Viral: ಚೀನಾ; ‘ಅಪ್ಪ ಹೊಡೆಯುತ್ತಿದ್ದಾನೆ’ ಪೊಲೀಸರಿಗೆ ಕರೆ ಮಾಡಿದ 7 ವರ್ಷದ ಮಗು; ನಿಜವಾದ ಕಾರಣ ಏನು?
School Children: ಶಾಲೆ ತಪ್ಪಿಸಲು ಮಕ್ಕಳು ಏನೆಲ್ಲ ನೆವ ಹೇಳುತ್ತವೆ ಎನ್ನುವುದು ನಿಮಗೆ ಗೊತ್ತೇ ಇದೆ. ಆ ನೆವಕ್ಕೆ ಪೋಷಕರು ಸ್ಪಂದಿಸದೇ ಇದ್ದಾಗ ಮಕ್ಕಳು ಏನೆಲ್ಲ ತಂತ್ರಗಳನ್ನು ರೂಪಿಸುತ್ತವೆ ಗೊತ್ತೆ? ಚೀನಾದ ಈ ಬಾಲಕ ಪೊಲೀಸರಿಗೆ ಫೋನ್ ಮಾಡಿ, ತನ್ನ ತಂದೆ ತನಗೆ ಹೊಡೆದಿದ್ದಾರೆ ಎಂದು ಹೇಳಿದೆ. ವಿಡಿಯೋ ವೈರಲ್ ಆದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.
China: ಶಾಲೆಯನ್ನು ತಪ್ಪಿಸಿಕೊಳ್ಳಲು ಮಕ್ಕಳು ಹೇಳುವ ನೆಪಗಳು ಒಂದೇ ಎರಡೇ. ಒಮ್ಮೆ ಹೊಟ್ಟೆನೋವು, ಇನ್ನೊಮ್ಮೆ ತಲೆನೋವು, ಮತ್ತೊಮ್ಮೆ ಕಾಲು, ಕೈನೋವು. ಇವೆಲ್ಲ ಮುಗಿದಾದ ಮೇಲೆ ಹೃದಯ, ಕಿಡ್ನಿ ಕೂಡ! ಮನಬಂದಂತೆ ಓಡಾಡಿಕೊಂಡು ಆಟವಾಡಿಕೊಂಡು ಹೋಗುವ ಮಕ್ಕಳಿಗೆ ಶಾಲೆಯ ಶಿಸ್ತು ಕೆಲವೊಮ್ಮೆ ಕಿರಿಕಿರಿ ಮಾಡುತ್ತದೆ. ಆಗಲೇ ಇಂಥ ನೆಪಗಳನ್ನೆಲ್ಲ ಹುಡುಕಿ ಹೇಳಲಾರಂಭಿಸುತ್ತವೆ. ಚೀನಾದ 7 ವರ್ಷದ ಬಾಲಕ ಶಾಲೆ ತಪ್ಪಿಸಲು ಹೊಸ ಉಪಾಯ ಕಂಡುಕೊಂಡಿದ್ದ. ಪೊಲೀಸರಿಗೆ (Police) ಕರೆ ಮಾಡಿ ತನ್ನ ತಂದೆ ತನ್ನನ್ನು ಹೊಡೆಯುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ವಿಡಿಯೋ ವೈರಲ್ ಆದ ನಂತರವೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ : Viral Video: ಕಟ್ಟಿದ ಗೂಟವನ್ನು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡ ಹಸುವಿನ ವಿಡಿಯೋ ವೈರಲ್
ಚೀನಾದ ಝೆಜಿಯಾಂಗ್ ಪ್ರಾಂತ್ಯದ ಲಿಶುಯಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರೊಂದಿಗೆ ಮಗು ನಡೆಸಿದ ಸಂಭಾಷಣೆಯ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೋಮ್ವರ್ಕ್ ಮಾಡದ ಬಾಲಕ ಭಯದಿಂದ ಶಾಲೆ ತಪ್ಪಿಸುವ ಉಪಾಯ ಹೂಡಿದ್ದಾನೆ. ಅದಕ್ಕಾಗಿ ತನ್ನ ತಂದೆ ತನ್ನನ್ನು ಹೊಡೆಯುತ್ತಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಮಾಡಿದ್ದಾರೆ.
ಇದನ್ನೂ ಓದಿ : Viral Video: ವಿಚ್ಛೇದಿತ ಮಗಳನ್ನು ಬ್ಯಾಂಡ್ ಬಾಜಾದೊಂದಿಗೆ ಸ್ವಾಗತಿಸಿದ ಪೋಷಕರು; ಭಾರತೀಯ ಪೋಷಕರು ಹೀಗೆ ಧೈರ್ಯವಂತರಾಗಲಿ ಎಂದ ನೆಟ್ಟಿಗರು
ವಿಡಿಯೋದಲ್ಲಿ ಪೊಲೀಸ್, ನೀವು ಪೊಲೀಸರಿಗೆ ಫೋನ್ ಮಾಡಿದ್ದೀರೆ? ನಿಮ್ಮನ್ನು ಹೊಡೆದವರು ಯಾರು? ಎಂದು ಕೇಳಿದ್ದಾರೆ. ನನ್ನ ತಂದೆ ಎಂದು ಮಗು ಉತ್ತರಿಸಿದೆ. ಹೇಗೆ ಹೊಡೆದರು ಎಂದು ಕೇಳಿದಾಗ ಮೆಲ್ಲಗೆ ಹೊಡೆದರು ಎಂದಿದ್ದಾನೆ. ಆದರೆ ತುಂಬಾ ಜೋರಾಗಿ ಏನಲ್ಲ ಎಂದು ಹೇಳಿದಾಗ ಪೊಲೀಸರಿಗೆ ಅನುಮಾನ ಬಂದಿದೆ. ಆನಂತರ ಮಗುವನ್ನು ಶಿಕ್ಷಿಸುವ ಬದಲು ಪೊಲೀಸ್ ಅದಕ್ಕೆ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ : Viral: ಅಮೆರಿಕ; ವಯಾಗ್ರಾ ಸೇರಿದಂತೆ 6 ಔಷಧಿಗಳ ಬೇಡಿಕೆ; ಶಸ್ತ್ರಧಾರಿ ಯುವಕನಿಂದ ಅಂಗಡಿಕಾರನಿಗೆ ಬೆದರಿಕೆ
ಈ ವಿಡಿಯೋದಡಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿದ್ದಕ್ಕಾಗಿ ಕೆಲವರು ಅಧಿಕಾರಿಯನ್ನು ಶ್ಲಾಘಿಸಿದ್ದಾರೆ. ಮಕ್ಕಳು ಸುಳ್ಳು ಹೇಳದಿರುವಂತೆ ಪೋಷಕರು ಶಿಕ್ಷಕರು ತಿಳಿವಳಿಕೆ ನೀಡಬೇಕು ಎಂದಿದ್ದಾರೆ ಕೆಲವರು. ಶಿಕ್ಷಣ ಎನ್ನುವುದು ಮಕ್ಕಳಿಗೆ ಹೊರೆಯಾಗಬಾರದು, ಆಗಲೇ ಮಕ್ಕಳು ಹೀಗೆ ಸುಳ್ಳು ಹೇಳಲು ಶುರುಮಾಡುತ್ತಾರೆ ಎಂದಿದ್ದಾರೆ ಇನ್ನೂ ಕೆಲವರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ