Viral: ಅಮೆರಿಕ; ವಯಾಗ್ರಾ ಸೇರಿದಂತೆ 6 ಔಷಧಿಗಳ ಬೇಡಿಕೆ; ಶಸ್ತ್ರಧಾರಿ ಯುವಕನಿಂದ ಅಂಗಡಿಕಾರನಿಗೆ ಬೆದರಿಕೆ
Pharmacy Robbery: 'ಇದು ಸಶಸ್ತ್ರ ದರೋಡೆ, ದಯವಿಟ್ಟು ಸಹಕರಿಸು; ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಈ ಕುರಿತು ನೀನು ಯಾರಿಗೂ ಮಾಹಿತಿ ನೀಡಬಾರದು ಮತ್ತು ಎಚ್ಚರಿಸಬಾರದು. ಹಾಗೊಂದು ವೇಳೆ ಮಾಡಿದರೆ ನಾನು ಇಲ್ಲಿ ಯಾರನ್ನೂ ಶೂಟ್ ಮಾಡಬಲ್ಲೆ' ಸಶಸ್ತ್ರಧಾರಿ ಯುವಕ ಔಷಧಿಪಟ್ಟಿಯೊಂದಿಗೆ ಈ ಬೆದರಿಕೆಯ ಟಿಪ್ಪಣಿಯನ್ನು ಔಷಧಿ ಅಂಗಡಿಯವನ ಎದುರು ಇಡುತ್ತಾನೆ.
America: ಶಸ್ತ್ರಧಾರಿ ಯುವಕ ಥಾಮಸ್ ಮ್ಯೂಸ್ ಸಂಜೆ ಆರರ ಸುಮಾರಿಗೆ ಸಿವಿಎಸ್ ಔಷಧಿ ಅಂಗಡಿಗೆ ಬಂದು ಅಂಗಡಿಕಾರನಿಗೆ ಒಂದು ಚೀಟಿಯನ್ನು ತೋರಿಸಿದ್ದಾನೆ. ಅದರಲ್ಲಿ ಬೆದರಿಕೆ ಟಿಪ್ಪಣಿ ಮತ್ತು ವಯಾಗ್ರಾ ಸೇರಿದಂತೆ 6 ಔಷಧಿಗಳ ಪಟ್ಟಿ ಇರುತ್ತದೆ. ಇದನ್ನು ಕಂಡ ಅಂಗಡಿಕಾರ ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದಾನೆ. ನಂತರ ಈ ಚೀಟಿಯನ್ನು ಅಂಗಡಿಯವನು ಒರ್ಲ್ಯಾಂಡೋ ಪೊಲೀಸರಿಗೆ ತಲುಪಿಸಿದ್ದಾನೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಂಕಿತ ಆರೋಪಿ ಥಾಮಸ್ ಮ್ಯೂಸ್ನನ್ನು ಬಂಧಿಸಿದ್ದಾರೆ. ಫಾರ್ಮಸಿ ದರೋಡೆಗೆ (Pharmacy Robbery) ಸಂಬಂಧಿಸಿದ ಈ ಪ್ರಕರಣದ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ : Viral Video: ಉಬರ್ ಚಾಲಕ ಗೂಗಲ್ನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದಿದ್ದು ಈ ಕಾರಣಕ್ಕೆ
ಹೀಗೆ ಬೇಡಿಕೆ ಇಟ್ಟ ಥಾಮಸ್ ಮ್ಯೂಸ್ ಫ್ಲೋರಿಡಾದ ನಿವಾಸಿ ಎಂದು ಗುರುತಿಸಲಾಗಿದೆ. ಫಾಕ್ಸ್ ನ್ಯೂಸ್ ಪ್ರಕಾರ, ಶಂಕಿತ ಆರೋಪಿ ಥಾಮಸ್ ಮ್ಯೂಸ್ ಸಿವಿಎಸ್ ಅಂಗಡಿಯಲ್ಲಿ ಸಂಜೆ 6 ಗಂಟೆಯ ಸುಮಾರಿಗೆ ಅಂಗಡಿಕಾರನಿಗೆ ಕೈಬರಹದ ಟಿಪ್ಪಣಿಯನ್ನು ನೀಡಿದ್ದಾನೆ. ಅವನು ಗನ್ ಕೂಡ ಹೊಂದಿದ್ದನು ಮತ್ತು ಟಿಪ್ಪಣಿ ಪಟ್ಟಿಯಲ್ಲಿರುವ ಔಷಧಿಗಳನ್ನು ನೀಡದಿದ್ದರೆ ಶೂಟ್ ಮಾಡಲಾಗುತ್ತದೆ ಎಂಬ ಬೆದರಿಕೆಯನ್ನೂ ಒಡ್ಡಿದನು ಎಂದು ಒರ್ಲ್ಯಾಂಡೊ ಪೊಲೀಸ್ ಇಲಾಖೆಯು ತಿಳಿಸಿದೆ.
ಫಾರ್ಮಸಿ ದರೋಡೆಗೆ ಸಂಬಂಧಿಸಿದ ಟಿಪ್ಪಣಿ ಮತ್ತು ಬೆದರಿಕೆ
The suspect armed with this note detailing a long list of very specific demands was quickly arrested by Orlando Police. On October 20th, 2023 at about 6 p.m., officers responded to a CVS in the 4300 block of Curry Ford Road for a commercial robbery. pic.twitter.com/TIVET71Imv
— Orlando Police (@OrlandoPolice) October 23, 2023
ಸುಕ್ಕುಗಟ್ಟಿದ ಕಾಗದದ ಮೇಲೆ ಬೇಕಾದ ಔಷಧಿಗಳ ಪಟ್ಟಿಯನ್ನು ಮತ್ತು ಬೆದರಿಕೆ ಟಿಪ್ಪಣಿಯನ್ನು ಬರೆಯಲಾಗಿದೆ; ‘ಇದು ಸಶಸ್ತ್ರ ದರೋಡೆ, ದಯವಿಟ್ಟು ಸಹಕರಿಸು; ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಈ ಕುರಿತು ನೀನು ಯಾರಿಗೂ ಮಾಹಿತಿ ನೀಡಬಾರದು ಮತ್ತು ಎಚ್ಚರಿಸಬಾರದು. ಹಾಗೊಂದು ವೇಳೆ ಮಾಡಿದರೆ ಇಲ್ಲಿರುವ ಯಾರನ್ನೂ ಶೂಟ್ ಮಾಡುತ್ತೇನೆ.’
After a short foot pursuit, Mues was apprehended and was still holding the stolen narcotics and his written note. He admitted to traveling to Orlando from Jacksonville to carry out the plan and also confessed to another similar robbery in Central Florida. pic.twitter.com/Llce1ikiBQ
— Orlando Police (@OrlandoPolice) October 23, 2023
ಥಾಮಸ್ ಮ್ಯೂಸ್ ಅಂಗಡಿಯಿಂದ ಹೊರಗೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ವಲ್ಪ ಸಮಯದ ನಂತರ ಮ್ಯೂಸ್ನನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ಅವನ ಕೈಯಲ್ಲಿ ಕದ್ದ ಮಾದಕ ದ್ಯವ್ಯ ಮತ್ತರು ಔಷಧಿ ಟಿಪ್ಪಣಿಯು ಇತ್ತು. ಈ ಯೋಜಿತ ದರೋಡೆಯನ್ನು ಕಾರ್ಯಗತಗೊಳಿಸಲು ಜಾಕ್ಸನ್ವಿಲ್ಲೆಯಿಂದ ಒರ್ಲ್ಯಾಂಡೋಗೆ ಮ್ಯೂಸ್ ಪ್ರಯಾಣಿಸಿದ್ದನ್ನು ಒಪ್ಪಿಕೊಂಡನು. ಇದರೊಂದಿಗೆ ಸೆಂಟ್ರಲ್ ಫ್ಲೋರಿಡಾದಲ್ಲಿ ನಡೆದ ಮತ್ತೊಂದು ರೀತಿಯ ದರೋಡೆಯಲ್ಲಿ ಭಾಗಿಯಾಗಿದ್ದನ್ನೂ ಒಪ್ಪಿಕೊಂಡನು. ಸದ್ಯ ದರೋಡೆ, ಕಳ್ಳಸಾಗಣೆಗೆ ಸಂಬಂಧಿಸಿದ ಸರಣಿ ಆರೋಪಗಳನ್ನು ಎದುರಿಸುತ್ತಿದ್ದಾನೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:31 am, Thu, 26 October 23