Viral News: ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಬಾಬಿ ಇನ್ನಿಲ್ಲ
World Oldest Dog: ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಅಂತಾನೇ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ ಬಾಬಿ ಎಂಬ ಹೆಸರಿನ ಶ್ವಾನ ಅಕ್ಟೋಬರ್ 21 ರಂದು ತನ್ನ 31 ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ನಾಯಿಯೊಂದು 29 ವರ್ಷ, ಐದು ತಿಂಗಳ ಕಾಲ ಬದುಕುವ ಮೂಲಕ ದಾಖಲೆಯನ್ನು ಮಾಡಿತ್ತು. ಆದರೆ ಇದೀಗ ಬಾಬಿ 31 ವರ್ಷ, 165 ದಿನಗಳ ಕಾಲ ಬದುಕುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಕಾಲ ಬದುಕಿದ ಶ್ವಾನ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಶ್ವಾನಗಳ ಜೀವಿತಾವಧಿ ಸರಾಸರಿ 12 ರಿಂದ 15 ವರ್ಷಗಳು. ಇದಕ್ಕಿಂತ ಹೆಚ್ಚು ವರ್ಷಗಳ ಕಾಲ ಶ್ವಾನಗಳು ಬದುಕುವಂತಹದ್ದು ತೀರಾ ವಿರಳ. ಆದರೆ ಪೋರ್ಚುಗಲ್ನ ಬಾಬಿ ಎಂಬ ಹೆಸರಿನ ಶ್ವಾನವೊಂದು ಬರೋಬ್ಬರಿ 31 ವರ್ಷಗಳ ಕಾಲ ಬದುಕುವ ಮೂಲಕ ಅತೀ ಹೆಚ್ಚು ಕಾಲ ಬದುಕಿದ ಶ್ವಾನ ಎಂಬ ವಿಶ್ವ ದಾಖಲೆಯನ್ನು ಮಾಡಿತ್ತು. ಆದರೆ ಇದೀಗ ಬಾಬಿ ಅಕ್ಟೋಬರ್ 21 ರಂದು ತನ್ನ 31 ರ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದೆ.
ಮೇ 11, 1992 ರಲ್ಲಿ ಜನಿಸಿದ ಬಾಬಿ “ರಾಫೀರೊ ಡೊ ಅಲೆಂಟೆಜೊ” ತಳಿಯ ನಾಯಿಯಾಗಿದ್ದು, ಈ ತಳಿಯ ಶ್ವಾನಗಳ ಜೀವಿತಾವಧಿ ಕೇವಲ 12 ರಿಂದ 14 ವರ್ಷ. ಆದರೆ ಬಾಬಿ ಆಶ್ಚರ್ಯಕರವೆಂಬಂತೆ 31 ವರ್ಷಗಳ ಕಾಲ ಬದುಕಿ, ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಎಂಬ ವಿಶ್ವ ದಾಖಲೆಯನ್ನು ಮಾಡಿ ಇದೀಗ ಇಹಲೋಕ ತ್ಯಜಿಸಿದೆ.
ಪೋರ್ಚುಗಲ್ನ ಸಣ್ಣ ಹಳ್ಳಿಯೊಂದರಲ್ಲಿ ಲಿಯೋನೆಲ್ ಕೋಸ್ವಾ ಎಂಬವರ ಕುಟುಂಬದ ಜೊತೆಗೆ ವಾಸವಿದ್ದ ಬಾಬಿ, ಇದಕ್ಕೂ ಮೊದಲು ಆಸ್ಟ್ರೇಲಿಯಾದ ನಾಯಿಯೊಂದು 29 ವರ್ಷ, ಐದು ತಿಂಗಳ ಕಾಲ ಬದುಕಿದ ದಾಖಲೆಯನ್ನು ಮುರಿದು, ಫೆಬ್ರವರಿ 2, 2023 ರಲ್ಲಿ ವಿಶ್ವದ ಅತೀ ಹಿರಿಯ ವಯಸ್ಸಿನ ಶ್ವಾನ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು. ಅಲ್ಲದೆ ಐದು ತಿಂಗಳ ಹಿಂದೆ ಅಂದರೆ ಮೇ 11 ರಂದು ತನ್ನ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಅಥಿತಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ಹೆಂಗಸರ ಭಯಕ್ಕೆ ಬರೋಬ್ಬರಿ 55 ವರ್ಷಗಳಿಂದ ಮನೆಯಿಂದ ಹೊರಗೆ ಬರದ ವ್ಯಕ್ತಿ
ಸುಮಾರು 31 ವರ್ಷ ಪ್ರಾಯವಾಗಿದ್ದ ಬಾಬಿ ಅಕೋಬರ್ 21 ರಂದು ಪೋರ್ಚುಗಲ್ನ ಪಶು ವೈದ್ಯಕೀಯ ಆಸ್ಪತೆಯಲ್ಲಿ ಕೊನೆಯುಸಿರೆಳೆದಿದೆ. ಬಾಬಿಯ ಸಾವಿನ ಕುರಿತು ಪಶುವೈದ್ಯ ಡಾ. ಕರೆನ್ ಬೆಕರ್ ಅಧೀಕೃತವಾಗಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:43 pm, Tue, 24 October 23