Viral: ಪನೀರ್​ ಪ್ರಿಯರಿಗಾಗಿ ಇಲ್ಲಿದೆ ವಿಶೇಷ ಫೋಟೊ; ಇದನ್ನು ನೋಡಿದ ಮೇಲೆ ನೀವು ಏನು ಹೇಳುತ್ತೀರಿ?

Street Food: ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪನೀರ್ ಪ್ರಿಯರನ್ನು ಕಂಗೆಡಿಸಿದೆ. ಬೀದಿಬದಿ ತಯಾರಿಸುವ ಪನೀರ್ ಖಾದ್ಯಗಳನ್ನು ಬಾಯಿಚಪ್ಪರಿಸಿ ತಿನ್ನುವವರೆಲ್ಲ ಸಪ್ಪೆ ಮೋರೆ ಹಾಕಿದ್ದಾರೆ. ಆಹಾರ ಶುಚಿತ್ವ ಮತ್ತು ಆರೋಗ್ಯದ ಬಗ್ಗೆ ನೆಟ್ಟಿಗರು ಸಾಕಷ್ಟು ಚರ್ಚಿಸಿದ್ದಾರೆ. ಪನೀರ್​ ತಯಾರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಮನೆಯಲ್ಲಿಯೇ ತಯಾರಿಸಿ ಎಂದು ಸಲಹೆ ನೀಡಿದ್ದಾರೆ.

Viral: ಪನೀರ್​ ಪ್ರಿಯರಿಗಾಗಿ ಇಲ್ಲಿದೆ ವಿಶೇಷ ಫೋಟೊ; ಇದನ್ನು ನೋಡಿದ ಮೇಲೆ ನೀವು ಏನು ಹೇಳುತ್ತೀರಿ?
ಪನೀರ್ ಪ್ರಿಯರಿಗಾಗಿ ಈ ವಿಶೇಷ ಚಿತ್ರ!
Follow us
ಶ್ರೀದೇವಿ ಕಳಸದ
|

Updated on: Oct 31, 2023 | 11:45 AM

Paneer Lover : ಪನೀರ್ ಎಂದರೆ ಅನೇಕರಿಗೆ ಹಸಿವು ದುಪ್ಪಟ್ಟಾಗುತ್ತದೆ, ಅದರಲ್ಲೂ ಮಕ್ಕಳಿಗಂತೂ ಕೇಳಲೇಬೇಡಿ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿರುವ ಈ ಫೋಟೋ ನೋಡಿದ ಮೇಲೆ ಪನೀರ್​ ಪ್ರಿಯರ ಮನಸಿನಲ್ಲಿ ಏನು ಓಡುತ್ತದೆಯೋ? ನೆಟ್ಟಿಗರಂತೂ ಆಹಾರ ಸುರಕ್ಷತೆ, ಶುಚಿತ್ವದ ಬಗ್ಗೆ ಚರ್ಚೆ ನಡೆಸಿದ್ದಾರೆ. ಆಹಾರ ತಯಾರಿಸುವ ಜಾಗ, ನೈರ್ಮಲ್ಯದ ಬಗ್ಗೆ ತಾವು ಕಂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಶುಚಿತ್ವವನ್ನು ನಿರ್ಲಕ್ಷಿಸಿದಲ್ಲಿ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ಎನ್ನುವುದನ್ನು ಹೇಳಿದ್ದಾರೆ. ರಸ್ತೆಬದಿ ಸಿಗುವ ಪನೀರ್​ ಖಾದ್ಯಗಳನ್ನು ಬಾಯಿಚಪ್ಪರಿಸಿ ತಿನ್ನುವ ಮಂದಿ ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕು ಎನ್ನುವಂತಿದೆ ಈ ಪೋಸ್ಟ್​.

ಇದನ್ನೂ ಓದಿ : Viral Video: ಹುಲಿಗಳನ್ನು ಸಾಕಲಾಗದು; ಈ ಯುವತಿ ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎನ್ನುತ್ತಿರುವ ನೆಟ್ಟಿಗರು  

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪೇರಿಸಿಟ್ಟ ಪನೀರ್ ತುಂಡುಗಳ ಮೇಲೆ ಅಸಹ್ಯಕರವಾಗಿ ಕುಳಿತಿರುವ ವ್ಯಕ್ತಿಯ ಫೋಟೋವನ್ನು X ನಲ್ಲಿ @zhr_jafri ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನಂತರ ಬ್ರ್ಯಾಂಡ್​ ಇಲ್ಲದ ಪನೀರ್​ ಅನ್ನು ಎಂದಿಗೂ ಖರೀದಿಸಬೇಡಿ ಎಂದಿದ್ದಾರೆ. ಈ ಪೋಸ್ಟ್ ಅನ್ನು ಅಕ್ಟೋಬರ್ 28 ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 61,000 ಜನರು ಈ ಫೋಟೋ ನೋಡಿದ್ದಾರೆ. ಸುಮಆರು 300 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಪನೀರ್​ ಪ್ರಿಯರಿಗಾಗಿ ಈ ಫೋಟೋ

ಮನೆಯಲ್ಲಿ ಪನೀರ್, ಚೀಸ್ ಮತ್ತು ತುಪ್ಪ ತಯಾರಿಸಲು ಹೆಚ್ಚು ಶ್ರಮ ಮತ್ತು ಸಮಯ ತೆಗೆದುಕೊಳ್ಳುತ್ತದೆ, ಪರ್ವಾಗಿಲ್ಲ. ಆದರೆ ನಾವಂತೂ ಎಂದಿಗೂ ಹೊರಗಿನಿಂದ ಈ ಪದಾರ್ಥಗಳನ್ನು ಖರೀದಿಸುವುದಿಲ್ಲ ಎಂದಿದ್ದಾರೆ ಅನೇಕರು. ಬ್ರ್ಯಾಂಡ್​ವುಳ್ಳವರು ಕೂಡ ಉತ್ತಮವಾಗಿ ಪನೀರ್​ ತಯಾರಿಸುತ್ತಾರೆ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದ್ದಾರೆ ಕೆಲವರು. ಎಲ್ಲರೂ ಮನೆಯಲ್ಲೇ ಪನೀರ್​ ತಯಾರಿಸಿ, ಇದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ ಎಂದಿದ್ದಾರೆ ಮತ್ತೊಂದಿಷ್ಟು ಜನ.

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ

ಬ್ರ್ಯಾಂಡ್​ ಇರದ ಪನೀರ್​, ಬಜೆಟ್​ ಸ್ನೇಹಿ ಎಂದು ಅನೇಕರು ಖರೀದಿಸುತ್ತಾರೆ. ಆದರೆ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ ಎಂದಿದ್ದಾರೆ ಒಬ್ಬರು. ಒಟ್ಟಾರೆ ಪನೀರ್ ತಿನ್ನಲೇಬಾರದು ಎನ್ನಿಸಿಬಿಟ್ಟಿತು ಈ ಫೋಟೋ ನೋಡಿದ ಮೇಲೆ ಎಂದಿದ್ದಾರೆ ಇನ್ನೊಬ್ಬರು. ರಸ್ತೆಬದಿಯಂತೂ ಪನೀರ್​ ಖಾದ್ಯ ತಿನ್ನಲೇಬೇಡಿ ಎಂದಿದ್ದಾರೆ ಮತ್ತೊಬ್ಬರು.

ಹಾಗಿದ್ದರೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ