AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಹಾರಾಷ್ಟ್ರದ ಈ ಬಾಲಕನ ಕೌಶಲಕ್ಕೆ ನೆಟ್ಟಿಗರೇನೋ ಮನಸೋತರು, ಆದರೆ…

Alibag: ಸರಿಯಾಗಿ ಗೊಣ್ಣೆ ಒರೆಸಿಕೊಳ್ಳಲೂ ಬಾರದ ವಯಸ್ಸಿದು, ಆದರೆ ಈ ಬಾಲಕ ಅದೆಷ್ಟು ಅದ್ಭುತವಾಗಿ ಮಾಲೆ ಕಟ್ಟುತ್ತಿದ್ದಾನೆ ಎಂದು ಕೆಲವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಕೆಲವರು, ಕೌಶಲ ಒಪ್ಪತಕ್ಕಂಥದ್ದು ಆದರೆ ಈ ಮಗುವಿಗೆ ಈಗಲೇ ಕೆಲಸದ ಹೊರೆಯೇ? ಇವನು ಶಾಲೆಗೆ ಕಳಿಸಲು ನಾವು ಸಹಾಯ ಮಾಡುತ್ತೇವೆ, ವಿಳಾಸ ಕೊಡಿ ಎಂದಿದ್ದಾರೆ ಇನ್ನೂ ಕೆಲವರು. ನೀವೇನಂತೀರಿ?

Viral Video: ಮಹಾರಾಷ್ಟ್ರದ ಈ ಬಾಲಕನ ಕೌಶಲಕ್ಕೆ ನೆಟ್ಟಿಗರೇನೋ ಮನಸೋತರು, ಆದರೆ...
ಮಹಾರಾಷ್ಟ್ರದ ಅಲಿಬಾಗ್​ನ ಬೀದಿಯಲ್ಲಿ ಬಾಲಕನೊಬ್ಬ ಹೂ ಕಟ್ಟಿ ಮಾರುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Oct 25, 2023 | 12:12 PM

Maharashtra: ಪರಿಸ್ಥಿತಿಯು ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತದೆ. ಈ ಬಾಲಕ ಎಲ್ಲಿ ಕುಳಿತು ಮಾಲೆ ಕಟ್ಟುತ್ತಿದ್ದಾನೆ? ಇವನ ಕೌಶಲಕ್ಕೆ ಏನಾದರೂ ಬಹುಮಾನ ಕೊಡಬೇಕು ಎನ್ನಿಸುತ್ತಿದೆ. ಕಲೆಯು ಕಲೆಯೇ (Art). ತಾನು ಕಟ್ಟಿದ ಮಾಲೆಗಿಂತಲೂ ಸುಂದರವಾಗಿದೆ ಈ ಮಗು. ದೇವಿ ಭವಾನಿ ಇಂಥ ಮಕ್ಕಳನ್ನು ಉದ್ಧರಿಸು. ಗಣಪತಿಯು ನಿನ್ನ ಇಚ್ಛೆಗಳನ್ನೆಲ್ಲ ಪೂರೈಸಲಿ. ಈ ಮಗು ಸುಖವಾಗಿ ಬಾಳುವಂತೆ ದೇವಿಯು ಆಶೀರ್ವದಿಸಲಿ… ನೆಟ್ಟಿಗರು ಇನ್​ಸ್ಟಾಗ್ರಾಂನಲ್ಲಿರುವ ಈ ವಿಡಿಯೋ ನೋಡಿ ಹೀಗೆಲ್ಲ ಮನದುಂಬಿ ಹಾರೈಸುತ್ತಿದ್ದಾರೆ. ಈ ಬಾಲಕ ಮಹಾರಾಷ್ಟ್ರದ ಅಲಿಬಾಗ್​ನ (Alibag) ರಸ್ತೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಮಾಲೆ ಕಟ್ಟುತ್ತ ಕುಳಿತಿರುವ ದೃಶ್ಯ ಇದಾಗಿದೆ. ಇವನ ಕೌಶಲಕ್ಕೆ ಯಾರೂ ತಲೆದೂಗಬೇಕಾದ್ದೇ.

ಇದನ್ನೂ ಓದಿ : Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಒಂದು ದಿನದ ಹಿಂದೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನಾಲ್ಕು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 1.8 ಲಕ್ಷ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಹೂ ಕಟ್ಟುವ ಈ ಪುಟ್ಟಬಾಲಕ

View this post on Instagram

A post shared by Atul Gurav (@atul.gurav.161)

ಇವನ ಕೌಶಲ, ತಾಳ್ಮೆ ಅದ್ಭುತವಾಗಿದೆ. ಆದರೆ ಈ ಮಗುವಿನ ಭವಿಷ್ಯ? ವಿಳಾಸ ಕೊಟ್ಟರೆ ನಾನು ಸಹಾಯ ಮಾಡಲು ತಯಾರು ಎಂದು ಅನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ. ಹಸಿವು ಎನ್ನುವುದು ಎಂಥ ಅನಿವಾರ್ಯಕ್ಕೂ ಒಗ್ಗಲು ಕಲಿಸುತ್ತದೆ. ಈ ಪುಟ್ಟ ಬೆರಳುಗಳಿಗೆ ಈಗಲೇ ಎಷ್ಟೊಂದು ಜವಾಬ್ದಾರಿ ಎಂದಿದ್ದಾರೆ ಕೆಲವರು. ಇದಿನ್ನೂ ಶಾಲೆಯ ಕಟ್ಟೆಯನ್ನೇ ಏರಿಲ್ಲ, ಈಗಾಗಲೇ ಹೀಗೆ ವ್ಯಾಪಾರಕ್ಕೆ ಬಿದ್ದರೆ ಇದರ ಗತಿಯೇನು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ

ಈ ಕೌಶಲ ಇವನೊಂದಿಗೇ ಇರಲಿ, ಆದರೆ ಇವನು ಶಾಲೆಗೂ ಹೋಗಲಿ ಎಂದಿದ್ದಾರೆ ಅನೇಕರು. ಏನೇ ಆಗಲಿ ತನ್ಮಯತೆಯಿಂದ ಈ ಮಗು ಮಾಲೆ ಕಟ್ಟುವುದನ್ನು ನೋಡಿ ನನಗಂತೂ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಭಾವುಕರಾಗಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:12 pm, Wed, 25 October 23

ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ
OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ