್ತಕವನ್ನು ಮರಳಿಸುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಈ ಪೋಸ್ಟ್ ಗಮನಿಸಿ. ಲೈಬ್ರರಿಗೆ 90 ವರ್ಷಗಳ ನಂತರ ಪುಸ್ತಕವೊಂದು ಮರಳಿದೆ. ಹಾಗಿದ್ದರೆ ಇದಕ್ಕೆ ಲೈಬ್ರರಿಯು ವಿಧಿಸಿದ ಶುಲ್ಕ ಎಷ್ಟಿರಬಹುದು? ನ್ಯೂಯಾರ್ಕ್ನ ಲಾರ್ಚ್ಮಂಟ್ ಪಬ್ಲಿಕ್ ಲೈಬ್ರರಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. 1933ರ ಅಕ್ಟೋಬರ್ 11ರಂದು ಜೋಸೆಫ್ ಕಾನ್ರಾಡ್ ಬರೆದ ‘ಯೂತ್ ಅಂಡ್ ಟು ಅದರ್ ಸ್ಟೋರೀಸ್’ ಪುಸ್ತಕವು ಈ ಲೈಬ್ರರಿಗೆ ಮರಳಬೇಕಿತ್ತು. ಆದರೆ ಹಾಗಾಗದೆ 90 ವರ್ಷಗಳ ನಂತರ ಅದು ಮರಳಿದೆ!
ಟಿವಿ9 ಡಿಜಿಟಲ್ ಕನ್ನಡ ವಾಟ್ಸಪ್ ಚಾನೆಲ್ ಸೇರಲು ಕ್ಲಿಕ್ ಮಾಡಿ
‘ಇತ್ತೀಚೆಗೆ ವರ್ಜೀನಿಯಾದಿಂದ ಒಂದು ಪ್ಯಾಕೇಜ್ ನಮ್ಮನ್ನು ತಲುಪಿತು. ತೆರೆದು ನೋಡಿದರೆ ಅದರೊಳಗೆ 90 ವರ್ಷಗಳ ಹಿಂದೆ ನಮ್ಮ ಲೈಬ್ರರಿಯಿಂದ ತೆಗೆದುಕೊಂಡಿದ್ದ ಪುಸ್ತಕವನ್ನು ಮರಳಿಸಲಾಗಿತ್ತು. 1925 ರಲ್ಲಿ ಈ ಪುಸ್ತಕವು ಪ್ರಕಟಗೊಂಡಿತ್ತು. ದಿನಕ್ಕೆ ಇಪ್ಪತ್ತು ಸೆಂಟ್‌ಗಳ ಲೆಕ್ಕದಲ್ಲಿ $ 6,400 (53 ಮಿಲಿಯನ್) ಆಗುವ ಸಾಧ್ಯತೆ ಇದೆ’ ಎಂದು ಲಾರ್ಚ್ಮಂಟ್ ಲೈಬ್ರರಿ ತಿಳಿಸಿದೆ.
ಇಲ್ಲಿದೆ ಆ ಪುಸ್ತಕ!
ಸಾಮಾನ್ಯವಾಗಿ 30 ದಿನಗಳೊಳಗೆ ಪುಸ್ತಕವನ್ನು ಗ್ರಂಥಾಲಯಕ್ಕೆ ಮರಳಿಸದಿದ್ದರೆ ಆ ಪುಸ್ತಕವು ಕಳೆದುಹೋಗಿದೆ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಅದನ್ನು ಪಡೆದುಕೊಂಡವರಿಂದ ಆ ಪುಸ್ತಕದ ಬೆಲೆಯನ್ನು ವಸೂಲಿ ಮಾಡಲಾಗುತ್ತದೆ. ಅದಾಗದಿದ್ದರೆ ಗರಿಷ್ಠ ಐದು ಡಾಲರ್ ದಂಡ ವಿಧಿಸಲಾಗುತ್ತದೆ. ಆದಾಗ್ಯೂ ಮರಳಿಸದಿದ್ದರೆ ದಂಡ ಹೆಚ್ಚುತ್ತಾ ಹೋಗುತ್ತದೆ.
ಇದನ್ನೂ ಓದಿ : Viral Video: ‘ನನ್ನ ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಯೊಳಗೆ ಇಳಿದ ನಾಯಿ’
ತನ್ನ ಮಲತಂದೆಯ ವಸ್ತುಗಳ ನಡುವೆ ಈ ಪುಸ್ತಕವು ಸಿಕ್ಕಿತು. ನಂತರ ಅದನ್ನು ಲೈಬ್ರರಿಗೆ ಹಿಂದಿರುಗಿಸಿದೆ ಎಂದು ಜೊವಾನಿ ಮೋರ್ಗನ್ ತಿಳಿಸಿದ್ದಾರೆ. ಈ ಪೋಸ್ಟ್ ಅನ್ನು ಅಕ್ಟೋಬರ್ 11 ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ. ನಿಜಕ್ಕೂ ಇದು ಅದ್ಭುತವಾದ ಸಂಗತಿ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ನೀವೆಂದಾದರೂ ಲೈಬ್ರರಿಗೆ ಪುಸ್ತಕವನ್ನು ಮರಳಿಸುವಲ್ಲಿ ವಿಳಂಬ ಮಾಡಿದ್ದಿರೇ? ಪರಿಣಾಮವೇನಾಯಿತು, ಹಂಚಿಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:08 pm, Mon, 16 October 23