Viral Video: ಜೋಲೋಚಿಪ್ ಚಾಲೇಂಜ್; ಈ ವಿಡಿಯೋದಲ್ಲಿ ಮುಂದೇನಾಗುತ್ತದೆ ನೋಡಿ
Jolochip Challenge: ಜಗತ್ತಿನಲ್ಲಿಯೇ ಅತ್ಯಂತ ಖಾರವಾದ ಮೆಣಸಿನಕಾಯಿಗಳನ್ನು ಈ ಜೋಲೋಚಿಪ್ನಲ್ಲಿ ಹಾಕಿ ತಯಾರಿಸಲಾಗಿರುತ್ತದೆ. ಸ್ನೇಹಿತರಿಗೆ ಈ ಚಿಪ್ ತಿನ್ನಲು ಕೊಟ್ಟು ಮುಂದೇನಾಗುತ್ತದೆ ಎಂದು ಕಾಯುತ್ತ ವಿಡಿಯೋ ಮಾಡುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು ಇದೀಗ ಟ್ರೆಂಡ್ನಲ್ಲಿದೆ. ಈ ವಿಡಿಯೋದಲ್ಲಿ ಏನಾಗುತ್ತದೆ ನೋಡಿ.
Reel: ಜೋಲೋಚಿಪ್ ಇದೊಂದು ಮಸಾಲೆಯುಕ್ತ ಚಿಪ್. ಜಗತ್ತಿನಲ್ಲಿ ಅತ್ಯಂತ ಖಾರವುಳ್ಳ ಮೆಣಸಿನಕಾಯಿ ತಳಿಗಳಾದ ಕೆರೊಲಿನಾ ರೀಪರ್, ಟ್ರಿನಿಡಾಡ್ ಸ್ಕಾರ್ಪಿಯನ್ ಮತ್ತು ಘೋಸ್ಟ್ ಪೆಪ್ಪರ್ ಬಳಸಿ ತಯಾರಿಸಲಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ #jolochipchallenge ನಡಿ ಅನೇಕರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಕೆಲವರು ಈ ಚಿಪ್ ಅನ್ನು ಸ್ವತಃ ತಾವೇ ತಿನ್ನಲು ಪ್ರಯತ್ನಿಸಿದ್ದಾರೆ, ಇನ್ನೂ ಕೆಲವರು ಸ್ನೇಹಿತರಿಗೆ ತಿನ್ನಿಸಿದ್ದಾರೆ. ಅತ್ಯಂತ ಖಾರವಾದ ಈ ಚಿಪ್ ತಿಂದವರ ಮುಖವನ್ನು ನೋಡಿದರೆ ಸಾಕು ಅವರ ನಾಲಗೆ ಗಂಟಲು, ಹೊಟ್ಟೆಯ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದು ಅರ್ಥವಾಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲಾ ಉಲ್ಟಾ ಆಗಿದೆ!
ಇದನ್ನೂ ಓದಿ : Viral Video: ಗಾಡಿ ಕಾಲಿ; ನೇಹಾ ಕಕ್ಕರ್ ಹಾಡಿಗೆ ಧನಾಶ್ರೀ ವರ್ಮಾ ನೃತ್ಯ, ಭಲೇ ಎಂದ ನೆಟ್ಟಿಗರು
ಸಾಮಾಜಿಕ ಜಾಲತಾಣಗಳಲ್ಲಿ 2021ರಲ್ಲಿ ಈ ಚಾಲೇಂಜ್ ಚಾಲ್ತಿಗೆ ಬಂದಿದೆ. ಅನೇಕರು ತಮ್ಮ ಸ್ನೇಹಿತರಿಗೆ ಈ ಚಾಲೇಂಜ್ಗೆ ಆಹ್ವಾನಿಸಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಕೆಲವರು ಈ ಚಿಪ್ ತಿನ್ನುತ್ತಲೇ ಬೆವರತೊಡಗಿದ್ದಾರೆ ಮತ್ತು ಹೊಟ್ಟೆಯಲ್ಲಿ ಉರಿಉರಿಯಾದಂತೆ ಆಗುತ್ತಿದೆ ಎಂದು ಹೇಳಿದ್ದಾರೆ. ಕೆಲವರಂತೂ ಕಣ್ಣು ಮೂಗು ಸುರಿಸಿಕೊಂಡು ಈ ಚಾಲೇಂಜ್ ಪೂರೈಸಿದ್ದಾರೆ. ಇದೀಗ ಈ ಚಾಲೇಂಜ್ ಮತ್ತೆ ಚಾಲ್ತಿಗೆ ಬಂದಿದೆ.
ಮ್ಯಾಗಿಯಲ್ಲಿ ಜೋಲೋಚಿಪ್, ಮುಂದೇನಾಯಿತು?
View this post on Instagram
ಈ ವಿಡಿಯೋವನ್ನು ಸಾಗರ್ ಕುಮಾರ್ ಎನ್ನುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಗಿ ತಯಾರಿಸಿ ಅದರೊಳಗೆ ಜೋಲೋಚಿಪ್ ಪುಡಿ ಮಾಡಿ ಹಾಕುತ್ತಾರೆ. ಜೊತೆಗೆ ಕೆಂಪು ಮೆಣಸಿನಪುಡಿಯನ್ನೂ ಸೇರಿಸುತ್ತಾರೆ. ನಂತರ ಮೇಲೆ ಪನೀರ್ ತುರಿದು ಅಲಂಕರಿಸುತ್ತಾರೆ. ಆಫೀಸಿಗೆ ಬಂದು ಸ್ನೇಹಿತನಿಗೆ ಕೊಡುತ್ತಾರೆ. ಇದನ್ನು ತಿಂದ ಸ್ನೇಹಿತ ಖಾರದಿಂದ ಒದ್ದಾಡಬಹುದು ಎಂದು ತಂಪುಪಾನೀಯಗಳನ್ನೂ ಕೊಡುತ್ತಾರೆ. ಆದರೆ ಹಾಗೇನೂ ಆಗದೆ ಸ್ನೇಹಿತ ಆರಾಮಾಗಿ ಜೋಲೋಚಿಪ್ ಮ್ಯಾಗಿ ಸವಿಯುತ್ತಾನೆ!
ಇದನ್ನೂ ಓದಿ : Viral Video: ಕಟ್ಟಿದ ಗೂಟವನ್ನು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡ ಹಸುವಿನ ವಿಡಿಯೋ ವೈರಲ್
ಈ ಚಾಲೇಂಜ್ ಹೇಗೆ ಫೇಲ್ ಆಯಿತು? ಎಂದು ಸಾಗರ್ ಅಚ್ಚರಿಗೆ ಒಳಗಾಗುತ್ತಾರೆ. ಈತನಕ ಈ ವಿಡಿಯೋವನ್ನು 8.3 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಮ್ಯಾಗಿ ತಿಂದ ನಂತರ ಅವರು ನಗುವುದು ಬಹಳ ತಮಾಷೆಯಾಗಿದೆ ಎಂದಿದ್ದಾರೆ ಕೆಲವರು. ಇವನು ಉಕ್ಕಿನ ಮನುಷ್ಯ ಎಂದಿದ್ದಾರೆ ಇನ್ನೂ ಕೆಲವರು. ಚೀಸ್ ಸೇರಿಸಿದ್ದಕ್ಕೆ ಅವರಿಗೆ ಖಾರವೆನ್ನಿಸಿಲ್ಲ ಎಂದಿದ್ದಾರೆ ಒಂದಿಷ್ಟು ಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:25 am, Fri, 27 October 23