Viral News: ಹೆಂಗಸರ ಭಯಕ್ಕೆ ಬರೋಬ್ಬರಿ 55 ವರ್ಷಗಳಿಂದ ಮನೆಯಿಂದ ಹೊರಗೆ ಬರದ ವ್ಯಕ್ತಿ 

ಮನುಷ್ಯರಾದ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಭಯ ಇದ್ದೇ ಇರುತ್ತೆ.  ಕೆಲವರು ಹಾವುಗಳನ್ನು ಕಂಡು ಭಯಪಟ್ಟರೆ,  ಹಲವರಿಗೆ ದೆವ್ವದ ಭಯವಿರುತ್ತದೆ. ಇನ್ನೂ ಕೆಲವರಿಗೆ ನೀರನ್ನು ಕಂಡರೆ ಭಯ.  ಆದರೆ ಇಲ್ಲೊಬ್ಬ ಮನುಷ್ಯನಿಗೆ ಹೆಂಗಸರನು ಕಂಡರೆ ಭಯವಂತೆ. ಅರೇ ಇದೆಂತಹ ಭಯ ಎಂದು ನೀವು ಯೋಚಿಸುತ್ತಿದ್ದೀರಾ? ಈ ಕುರಿತ ಮಾಹಿತಿ ಇಲ್ಲಿದೆ.

Viral News: ಹೆಂಗಸರ ಭಯಕ್ಕೆ ಬರೋಬ್ಬರಿ 55 ವರ್ಷಗಳಿಂದ ಮನೆಯಿಂದ ಹೊರಗೆ ಬರದ ವ್ಯಕ್ತಿ 
ವೈರಲ್​​ ಫೋಟೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 23, 2023 | 2:17 PM

ಭಯ ಯಾರಿಗೆ ಇಲ್ಲ ಹೇಳಿ, ಕೆಲವೊಬ್ಬರು ಹಾವುಗಳನ್ನು ಕಂಡು ಭಯಪಟ್ಟರೆ, ಇನ್ನೂ ಹಲವರಿಗೆ ದೆವ್ವಗಳೆಂದರೆ ಭಯ, ಕೆಲವರಿಗೆ ನೀರಿನ ಭಯವಿದ್ದರೇ ಇನ್ನೂ ಕೆಲವರಿಗೆ ಎತ್ತರದ  ಭಯ ಹೀಗೆ ಪ್ರತಿಯೊಬ್ಬರಿಗೂ ಇಂದೊಂದು ರೀತಿಯ ಭಯ, ಫೋಬಿಯಾ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬ ಮನುಷ್ಯನಿಗೆ ಹೆಂಗಸರನ್ನು ಕಂಡರೆ ಭಯವಂತೆ. ಈ ಹೆಂಗಸರ ಭಯಕ್ಕೆ  ಈತ  ಬರೋಬ್ಬರಿ 55 ವರ್ಷಗಳಿಂದ ಮನೆಯಿಂದ ಹೊರಗೆ ಬಂದೇ ಇಲ್ಲ.  ಕರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವೆಲ್ಲರೂ ಹೋಮ್ ಕ್ವಾರೆಂಟೈನ್ನಲ್ಲಿದ್ದೆವು, ಆದರೆ ಈತ ಹೆಂಗಸರ ಭಯಕ್ಕೆ 55 ವರ್ಷಗಳ ಹಿಂದೇಯೇ ಹೋಮ್ಕ್ವಾರೆಂಟೈನ್ನಲ್ಲಿರಲು ಆರಂಭಿಸಿದ್ದಾನೆ.  ಅಷ್ಟಕ್ಕೂ ಈ ಮನುಷ್ಯನಿಗೆ ಮಹಿಳೆಯರೆಂದರೆ  ಯಾಕಿಷ್ಟು ಭಯ  ಎಂದು ಯೋಚಿಸುತ್ತಿದ್ದೀರಾ?

ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಈ ವಿಚಿತ್ರ ಘಟನೆ ನಡೆದಿರುವಂತಹದ್ದು ಆಫ್ರಿಕಾದ ರುವಾಂಡಾ ದೇಶದಲ್ಲಿ.  ಇಲ್ಲಿನ  ಕಲಿಟೆಕ್ಸ್ ನ್ಯಾಮ್ವಿಟಾ  ಎಂಬ 71 ವರ್ಷ ವಯಸ್ಸಿನ ವ್ಯಕ್ತಿ ಹೆಂಗಸರ ಭಯಕ್ಕೆ ಬರೋಬ್ಬರಿ 55 ವರ್ಷಗಳ ಕಾಲ ಮನೆಯಿಂದ ಹೊರ ಬಾರದೆ, ಪ್ರತಿದಿನ ಪ್ರತಿ ಕ್ಷಣ ಬೀಗ ಹಾಕಿಕೊಂಡು ಮನೆಯ ಒಳಗಡೆಯೇ ವಾಸಿಸುತ್ತಿದ್ದ.

ಈತ 16 ವರ್ಷದವನಾಗಿದ್ದಾಗ,  ಮಹಿಳೆಯರ ಸಹವಾಸವನ್ನು ತಪ್ಪಿಸಲು ಬೀಗ ಹಾಕಿಕೊಂಡು ಮನೆಯಿಂದ ಹೊರಬಾರದೆ ಮನೆಯ ಒಳಗಡೆಯೇ ವಾಸಿಸಲು ಪ್ರಾರಂಭಿಸಿದ್ದಾನೆ.  ಅಷ್ಟೇ ಅಲ್ಲದೆ ಮನೆಯ ಬಳಿ ಯಾರು ಬರಬಾರದೆಂದು ಮನೆಯ ಸುತ್ತ 15 ಅಡಿ ಎತ್ತರದ ಬೇಲಿಯನ್ನು ಕೂಡಾ ನಿರ್ಮಿಸಿಕೊಂಡಿದ್ದಾನೆ. ಹೆಂಗಸರಿಂದ ಈತ ದೂರವಿದ್ದರೂ, ಅವನ ಮನೆಯ ಸುತ್ತಮುತ್ತಲಿನ ಮಹಿಳೆಯರು   ಮಾನವೀಯತೆಯ ದೃಷ್ಟಿಯಿಂದ ಈತನಿಗಾಗಿ ಆಹಾರ ಮತ್ತು ದಿನಸಿ ಸಾಮಾಗ್ರಿಗಳನ್ನು ಈತನ ಮನೆಯ ಮುಂದೆ ತಂದಿಡುತ್ತಿದ್ದರು. ಹಾಗೂ ಈ ಮನುಷ್ಯ ಯಾರು ಓಡಾಡದ ಸಮಯದಲ್ಲಿ ಮನೆಯಿಂದ ಮೆಲ್ಲಗೆ ಹೊರ ಬಂದು ಆ ದಿನಸಿ ಸಾಮಾಗ್ರಿಗಳನ್ನು ಮನೆಯ ಒಳಗೆ ತೆಗೆದುಕೊಂಡು ಹೋಗುತ್ತಿದ್ದ. ಅಷ್ಟಕ್ಕೂ ಈತ ಮಹಿಳೆಯರನ್ನು ಕಂಡರೆ ಯಾಕಿಷ್ಟು ಭಯ ಪಡುತ್ತಾನೆ ಎಂದು ನೀವು ಯೋಚಿಸುತ್ತಿದ್ದೀರಾ?

ಇದನ್ನೂ ಓದಿ: ಕಡಲ ತೀರದಲ್ಲಿ  ಪತ್ತೆಯಾದ ಮತ್ಸ್ಯಕನ್ಯೆ,  ತಜ್ಞರು ಹೇಳಿದ್ದೇನು? 

ಈ ವ್ಯಕ್ತಿ ಗೈನೋಫೋಬಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಹೆಂಗಸರನ್ನು ಕಂಡರೆ ಭಯ ಪಡುತ್ತಾನೆ. ಗೈನೋಫೋಬಿಯಾ ಕಾಯಿಲೆಯಿಂದ ಬಳಲುತ್ತಿರುವವರು  ತಮ್ಮ  ವಿರುದ್ಧ ಲಿಂಗದವರನ್ನು ಕಂಡಾಗ, ಅವರ ಬಗ್ಗೆ ಯೋಚಿಸಿದಾಗ ಭಯ ಪಡುತ್ತಾರೆ. ಇಷ್ಟೇ ಅಲ್ಲ, ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ  ಆತಂಕದ ಭಾವನೆಯನ್ನು ಸಹ ಅನುಭವಿಸುತ್ತಾನೆ.  ಪ್ಯಾನಿಕ್ ಅಟ್ಯಾಕ್, ಅತಿಯಾದ ಬೆವರುವಿಕೆ, ತ್ವರಿತವಾಗಿ ಹೃದಯ ಬಡಿತ ಮತ್ತು ಉಸಿರಾಟದಲ್ಲಿ ತ್ವರಿತ ಏರಿಕೆ  ಇವೆಲ್ಲಾ ಫೋಬಿಯಾದ ಲಕ್ಷಣಗಳಾಗಿವೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:16 pm, Mon, 23 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ