Viral Video: ಕಟ್ಟಿದ ಗೂಟವನ್ನು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡ ಹಸುವಿನ ವಿಡಿಯೋ ವೈರಲ್
Animals: ನೀವು ಪ್ರಾಣಿಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೇ ಪಳಗಿಸಿದರೂ ಅವುಗಳು ಕೂಡ ತಮ್ಮಿಚ್ಛೆಯಂತೆ ಬದುಕುವ ಉಪಾಯವನ್ನು ಕಂಡುಕೊಂಡಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಕಳೊಂದು ತನ್ನಷ್ಟಕ್ಕೆ ತಾನೇ ತನ್ನನ್ನು ಮುಕ್ತಗೊಳಿಸಿಕೊಂಡಿದೆ. ಇದರ ಉಪಾಯ ಮತ್ತು ಕೌಶಲವನ್ನು ಕಂಡ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.
Cow: ಪ್ರಾಣಿಗಳು ಸ್ವತಂತ್ರ ಜೀವಿಗಳು. ಅವು ತಮ್ಮಿಚ್ಛೆಯಂತೆ ಬದುಕುವ ಹಕ್ಕು ಅವುಗಳಿಗಿದೆ. ಆದರೆ ನಾವು ಮನುಷ್ಯರು ನಮ್ಮ ಸ್ವಾರ್ಥಕ್ಕೆ ಅವುಗಳನ್ನು ಪಳಗಿಸಿ ನಮ್ಮಿಚ್ಛೆಯಂತೆ ನಮ್ಮ ಅನುಕೂಲಕ್ಕೆ ತಕ್ಕಂತೆ ಬದುಕಲು ಒತ್ತಾಯಿಸುತ್ತೇವೆ. ಹೀಗಾದಾಗಲೇ ಅವು ಸ್ವಾತಂತ್ರ್ಯಕ್ಕೆ ಹಾತೊರೆಯುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಕಳೊಂದು ತನ್ನಷ್ಟಕ್ಕೆ ತಾನೇ ಮುಕ್ತಗೊಳ್ಳುವ ಉಪಾಯವನ್ನು ಕಂಡುಕೊಂಡಿದೆ. ಕಟ್ಟಿಹಾಕಿದ್ದ ಗೂಟವನ್ನೇ ಕಿತ್ತುಕೊಂಡು ಹೋದ ಈ ಬುದ್ಧಿವಂತ (Intelligent) ಆಕಳನ್ನು ನೋಡಿದ ನೆಟ್ಟಿಗರು ಭಲೇ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ವಿಚ್ಛೇದಿತ ಮಗಳನ್ನು ಬ್ಯಾಂಡ್ ಬಾಜಾದೊಂದಿಗೆ ಸ್ವಾಗತಿಸಿದ ಪೋಷಕರು; ಭಾರತೀಯ ಪೋಷಕರು ಹೀಗೆ ಧೈರ್ಯವಂತರಾಗಲಿ ಎಂದ ನೆಟ್ಟಿಗರು
ಆಕಳು ಎರಡು ಕೊಂಬುಗಳಿಗೆ ಕಟ್ಟಿದ ಹಗ್ಗವನ್ನು ಕೌಶಲದಿಂದ (Skills) ಸುತ್ತಿಕೊಳ್ಳುತ್ತ ಕೊನೆಯಲ್ಲಿ ಗೂಟವನ್ನೇ ಕಿತ್ತುಕೊಂಡು ಓಡುವ ದೃಶ್ಯ ನಿಜಕ್ಕೂ ಮತ್ತೆ ಮತ್ತೆ ನೋಡುವಂತಿದೆ. ಅಕ್ಟೋಬರ್ 23ರಂದು Xನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 1 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 200 ಜನರು ಪ್ರತಿಕ್ರಿಯಿಸಿದ್ದಾರೆ.
ಬುದ್ಧಿವಂತ ಆಕಳಿನ ವಿಡಿಯೋ ಇಲ್ಲಿದೆ
Very clever 💕pic.twitter.com/Eo6rdX15eu
— Figen (@TheFigen_) October 22, 2023
ನಿಜವಾಗಲೂ ಈ ಆಕಳು ಮುದ್ದಾಗಿದೆ ಮತ್ತು ಬುದ್ಧಿವಂತ ಕೂಡ ಎಂದಿದ್ದಾರೆ ಒಬ್ಬರು. ಈ ದಿನ ನಾನು ನೋಡಿದ ಚೆಂದದ ವಿಡಿಯೋದಲ್ಲಿ ಇದಕ್ಕೆ ಮೊದಲ ಸ್ಥಾನ ಎಂದಿದ್ದಾರೆ ಇನ್ನೊಬ್ಬರು. ವಾಹ್ ಇದು ಅತ್ಯಂತ ಸುಂದರವಾಗಿದೆ ಎಂದಿದ್ದಾರೆ ಮತ್ತೊಬ್ಬರು. ಈ ಬುದ್ಧಿವಂತ ಆಕಳಿಗೆ ಸನ್ಮಾನ ಮಾಡಬೇಕು ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral: ಲಂಡನ್; ಮಕ್ಕಳ ‘ಹ್ಯಾಪ್ಪಿ ಮೀಲ್’ನಲ್ಲಿ ಸಿಗರೇಟ್ ತುಂಡು; ಮೆಕ್ಡೊನಾಲ್ಡ್ಸ್ ಪ್ರತಿಕ್ರಿಯೆ
ಎಷ್ಟು ಚಾಣಾಕ್ಷತನದಿಂದ ಕೂಡಿದೆ ಈ ಹಸು ಎಂದಿದ್ದಾರೆ ಒಬ್ಬರು. ಇದು ಸ್ಮಾರ್ಟ್ ಬುಲ್ ಎಂದಿದ್ದಾರೆ ಇನ್ನೊಬ್ಬರು. ಈ ಬುದ್ಧಿವಂತಿಕೆ ಎಲ್ಲಾ ಹಸುಗಳಲ್ಲಿ ಇದ್ದಿದ್ದರೆ ಇಷ್ಟೊತ್ತಿಗೆ ರೈತರೆಲ್ಲ ಕಂಗಾಲಾಗುತ್ತಿದ್ದರೇನೋ ಎಂದಿದ್ದಾರೆ ಮತ್ತೊಬ್ಬರು. ಹೇಗೆ ಬಿಡಿಸಿಕೊಳ್ಳುವುದು ಗೊತ್ತೋ ಹಾಗೆ ವಾಪಾಸು ಬರುವುದೂ ಅವುಗಳಿಗೆ ಗೊತ್ತಿರುತ್ತದೆ ಎಂದಿದ್ದಾರೆ ಮಗದೊಬ್ಬರು. ಅಂತೂ ಈ ವಿಡಿಯೋ ನೋಡಿ ಮನಸ್ಸು ಪ್ರಫುಲ್ಲವಾಯಿತು ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:13 pm, Thu, 26 October 23