AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹ್ಯಾಲ್ಯೋವೀನ್​; ಹ್ಯಾರಿಪಾಟರ್​ ಪಾತ್ರಧಾರಿಗಳ ವೇಷದಲ್ಲಿ ಝ್ಯುಕರ್​ಬರ್ಗ್​ ಕುಟುಂಬ

Halloween : 'ಬೇಬಿ ಡಾಬಿ, ಹರ್ಮಿಯೋನ್, ಗಿನ್ನಿ, ಪ್ರೊಫೆಸರ್ ಮೆಕ್ಗೊನಾಗಲ್ ಮತ್ತು ಡಂಬಲ್ಡೋರ್ ಅವರಿಂದ ಹ್ಯಾಲೋವೀನ್​ ಶುಭಾಶಯಗಳು' ಮಾರ್ಕ್ ಝ್ಯುಕರ್​ಬರ್ಗ್ ತನ್ನ ಕುಟುಂಬದೊಂದಿಗೆ ಹ್ಯಾರಿಪಾಟರ್​ ಸರಣಿಯ ಪಾತ್ರಧಾರಿಗಳ ವೇಷ ದರಿಸಿ ಹ್ಯಾಲೋವೀನ್ ಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ಫೋಟೋ ​ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ.

Viral: ಹ್ಯಾಲ್ಯೋವೀನ್​; ಹ್ಯಾರಿಪಾಟರ್​ ಪಾತ್ರಧಾರಿಗಳ ವೇಷದಲ್ಲಿ ಝ್ಯುಕರ್​ಬರ್ಗ್​ ಕುಟುಂಬ
ಮಾರ್ಕ್ ಝ್ಯೂಕರ್​ ಬರ್ಗ್​ ಕುಟುಂಬ ಹ್ಯಾರಿಪಾಟರ್​ ಸರಣಿಯ ಪಾತ್ರಧಾರಿಗಳ ವೇಷ ಧರಿಸಿ ಹ್ಯಾಲ್ಯೋವೀನ್​ ಆಚರಿಸಿದ ಕ್ಷಣ.
ಶ್ರೀದೇವಿ ಕಳಸದ
|

Updated on: Nov 01, 2023 | 1:12 PM

Share

Mark Zuckerberg : ಅಂತರ್ಜಾಲದಲ್ಲಿಯಂತೂ ಹ್ಯಾಲ್ಯೋವೀನ್​ ಸಂಭ್ರಮ ನೋಡಲು ಎರಡು ಕಣ್ಣುಗಳು ಸಾಲವು. ಮಾರ್ಕ್​ ಝ್ಯುಕರ್​ಬರ್ಗ್ ಕೂಡ ತನ್ನ ಕುಟುಂಬದೊಂದಿಗೆ ಈ ಸಂಭ್ರಮದಲ್ಲಿ ಮುಳುಗಿದ್ದಾರೆ. ಹ್ಯಾರಿಪಾಟರ್‌ ಪುಸ್ತಕ ಸರಣಿಯ ಪಾತ್ರಧಾರಿಗಳನ್ನು ಝ್ಯುಕರ್ ಮತ್ತವರ ಕುಟುಂಬ​ ಆವಾಹಿಸಿಕೊಂಡಿದ್ದ ಫೋಟೋವನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಪ್ರೊಫೆಸರ್ ಡಂಬಲ್‌ಡೋರ್‌ನಂತೆ ಝ್ಯುಕರ್​ಬರ್ ವೇಷ ಧರಿಸಿದ್ದಾರೆ. ಅವರ ಹೆಂಡತಿ ಮತ್ತು ಮೂವರು ಪುತ್ರಿಯರಾದ ಅರೆಲಿಯಾ, ಆಗಸ್ಟ್​ ಮತ್ತು ಮ್ಯಾಕ್ಸಿಮಾ ಕೂಡ ಹ್ಯಾರಿಪಾಟರ್​ ಸೀರೀಸ್ (Harry Potter Series)​ ಇತರೇ ವೇಷಗಳನ್ನು ಧರಿಸಿ ನೆಟ್​ಲೋಕದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : Viral Brain Teaser: ‘ತೆರೆಸಾ ಬ್ರೇನ್​ ಟೀಸರ್’ ಗೆ ಉತ್ತರ ಕಂಡುಕೊಳ್ಳಲು ಯಾರಿಗೂ ಆಗುತ್ತಿಲ್ಲ, ನಿಮಗೆ? 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾಲ್ಕು ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನಕ ಸುಮಾರು 28,000 ಜನರು ಲೈಕ್ ಮಾಡಿದ್ದಾರೆ. ಹಲವಾರು ಜನರು ತಮ್ಮ ಅಭಿಪ್ರಾಯವ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ನಿಮ್ಮದು ಸಂತೋಷದಿಂದ ಕೂಡಿದ ಸುಂದರವಾದ ಕುಟುಂಬ ಎಂದಿದ್ದಾರೆ ಕೆಲವರು. ಇದನ್ನು ಪ್ರೀತಿಸುತ್ತಿದ್ದೇವೆ ಎಂದಿದ್ದಾರೆ ಇನ್ನೂ ಕೆಲವರು.

ಇಲ್ಲಿದೆ ಝ್ಯುಕರ್​ಬರ್ಗ್​ ಕುಟುಂಬದ ಹ್ಯಾಲ್ಯೋವೀನ್​ ಸಂಭ್ರಮ

View this post on Instagram

A post shared by Mark Zuckerberg (@zuck)

ನಿಮ್ಮ ಕುಟುಂಬವನ್ನು ನೋಡಲು ಖುಷಿ ಎನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ರಂಗುರಂಗಾದ ಉಡುಪುಗಳಲ್ಲಿ ನೀವೆಲ್ಲರೂ ಅತ್ಯದ್ಭುತವಾಗಿ ಕಾಣುತ್ತಿದ್ದೀರಿ, ಹಬ್ಬದ ಶುಭಾಶಯಗಳು ಎಂದಿದ್ದಾರೆ ಇನ್ನೊಬ್ಬರು. ಪ್ಯಾಲೆಸ್ತೈನ್​ನಲ್ಲಿ ಎಷ್ಟೊಂದು ಮಕ್ಕಳು ಮಡಿದಿವೆ. ಅಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಲಿ. ಎಂದು ಅನೇಕರು ನೋವನ್ನು ವ್ಯಕ್ತಪಡಿಸಿದ್ಧಾರೆ ಈ ಫೋಟೋದಡಿ ಅನೇಕರು.

ಇದನ್ನೂ ಓದಿ : Viral Video: ಫ್ಲಿಪ್​ಕಾರ್ಟ್​; ಮುರಿದ ಕಿಚನ್​ ಚಿಮಣಿ, ಕೊನೆಗೂ ಪರಿಹಾರ ಪಡೆದ ಗ್ರಾಹಕರು

ಇಲ್ಲಿರುವ ಹೆಣ್ಣುಮಕ್ಕಳಿಗೆ ಬಹಳ ಸುಂದರವಾದ ಹ್ಯಾಲ್ಯೋವೀನ್​ ಕಾಸ್ಟ್ಯೂಮ್​ ಸಿಕ್ಕಿವೆ ಎಂದಿದ್ದಾರೆ ಒಬ್ಬರು. ಪ್ಯಾಲೆಸ್ತೈನ್ ಮಕ್ಕಳ ಗತಿ ಏನು ಎಂದು ಮತ್ತೆ ಮತ್ತೆ ಕೇಳಿದ್ಧಾರೆ ಕೆಲವರು. ಝ್ಯೂಕ್​ ಈ ವೇಷದಲ್ಲಿ ಬಹಳ ಆಕರ್ಷಕವಾಗಿ ಕಾಣುತ್ತಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ಆ ಪುಟ್ಟಮಗು ಬಹಳ ಮುದ್ದಾಗಿದೆ ಎಂದಿದ್ಧಾರೆ ಮತ್ತೊಬ್ಬರು. ಯಾಕೆ ಮಕ್ಕಳೆಲ್ಲ ಅತ್ತ ತಿರುಗಿವೆ ಎಂದು ಕೇಳಿದ್ದಾರೆ ಮಗದೊಬ್ಬರು.

ಈ ಫೋಟೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!