Viral Video: ವಿಚ್ಛೇದಿತ ಮಗಳನ್ನು ಬ್ಯಾಂಡ್​ ಬಾಜಾದೊಂದಿಗೆ ಸ್ವಾಗತಿಸಿದ ಪೋಷಕರು; ಭಾರತೀಯ ಪೋಷಕರು ಹೀಗೆ ಧೈರ್ಯವಂತರಾಗಲಿ ಎಂದ ನೆಟ್ಟಿಗರು

Daughter Love: 'ನೀನು ನಮ್ಮ ಮರ್ಯಾದೆಯನ್ನು ಮಣ್ಣುಪಾಲು ಮಾಡಿದೆ. ನಮ್ಮ ಭಾರತೀಯ ಸಂಸ್ಕಾರವನ್ನು ಕಡೆಗಣಿಸಿದೆ. ನಿನ್ನಿಂದಾಗಿ ನಾವೂ ಸಮಾಜದಲ್ಲಿ ಮುಖ ಎತ್ತದಂತೆ ಆಯಿತು. ನಿನಗೆ ನಮ್ಮ ಮನೆಯಲ್ಲಿ ಜಾಗವಿಲ್ಲ. ನೀನು ಇಲ್ಲಿರಬೇಡ ಹೊರಟು ಹೋಗು' ಎಂದು ಇತರೇ ಪೋಷಕರಂತೆ ಸಾಕ್ಷಿ ಗುಪ್ತಾಳ ಪೋಷಕರು ಕೂಗಾಡಲಿಲ್ಲ. ಬದಲಿಗೆ ಅವರು ಮಾಡಿದ್ದೇನು?

Viral Video: ವಿಚ್ಛೇದಿತ ಮಗಳನ್ನು ಬ್ಯಾಂಡ್​ ಬಾಜಾದೊಂದಿಗೆ ಸ್ವಾಗತಿಸಿದ ಪೋಷಕರು; ಭಾರತೀಯ ಪೋಷಕರು ಹೀಗೆ ಧೈರ್ಯವಂತರಾಗಲಿ ಎಂದ ನೆಟ್ಟಿಗರು
ವಿಚ್ಛೇದಿತೆ ಸಾಕ್ಷಿ ಗುಪ್ತಾ ತವರಿಗೆ ಆಗಮಿಸಿದಾಗ ಹೆತ್ತವರು ಬ್ಯಾಂಡ್ ಬಾಜಾದೊಂದಿಗೆ ಸ್ವಾಗತಿಸಿದ ಕ್ಷಣಗಳು
Follow us
ಶ್ರೀದೇವಿ ಕಳಸದ
|

Updated on:Oct 26, 2023 | 12:12 PM

Divorce: ‘ನಾನು ಮದುವೆಯಾದಾಗ ನನಗೆ 23 ವರ್ಷ. ನನ್ನ ಮಾಜಿ ಗಂಡ ನನ್ನಿಂದ ತನ್ನ ವಯಸ್ಸನ್ನು ಮುಚ್ಚಿಟ್ಟಿದ್ದ. ಮದುವೆ ಮೊದಲು ತನಗೆ 28 ​​ವರ್ಷ ಎಂದು ಹೇಳಿದ್ದ. ಆದರೆ ಅವನಿಗೆ ಆಗ 44 ವರ್ಷಗಳಾಗಿದ್ದವು. ಕೆಲ ತಿಂಗಳುಗಳ ನಂತರ ಅವನಿಗೆ ವಿವಾಹೇತರ ಸಂಬಂಧಗಳಿರುವುದು ತಿಳಿಯಿತು. ನಾನು ಆ ಬಗ್ಗೆ ಪ್ರಶ್ನಿಸಿದಾಗ ಮಾನಸಿಕವಾಗಿ ಹಿಂಸಿಸರಾಲಂಭಿಸಿದ. ಒಮ್ಮೊಮ್ಮೆ ನನ್ನನ್ನು ರೂಮಿನಲ್ಲಿ ಕೂಡಿ ಹಾಕುತ್ತಿದ್ದ. ಒಂದು ವರ್ಷದ ಹಿಂಸೆಯನ್ನು ಸಹಿಸಿಕೊಂಡೆ. ಕೊನೆಗೆ ವಿಚ್ಛೇದನಕ್ಕೆ (Divorce) ಅರ್ಜಿ ಹಾಕಿದೆ. ನನ್ನ ಜೀವನದ ಅತ್ಯಂತ ಕಷ್ಟಕರ ಸಮಯದಲ್ಲಿ ನನ್ನ ಹೆತ್ತವರು ಕಲ್ಲಿನಂತೆ ನನ್ನೊಂದಿಗೆ ನಿಂತರು. ನಾನು ವಾಪಾಸು ಮನೆಗೆ ಬರುವಾಗ, ಅಚ್ಚರಿಯ ರೀತಿಯಲ್ಲಿ ಪೋಷಕರು ನನ್ನನ್ನು ಸ್ವಾಗತಿಸಿ ಸಂಭ್ರಮಿಸಿದರು. ನನ್ನ ‘ಹೊಸ ಆರಂಭ’ವನ್ನು ಆಚರಿಸಲು ಅವರು ನನ್ನನ್ನು ಅನೇಕ ದೇವಾಲಯಗಳಿಗೆ ಕರೆದೊಯ್ದರು.’ ಸಾಕ್ಷಿ ಗುಪ್ತಾ

ಇದನ್ನೂ ಓದಿ : Viral: ಅಮೆರಿಕ; ವಯಾಗ್ರಾ ಸೇರಿದಂತೆ 6 ಔಷಧಿಗಳ ಬೇಡಿಕೆ; ಶಸ್ತ್ರಧಾರಿ ಯುವಕನಿಂದ ಅಂಗಡಿಕಾರನಿಗೆ ಬೆದರಿಕೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಒಂದು ಗಂಟೆಯ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 64,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಸಾಕ್ಷಿ ಗುಪ್ತಾ ಅವರ ಪೋಷಕರ ನಡೆಯನ್ನು ಸ್ವಾಗತಿಸಿದ್ದಾರೆ. ಹಾಗೆಯೇ ಸಾಕ್ಷಿಯ ಧೈರ್ಯವನ್ನು ಮೆಚ್ಚಿದ್ದಾರೆ.

ಸಾಕ್ಷಿ ಗುಪ್ತಾ ವಿಚ್ಛೇದನ ನೀಡಿ ತವರಿಗೆ ಬಂದಾಗ

ಇದು ನಾನು ಭಾರತದಲ್ಲಿ ನೋಡಿದ ಅತ್ಯುತ್ತಮ ಸಂಗತಿಯಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಇಂಥ ಪೋಷಕರಿಗೆ ಅಭಿನಂದನೆ ಎಂದಿದ್ದಾರೆ ಇನ್ನೊಬ್ಬರು. ನಾನು ಕೂಡ ಸಂತೋಷದಿಂದ ವಿಚ್ಛೇದನ ಪಡೆದಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಮುಂದಿನ ಜೀವನವು ಖುಷಿಯಿಂದ ತುಂಬಿರಲಿ, ನಿಮ್ಮ ಹೆತ್ತವರ ಬಗ್ಗೆ ಹೆಮ್ಮೆ ಇದೆ, ಪ್ರತಿಯೊಬ್ಬ ಭಾರತೀಯ ಪೋಷಕರು ಹೀಗೆ ಧೈರ್ಯಶಾಲಿಗಳಾಗಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಉಬರ್ ಚಾಲಕ ಗೂಗಲ್​ನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದಿದ್ದು ಈ ಕಾರಣಕ್ಕೆ

ಇವರ ತಂದೆಯ ಬಗ್ಗೆ ಗೌರವವಿದೆ ಎಂದಿದ್ದಾರೆ ಅನೇಕರು. ಸೋ ಕಾಲ್ಡ್​ ಸಮಾಜದಲ್ಲಿ ಇಂಥ ಹೆಜ್ಜೆ ಇಡುವುದು ಸುಲಭವಲ್ಲ. ಇವರ ತಂದೆಗೆ ನಮಸ್ಕಾರ ಎಂದಿದ್ದಾರೆ ಒಬ್ಬರು. ಇಷ್ಟು ಒಳ್ಳೆಯ ಪೋಷಕರನ್ನು ಪಡೆಯಲು ಈಕೆ ನಿಜಕ್ಕೂ ಅದೃಷ್ಟಶಾಲಿ ಎಂದಿದ್ದಾರೆ ಇನ್ನೊಬ್ಬರು. ಭಾರತದಲ್ಲಿ ಇದು ಅಪರೂಪದ ನಿದರ್ಶನ ಎಂದಿದ್ಧಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:07 pm, Thu, 26 October 23

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ