Viral Video: ಆಸ್ಟ್ರೇಲಿಯಾ; ಸೂಪರ್​ ಮಾರ್ಕೆಟ್​ನಿಂದ ತಂದ ಪಾಲಕ್​ ಸೊಪ್ಪಿನಲ್ಲಿ ಕಪ್ಪೆ

Frog in Spinach: ಒತ್ತಾಗಿ ಕಟ್ಟಿರುವ ನಳನಳಿಸುವ ಸೊಪ್ಪಿನ ಕಟ್ಟಿನಲ್ಲಿ ಅನೇಕ ಜೀವಜಂತುಗಳು ಅಡಗಿ ಕುಳಿತಿರುತ್ತವೆ. ಹಾಗಾಗಿಯೇ ಮನೆಗೆ ತಂದಾಕ್ಷಣ ಅದನ್ನು ಅಗಲವಾದ ಬುಟ್ಟಿ ಮತ್ತು ನೀರಿನೊಳಗೆ ಎರಡು ಮೂರು ಸಲ ತೊಳೆಯುವುದು ಒಳ್ಳೆಯದು. ಆದರೆ ನೀಟ್ ಆಗಿ ಪ್ಯಾಕ್​ ಮಾಡಿದ ಸೂಪರ್​ ಮಾರ್ಕೆಟ್​ನ ಪ್ಯಾಕೆಟ್​ಗಳಲ್ಲಿ ಜೀವಿಗಳು ಅಡಗಿರಲು ಸಾಧ್ಯವೆ? ಈ ಪ್ರಕರಣ ಹೌದು ಎನ್ನುತ್ತದೆ.

Viral Video: ಆಸ್ಟ್ರೇಲಿಯಾ; ಸೂಪರ್​ ಮಾರ್ಕೆಟ್​ನಿಂದ ತಂದ ಪಾಲಕ್​ ಸೊಪ್ಪಿನಲ್ಲಿ ಕಪ್ಪೆ
ಪ್ರಾತಿನಿಧಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Oct 27, 2023 | 1:15 PM

Australia: ಕೆಲ ತಿಂಗಳುಗಳ ಹಿಂದೆ ಅಂಗಡಿಯಿಂದ ತಂದ ಬ್ರೊಕೊಲಿಯಲ್ಲಿ ಹಾವಿನಮರಿ ಪತ್ತೆಯಾದ ವಿಡಿಯೋ ನೋಡಿದ್ದಿರಿ. ಇದೀಗ ಆಸ್ಟ್ರೇಲಿಯಾದ ಮಹಿಳೆಯೊಬ್ಬಳಿಗೆ ಸೂಪರ್ ಮಾರ್ಕೆಟ್​ನಿಂದ ತಂದ ಪಾಲಕ್ (Spinach)​ ಸೊಪ್ಪಿನಲ್ಲಿ ಕಪ್ಪೆಮರಿ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆಕೆ ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಾಳೆ. ಆಸ್ಟ್ರೇಲಿಯಾದ ಪ್ರಸಿದ್ಧ ಸೂಪರ್​ ಮಾರ್ಕೆಟ್​ ವೂಲ್​ವರ್ತ್ಸ್​​ನಲ್ಲಿ ಸಿಮೋನ್​ ಬೇಕರ್​ ಪಾಲಕ್​ ಖರೀದಿಸಿದ್ದಾಳೆ. ಆದರೆ ಅದರೊಳಗೆ ಕಪ್ಪೆ ಇತ್ತು ಎನ್ನುವುದು ಬಾಣಲೆಯಲ್ಲಿ ಕಪ್ಪೆ ಬೆಂದ ನಂತರವಷ್ಟೇ ಆಕೆಯ ಅರಿವಿಗೆ ಬಂದಿದೆ. ಇದರಿಂದ ಆಕೆ ಆಘಾತಗೊಂಡಿದ್ದಾರೆ.

ಇದನ್ನೂ ಓದಿ : Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?! 

ಈ ವಿಡಿಯೋವನ್ನು ಸಿಮೋನ್​ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ನೆಟ್ಟಿಗರೊಬ್ಬರು, ಈಗಾಗಲೇ ನೀವು ತಯಾರಿಸಿದ ಭಕ್ಷ್ಯದಲ್ಲಿ ಕಪ್ಪೆ ಮಿಶ್ರಣಗೊಂಡಿದೆ ಎನ್ನುವುದನ್ನು ಪ್ರತಿಕ್ರಿಯೆಯ ಮೂಲಕ ತಿಳಿಸಿದ್ದಾರೆ. ವೂಲ್​ವರ್ತ್ಸ್​ ಈ ಘಟನೆಯನ್ನು ಗಮನಿಸಿ, ‘ನಮ್ಮ ಸರಬರಾಜುದಾರರು ಪಾಲಕ ಸೊಪ್ಪಿನ ಗುಣಮಟ್ಟವನ್ನು ಹಲವಾರು ಬಾರಿ ಪರೀಕ್ಷಿಸಿ ಮತ್ತು ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿದ್ದಾರೆ. ನಾವು ಸಾಕಷ್ಟು ಆಸ್ಟ್ರೇಲಿಯನ್ ಪಾಲಕ್ ಬೆಳೆಗಾರರೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಆಹಾರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉತ್ಪನ್ನದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಶ್ರಮವಹಿಸುತ್ತೇವೆ’ ಎಂದಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಜೋಲೋಚಿಪ್ ಚಾಲೇಂಜ್​; ಈ ವಿಡಿಯೋದಲ್ಲಿ ಮುಂದೇನಾಗುತ್ತದೆ ನೋಡಿ 

ನೆಟ್ಟಿಗರು, ಈ ಹಿಂದೆಯೂ ಪಾಲಕ್​ ಪ್ಯಾಕ್​ನಲ್ಲಿ ಕಪ್ಪೆ ಕಂಡುಬಂದ ಅನುಭವವನ್ನು ಹಂಚಿಕೊಂಡಿದ್ದಾರೆ. ಎಷ್ಟೇ ಪ್ರಸಿದ್ಧ ಕಂಪೆನಿಯಾದರೂ ಕಣ್ತಪ್ಪಿನಿಂದ ಹೀಗೆ ಆಗುವುದು ಸಹಜ, ಅದನ್ನು ಕಂಪೆನಿ ಒಪ್ಪಿಕೊಳ್ಳಬೇಕು, ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಕೆಲವರು. ಎಲ್ಲಿಂದಲೇ ಸೊಪ್ಪು ತರಲಿ ಅದನ್ನು ದೊಡ್ಡದಾದ ಬುಟ್ಟಿಯಲ್ಲಿ ನೀರು ಹಾಕಿ, ಉಪ್ಪು ಅಥವಾ ಅರಿಷಿಣ ಹಾಕಿ ಜಾಲಿಸಿ ಎರಡು ಮೂರು ಸಲ ತೊಳೆಯುವುದು ಒಳ್ಳೆಯದು ಎಂದಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?

ಆಹಾರದ ವಿಷಯದಲ್ಲಿ ಬಹಳ ಜಾಗರೂಕರಾಗಿ ಇರಬೇಕು, ಏಮಾರಿದರೆ ಜೀವಕ್ಕೆ ಆಪತ್ತು, ಕಂಪೆನಿ ಕೊಡುವ ಯಾವ ಪರಿಹಾರವೂ ಜೀವವನ್ನು ಉಳಿಸದು ಎಂದಿದ್ದಾರೆ ಇನ್ನೂ ಕೆಲವರು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಬಹಳ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ ಮತ್ತೊಂದಿಷ್ಟು ಜನ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:59 pm, Fri, 27 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ