AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗಾಡಿ ಕಾಲಿ; ನೇಹಾ ಕಕ್ಕರ್ ಹಾಡಿಗೆ ಧನಾಶ್ರೀ ವರ್ಮಾ ನೃತ್ಯ, ಭಲೇ ಎಂದ ನೆಟ್ಟಿಗರು

Neha Kakkar: ಈ ಹಾಡಿಗೆ ನೀವು ನರ್ತಿಸಿದ ರೀತಿ ಅತ್ಯಂತ ಸೊಗಸಾಗಿದೆ ಎಂದು ನೆಟ್ಟಿಗರು ಧನಾಶ್ರೀಯನ್ನು ಶ್ಲಾಘಿಸುತ್ತಿದ್ದಾರೆ. ಅಲ್ಲದೆ, ನೇಹಾ ಮೆಚ್ಚಿ ಪ್ರತಿಕ್ರಿಯಿಸಿದ್ದು ಈ ವಿಡಿಯೋದ ಪ್ಲಸ್ ಪಾಯಿಂಟ್​. ಧನಾಶ್ರೀಯ ಆಕರ್ಷಕವಾದ ನೃತ್ಯಕೌಶಲವನ್ನು ವೀಕ್ಷಿಸಿದ ನೆಟ್ಟಿಗರು ಅತ್ಯಂತ ಖುಷಿಯಲ್ಲಿ ತೇಲಾಡುತ್ತಿದ್ಧಾರೆ ಎನ್ನುವುದು ಪ್ರತಿಕ್ರಿಯೆಗಳನ್ನು ಓದಿದರೆ ಗೊತ್ತಾಗುತ್ತದೆ.

Viral Video: ಗಾಡಿ ಕಾಲಿ; ನೇಹಾ ಕಕ್ಕರ್ ಹಾಡಿಗೆ ಧನಾಶ್ರೀ ವರ್ಮಾ ನೃತ್ಯ, ಭಲೇ ಎಂದ ನೆಟ್ಟಿಗರು
ನೇಹಾ ಕಕ್ಕರ್ ಹಾಡಿಗೆ ಧನಾಶ್ರೀ ವರ್ಮಾ ನೃತ್ಯ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Oct 27, 2023 | 10:09 AM

Share

Dance: ಯೂಟ್ಯೂಬರ್ ಧನಾಶ್ರೀ ವರ್ಮಾ ತಮ್ಮ ನೃತ್ಯಕೌಶಲದಿಂದ ಆಗಾಗ ನೆಟ್ಟಿಗರ ಮನಸೂರೆಗೊಳ್ಳುತ್ತಿರುತ್ತಾರೆ. ಈ ಬಾರಿ ನೇಹಾ ಕಕ್ಕರ್ (Neha Kakkar) ಮತ್ತು ರೋಹನ್​ಪ್ರೀತ್ಸ ಇಂಗ್​ ಅವರ ಹಿಟ್​ ಟ್ರ್ಯಾಕ್​ ‘ಗಾಡಿ ಕಾಲಿ (Gaadi Kaali)’ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ವಿಶೇಷವೆಂದರೆ ನೇಕಾ ಕಕ್ಕರ್ ಅವರನ್ನು ಈ ವಿಡಿಯೋಗೆ ಧನಾಶ್ರೀ ಟ್ಯಾಗ್ ಮಾಡಿದ್ದು, ನೇಹಾ ಈ ವಿಡಿಯೋಗೆ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral: ಚೀನಾ; ‘ಅಪ್ಪ ಹೊಡೆಯುತ್ತಿದ್ದಾನೆ’ ಪೊಲೀಸರಿಗೆ ಕರೆ ಮಾಡಿದ 7 ವರ್ಷದ ಮಗು; ನಿಜವಾದ ಕಾರಣ ಏನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

16 ಗಂಟೆಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 8 ಲಕ್ಷ ಜನರು ನೋಡಿದ್ದಾರೆ ಮತ್ತು 1.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಧನಾಶ್ರೀ ನೃತ್ಯಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ನೇಹಾ, ‘ಮೈ ಧನಾ ಈಸ್​ ದಿ ಬೆಸ್ಟ್​’ ಎಂದಿದ್ದಾರೆ. ಈ ಹಾಡು ನೇಹಾ ಮತ್ತು ಧನಾಶ್ರೀ ನನ್ನ ಫೇವರಿಟ್​ ಎಂದು ಅನೇಕರು ಹೇಳಿದ್ದಾರೆ.

‘ಗಾಡಿ ಕಾಲಿ’ ಹಾಡಿಗೆ ಹೆಜ್ಜೆ ಹಾಕಿದ ಧನಾಶ್ರೀ

ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಧನಾಶ್ರೀಗೆ ಕೆಲವರು ಹೇಳಿದ್ದಾರೆ. ಬ್ಲಾಕ್​ಬಸ್ಟರ್​ ನೃತ್ಯ ಎಂದು ಒಬ್ಬರು ಹೇಳಿದ್ದಾರೆ. ಇದು ಅದ್ಭುತವಾದ ನೃತ್ಯ ಎಂದು ಇನ್ನೊಬ್ಬರು ಹೇಳಿದ್ದಾರೆ. ವಾವ್​ ಧನಾಶ್ರೀ ಮೇಡಮ್​ ಇದು ಅತ್ಯಂತ ಸುಂದರ ಮತ್ತು ಅದ್ಭುತ ಎಂದು ಮಗದೊಬ್ಬರು ಹೇಳಿದ್ದಾರೆ. ನಿಮ್ಮ ನೃತ್ಯಕೌಶಲ ಮತ್ತು ಈ ಹಾಡು ಒಟ್ಟಾರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿವೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಕಟ್ಟಿದ ಗೂಟವನ್ನು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡ ಹಸುವಿನ ವಿಡಿಯೋ ವೈರಲ್

ಧನಾಶ್ರೀ ಯಾರಿಗೆಲ್ಲ ಫೇವರಿಟ್? ಎಂದು ಕೆಲವರು ತಮ್ಮ ಸ್ನೇಹಿತರನ್ನು ಈ ವಿಡಿಯೋ ನೋಡಲು ಆಹ್ವಾನಿಸಿದ್ದಾರೆ. ಧನಾಶ್ರೀ ನಾವು ನಿಮ್ಮನ್ನು ಬಹಳ ಪ್ರೀತಿಸುತ್ತೇವೆ ಎಂದಿದ್ದಾರೆ ಇನ್ನೂ ಕೆಲವರು. ನನ್ನ ನೆಚ್ಚಿನ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಮತ್ತೊಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:08 am, Fri, 27 October 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ