Viral Video: ಉಬರ್ ಚಾಲಕ ಗೂಗಲ್ನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದಿದ್ದು ಈ ಕಾರಣಕ್ಕೆ
Uber : ಬೆಂಗಳೂರನ್ನು ಸುತ್ತಾಡಲು ತಾನು ಹೈದರಾಬಾದಿನಲ್ಲಿ ಗೂಗಲ್ನಲ್ಲಿ ಕೆಲಸ ಬಿಟ್ಟು ಬಂದಿದ್ದೇನೆ ಎಂದು ಉಬರ್ ಮೋಟೋ ಡ್ರೈವರ್ X ಖಾತೆದಾರರ ಬಳಿ ಹೇಳಿಕೊಂಡಿದ್ದಾನೆ. ನೆಟ್ಟಿಗರಲ್ಲಿ ಕೆಲವರು ಈ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಇದನ್ನು ನಂಬುತ್ತೀರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿದ ಮೇಲೆ ನಿಮ್ಮ ಅಭಿಪ್ರಾಯ ಏನಿರಬಹುದು?
Bengaluru: ಬೆಂಗಳೂರು ಎಂದಾಕ್ಷಣ ಐಟಿ, ಐಟಿ ಎಂದಾಕ್ಷಣ ಬೆಂಗಳೂರು ಎನ್ನುವುದು ಸಲೀಸಾಗಿ ಹೊಳೆಯುತ್ತದೆ. ಅಲ್ಲದೆ ಬೆಂಗಳೂರು ಎಂಬ ಮಹಾನಗರ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಆಕರ್ಷಣೆಯಿಂದ ಜಗತ್ತಿನ ಜನರನ್ನು ಸೆಳೆಯುತ್ತಲೇ ಇರುತ್ತದೆ. ಅದರಲ್ಲೂ ಐಟಿ ಜನರನ್ನು ಸೆಳೆಯುವ ಪರಿ ಹೇಳತೀರದು. ಇದೀಗ ವೈರಲ್ ಆಗಿರುವ ಪೋಸ್ಟ್ ನೋಡಿದ ನೆಟ್ಟಿಗರು ಇದು ಮತ್ತೊಂದು ‘ಪೀಕ್ ಬೆಂಗಳೂರು’ ಕ್ಷಣ ಎಂದಿದ್ದಾರೆ. X ಖಾತೆದಾರ ರಾಘವ್ ದುವಾ ಉಬರ್ ಮೋಟೋ ಡ್ರೈವರ್ನೊಂದಿಗೆ ಮಾತಿಗಿಳಿದಾಗ ಹೊಮ್ಮಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಡ್ರೈವರ್ ಹೈದರಾಬಾದಿನಲ್ಲಿ ಗೂಗಲ್ನಲ್ಲಿ (Google) ಉದ್ಯೋಗಿಯಾಗಿದ್ದ ಕಥೆ ಇದಾಗಿದೆ.
ಇದನ್ನೂ ಓದಿ : Viral: ಲಂಡನ್; ಮಕ್ಕಳ ‘ಹ್ಯಾಪ್ಪಿ ಮೀಲ್’ನಲ್ಲಿ ಸಿಗರೇಟ್ ತುಂಡು; ಮೆಕ್ಡೊನಾಲ್ಡ್ಸ್ ಪ್ರತಿಕ್ರಿಯೆ
ಬೆಂಗಳೂರನ್ನು ಸುತ್ತಾಡಲು ತಾನು ಗೂಗಲ್ ಕೆಲಸವನ್ನು ತೊರೆದಿದ್ದೇನೆ ಎಂದು ಉಬರ್ ಚಾಲಕ ರಾಘವ ಅವರ ಬಳಿ ಹೇಳಿಕೊಂಡಿದ್ದಾನೆ. ‘ನನ್ನ ಉಬರ್ ಮೋಟೋ ಡ್ರೈವರ್ ಈ ಮೊದಲು ಗೂಗಲ್ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಇಪ್ಪತ್ತು ದಿನಗಳಿಂದ ಬೆಂಗಳೂರಿನಲ್ಲಿ ಉಬರ್ ಡ್ರೈವರ್ ಕೆಲಸ ಮಾಡುತ್ತಿದ್ದಾನೆ. ಈ ನಗರವನ್ನು ಸುತ್ತಾಡುವ ಉದ್ದೇಶದಿಂದ ಹಿಂದಿನ ಕೆಲಸವನ್ನು ತೊರೆದಿದ್ದೇನೆ ಎಂದು ಹೇಳಿದ್ದಾರೆ’ ಎಂದು ರಾಘವ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಉಬರ್ ಮೋಟೋ ಡ್ರೈವರ್ನೊಂದಿಗೆ ಸವಾರಿ
My Uber Moto driver is ex-google, moved to Bangalore 20 days ago from Hyderabad.
He is just doing this to explore the city it seems. pic.twitter.com/C2zA71fMdJ
— Raghav Dua (@GmRaghav) October 22, 2023
ಈ ಪೋಸ್ಟ್ ನೋಡಿದ ಅನೇಕರು ಬೆಂಗಳೂರಿಗೆ ಸಂಬಂಧಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಈ ಸಮಯ ಬಹಳ ಉಲ್ಲಾಸಮಯವಾಗಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ಹೌದು ನಾನು ಕೂಡ ಹೀಗೆ ಡ್ರೈವರ್ಗಳೊಂದಿಗೆ ಮಾತನಾಡುತ್ತ ಹೋಗುತ್ತೇನೆ, ಅವರು ತಮ್ಮ ಕಥೆಗಳನ್ನು ಹೇಳಿಕೊಂಡಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಮಹಾರಾಷ್ಟ್ರದ ಈ ಬಾಲಕನ ಕೌಶಲಕ್ಕೆ ನೆಟ್ಟಿಗರೇನೋ ಮನಸೋತರು, ಆದರೆ…
ಕಮರ್ಷಿಯಲ್ ಲೈಸೆನ್ಸ್ ಇಲ್ಲದೇ ಹೇಗೆ ಡ್ರೈವ್ ಮಾಡುತ್ತಾರೆ ಎಂದು ಕೇಳಿದ್ದಾರೆ ಒಬ್ಬರು. ನೀವು ಬಹಳ ಮುಗ್ಧರಿಬೇಕು ಇಂಥ ಕಥೆಯನ್ನು ನಂಬುತ್ತೀರಲ್ಲ… ಎಂದಿದ್ದಾರೆ ಇನ್ನೊಬ್ಬರು. ಗೂಗಲ್ನಲ್ಲಿ ಬಹುಶಃ ಇವರು ಸಾಫ್ಟ್ವೇರ್ ಎಂಜಿನಿಯರ್ ಆಗಿರಲಿಕ್ಕಿಲ್ಲವೇನೋ ಎಂದಿದ್ದಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ