Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ

Snakes: ಈಕೆ ಸಾಕುಪ್ರಾಣಿಯನ್ನು ನಿಭಾಯಿಸಿದಂತೆ ಈ ದೊಡ್ಡಗಾತ್ರದ ಹಾವುಗಳನ್ನು ಸೀಲಿಂಗ್​ನಿಂದ ಹಿಡಿದಿದ್ದಾಳಲ್ಲ, ಹೇಗೆ ಇದು ಸಾಧ್ಯ? ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅತ್ಯಂತ ಶಾಂತಭಾವದಿಂದ, ಪ್ರೀತಿಯಿಂದ ಅವುಗಳನ್ನು ಲೀಲಾಜಾಲವಾಗಿ ಹಿಡಿದೆಳೆದ ರೀತಿ ನಿಜಕ್ಕೂ ಅದ್ಭುತವಾಗಿದೆ. ಖಂಡಿತ ನೀವೊಮ್ಮೆ ಈ ವಿಡಿಯೋ ನೋಡಲೇಬೇಕು.

Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ
ಸೀಲಿಂಗ್​ನಿಂದ ಹಾವುಗಳನ್ನು ಹಿಡಿದೆಳೆಯುತ್ತಿರುವ ಯುವತಿ
Follow us
ಶ್ರೀದೇವಿ ಕಳಸದ
|

Updated on:Oct 30, 2023 | 10:52 AM

Australia: ಹಾವುಗಳೆಂದರೆ ಬಹುಪಾಲು ಜನರಿಗೆ ಭಯವೇ. ಕೆಲವೇ ಕೆಲವರು ಮಾತ್ರ ನಿರ್ಭೀತಿಯಿಂದ ಅವುಗಳನ್ನು ಸಮೀಪಿಸುತ್ತಾರೆ. ಇದೀಗ ವೈರಲ್ (Viral) ಆಗಿರುವ ವಿಡಿಯೋದಲ್ಲಿ ಆಸ್ಟ್ರೇಲಿಯಾದ ಯುವತಿಯೊಬ್ಬಳು ಸೀಲಿಂಗ್​ನಿಂದ ಎರಡು ದೈತ್ಯಗಾತ್ರದ ಹಾವುಗಳನ್ನು ಹೊರತೆಗೆದು ರಕ್ಷಿಸಿದ್ದಾಳೆ. ಅತ್ಯಂತ ಸಲೀಸಾಗಿ ಅವುಗಳನ್ನು ಆಕೆ ಹಿಡಿದೆಳೆಯುವ ಕೌಶಲ, ಸಾಹಸ ಮಾತ್ರ ಅದ್ಭುತ. ನೆಟ್ಟಿಗರು ಈ ವಿಡಿಯೋ ನೋಡಿ ಹಾವುಗಳ ಬಗೆಗಿರುವ ಅವಳ ಪ್ರೇಮ ಮತ್ತು ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಈ ಸರ್ಕಸ್ಸಿಗನ ಲೈಸನ್ಸ್​ ಈಗಾಗಲೇ ರದ್ದಾಗಿರಬೇಕಲ್ಲವೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಸೆಪ್ಟೆಂಬರ್ 22ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 5 ಮಿಲಿಯನ್ ಜನರು ನೋಡಿದ್ದಾರೆ. 74,000 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಆಸ್ಟ್ರೇಲಿಯನ್ನರು ಈ ಹಾವುಗಳನ್ನು ಅತ್ಯಂತ ವಿಭಿನ್ನವಾಗಿ ನಿರ್ವಹಿಸುತ್ತಾರೆ, ಆಕೆ ಎಷ್ಟೊಂದು ಶಾಂತವಾಗಿದ್ದಾಳೆ ನೋಡಿ ಎಂದಿದ್ದಾರೆ ಅನೇಕರು.

ಸೀಲಿಂಗ್​ನಿಂದ ಹಾವುಗಳನ್ನು ಹೊರತೆರೆಯುತ್ತಿರುವ ಯುವತಿ

ಸಾಕುಪ್ರಾಣಿಗಳಂತೆ ಅವರು ಈ ಹಾವುಗಳೆರಡನ್ನು ನಿಭಾಯಿಸಿದ್ದಾರೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಆಕೆಯ ಮುಖ ಎಷ್ಟೊಂದು ಪ್ರಶಾಂತವಾಗಿ ಕೂಡಿತ್ತು ಇವುಗಳನ್ನು ಹಿಡಿಯುವಾಗ ಎಂದಿದ್ದಾರೆ ಇನ್ನೊಬ್ಬರು. ತುಂಬಾ ಧೈರ್ಯಶಾಲಿ ಈಕೆ, ನನಗಷ್ಟೊಂದು ಧೈರ್ಯ ಇಲ್ಲವೇ ಇಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಕ್ರಿಕೆಟ್ ಧರ್ಮ ಜಾತಿ ಭಾಷೆಗಿಂತ ಈ ರೀತಿಯ ಕೆರಳುವಿಕೆಯೇ ನಮ್ಮನ್ನು ಒಗ್ಗೂಡಿಸುವುದು ಮೋಜಿನ ಸಂಗತಿಯಲ್ಲವೆ?

ಸ್ನೇಕ್​ ವುಮನ್​ ಎಂಬ ಪುರಸ್ಕಾರ ಇವರಿಗೆ ನೀಡಬೇಕು ಎಂದಿದ್ದಾರೆ ಒಬ್ಬರು. ಒಮ್ಮೆ ಹಾವು ನೋಡಿದರೆ ತಿಂಗಳಾನುಗಟ್ಟಲೆ ಭಯಪಡುತ್ತೇನೆ, ಆದರೆ ಈಕೆ…! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಇನ್ನೊಬ್ಬರು. ಏನೇ ಆಗಲಿ ಈಕೆ ಇಷ್ಟೊಂದು ಸಮಾಧಾನದಿಂದ ಇದನ್ನು ನಿರ್ವಹಿಸಿದ್ದಾಳೆಂದರೆ ಆಕೆಗೆ ಹಾವುಗಳ ಬಗ್ಗೆ ಅತ್ಯಂತ ಪ್ರೀತಿಯಿದೆ. ಅವುಗಳನ್ನು ಹಿಂಸಿಸದೆ ಶಾಂತವಾಗಿ ರಕ್ಷಿಸಿದ ಪ್ರೀತಿಗೆ ಏನು ಹೇಳುವುದೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:52 am, Mon, 30 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ