AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲಂಡನ್​; ಮಕ್ಕಳ ‘ಹ್ಯಾಪ್ಪಿ ಮೀಲ್​’ನಲ್ಲಿ ಸಿಗರೇಟ್​ ತುಂಡು; ಮೆಕ್​ಡೊನಾಲ್ಡ್ಸ್​ ಪ್ರತಿಕ್ರಿಯೆ

Happy Meal: ಮೆಕ್​ಡೊನಾಲ್ಡ್ಸ್​ನಲ್ಲಿ ಮಕ್ಕಳಿಗಾಗಿ ಹ್ಯಾಪ್ಪಿ ಮೀಲ್​ ​ಕೊಂಡರೆ ಒಂದು ಆಟಿಕೆ ಉಚಿತವಾಗಿ ಸಿಗುತ್ತದೆ. ಆದರೆ ಲಂಡನ್​ನಲ್ಲಿ ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ಈ ಊಟವನ್ನು ಖರೀದಿಸಿದಾಗ ಫ್ರೆಂಚ್​ ಫ್ರೈಸ್​ ಜೊತೆ ಸಿಗರೇಟಿನ ತುಂಡು ಮತ್ತು ಬೂದಿ ಉಚಿತವಾಗಿ ಸಿಕ್ಕಿದೆ. ಆಕೆ ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ತಮಗಾದ ಅನುಭವ ಹೇಳಿಕೊಂಡಿದ್ಧಾರೆ.

Viral: ಲಂಡನ್​; ಮಕ್ಕಳ 'ಹ್ಯಾಪ್ಪಿ ಮೀಲ್​'ನಲ್ಲಿ ಸಿಗರೇಟ್​ ತುಂಡು; ಮೆಕ್​ಡೊನಾಲ್ಡ್ಸ್​ ಪ್ರತಿಕ್ರಿಯೆ
ಮೆಕ್​ಡೊನಾಲ್ಡ್ಸ್​ನ ಹ್ಯಾಪ್ಪಿ ಮೀಲ್​ನಲ್ಲಿ ಸಿಗರೇಟಿನ ತುಂಡು
Follow us
ಶ್ರೀದೇವಿ ಕಳಸದ
|

Updated on:Oct 25, 2023 | 12:53 PM

London: ಸಲಾಡ್​ನಲ್ಲಿ ಜಿರಳೆ ಮತ್ತದರ ಮೊಟ್ಟೆಗಳು ಇದ್ದ ಪೋಸ್ಟ್​ ವೈರಲ್ ಆಗಿದ್ದನ್ನು ಇತ್ತೀಚೆಗಷ್ಟೇ ಓದಿದ್ದಿರಿ. ಇದೀಗ ಲಂಡನ್​ನಲ್ಲಿ ಮೆಕ್​ಡೊನಾಲ್ಡ್ಸ್​ನಿಂದ ಮಕ್ಕಳಿಗಾಗಿ ತರಿಸಿದ ಹ್ಯಾಪ್ಪಿ ಮೀಲ್​ (Happy Meal)ನಲ್ಲಿ ಸಿಗರೇಟ್​ ತುಂಡು ಮತ್ತು ಬೂದಿ ಪತ್ತೆಯಾಗಿದೆ. ಹತಾಶೆಗೆ ಒಳಗಾದ ಮಹಿಳೆ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಫ್ರೆಂಚ್ ಫ್ರೈನೊಂದಿಗೆ ಬಂದಿರುವ ಸಿಗರೇಟು ತುಂಡನ್ನು ಈ ಫೋಟೊದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ನೆಟ್ಟಿಗರು ಈ ಪೋಸ್ಟ್​ ಓದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಮಹಾರಾಷ್ಟ್ರದ ಈ ಬಾಲಕನ ಕೌಶಲಕ್ಕೆ ನೆಟ್ಟಿಗರೇನೋ ಮನಸೋತರು, ಆದರೆ…

ಅಕ್ಟೋಬರ್ 18 ರಂದು, 35 ವರ್ಷದ ಮಹಿಳೆ ಜೆಮ್ಮಾ ಕಿರ್ಕ್-ಬೋನರ್ ಇಂಗ್ಲೆಂಡ್‌ನ ಬ್ಯಾರೋ-ಇನ್-ಫರ್ನೆಸ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್​ ರೆಸ್ಟೋರೆಂಟ್​ನಿಂದ ಒಂದು ಮತ್ತು ಮೂರು ವರ್ಷದ ತನ್ನ ಮಕ್ಕಳಿಗಾಗಿ ಹ್ಯಾಪಿ ಮೀಲ್ ಖರೀದಿಸಿದ್ದಳು. ಮನೆಗೆ ಬಂದು ಮಕ್ಕಳೆದುರು ಆ ಪೊಟ್ಟಣವನ್ನು ಬಿಚ್ಚಿದಳು. ಆದರೆ ಫ್ರೆಂಚ್​ ಫ್ರೈಸ್​ನಲ್ಲಿ ಸಿಗರೇಟಿನ ತುಂಡು ನೋಡಿ ದಿಗ್ಭ್ರಮೆಗೆ ಒಳಗಾದಳು. ‘ಆಟಿಕೆಯನ್ನು ಮರೆತುಬಿಡಿ, ಆದರೆ ಊಟದ ರುಚಿಯನ್ನು ಹೆಚ್ಚಿಸಲು ಸಿಗರೇಟು ಮತ್ತು ಬೂದಿ ಇದರೊಂದಿಗೆ ಬಂದಿದೆ. ಕಂಪ್ಲೇಂಟ್ ನೀಡಲು ಫೋನ್​ಮಾಡಿದರೆ ಅತ್ತಕಡೆಯಿಂದ ಆಕೆ ಒರಟಾಗಿ ಮಾತನಾಡಿ ಫೋನ್​ ಇಟ್ಟಳು’ ಎಂದಿದ್ದಾರೆ ಜೆಮ್ಮಾ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹ್ಯಾಪ್ಪಿ ಮೀಲ್​ನಲ್ಲಿ ಸಿಗರೇಟಿನ ತುಂಡು

ಈ ಪೋಸ್ಟ್​ನಡಿ ಅನೇಕರು ಪ್ರತಿಕ್ರಿಯಿಸಿದ್ದು, ನನ್ನ ಮಕ್ಕಳಿಗಾಗಿ ಹ್ಯಾಪ್ಪಿ ಮೀಲ್ ಆರ್ಡರ್ ಮಾಡಿದ್ದೆ, ಆಟಿಕೆಯೇ ಅದರೊಳಗೆ ಇರಲಿಲ್ಲ ಎಂದಿದ್ದಾರೆ. ಅಯ್ಯೋ ಇದು ಅತ್ಯಂತ ಖೇದನೀಯ. ನಾವು ಆರ್ಡರ್ ಮಾಡಿದ ಊಟದಲ್ಲಿ ಯಾವ ಆಟಿಕೆಯೂ ಇರಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಲೋಕಲ್​ ಕೌನ್ಸಿಲ್​ಗೆ ದೂರು ನೀಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Viral: ಮುಂಬೈ; ಮಹಿಳೆಯ ಆ್ಯಪಲ್​ ಪೆನ್ಸಿಲ್​ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?

ಡಾಲ್ಟನ್ ರೋಡ್ ರೆಸ್ಟೊರೆಂಟ್‌ನ ಫ್ರಾಂಚೈಸಿಯಾದ ಮಾರ್ಕ್ ಬ್ಲಂಡೆಲ್ ಈ ಪ್ರಕರಣಕ್ಕೆ ಸಂಬಂಧಿಸಿ, ‘ಆಹಾರ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದು. ನಾವು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ವಿಷಯವಾಗಿ ನಾವು ಸೂಕ್ತ ತನಿಖೆ ಮಾಡಿ ಪರಿಹಾರ ಒದಗಿಸಲು ಸಹಾಯ ಮಾಡುತ್ತೇವೆ’ ಎಂದಿದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:53 pm, Wed, 25 October 23

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ