AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಳಿದ ತಕ್ಷಣ ಸೊಸೆ ‘ಟೀ’ ಕೊಡಲಿಲ್ಲ ಎಂದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಮಾವ

ಸಂಜೆ ಚಹಾ ಕೇಳಿದ ತಕ್ಷಣ ಸೊಸೆ ಚಹಾ ಮಾಡಿ ಕೊಟ್ಟಿಲ್ಲ ಎಂದು ಮಾವ ಕೋಪಗೊಂಡು ತನ್ನ ಮೇಲೆ ತಾನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.  ವೃದ್ಧನನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕೇಳಿದ ತಕ್ಷಣ ಸೊಸೆ ‘ಟೀ’ ಕೊಡಲಿಲ್ಲ  ಎಂದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಮಾವ
Follow us
ಅಕ್ಷತಾ ವರ್ಕಾಡಿ
|

Updated on:Oct 29, 2023 | 3:28 PM

ಉತ್ತರ ಪ್ರದೇಶ: ಬಂದಾ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ . ವೃದ್ಧನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಇದಕ್ಕೆ ಕಾರಣ ತಿಳಿದರೆ ನೀವೂ ಖಂಡಿತಾ ಆಶ್ಚರ್ಯ ಪಡುತ್ತೀರಿ. ತನ್ನ ಸೊಸೆ ಸಂಜೆ ಚಹಾ ಕೇಳಿದ ತಕ್ಷಣ ಕೊಟ್ಟಿಲ್ಲ ಎಂದು ಮಾವ ಕೋಪಗೊಂಡು ತನ್ನ ಮೇಲೆ ತಾನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.  ವೃದ್ಧನನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ತಿಳಿದುಬಂದಿದೆ.

ಬಂದಾ ಜಿಲ್ಲೆಯ ಕಮಾಸಿನ್ ಪೊಲೀಸ್ ಠಾಣೆ ವ್ಯಾಪ್ತಿಯ ಆದೌರಾ ಗ್ರಾಮದಲ್ಲಿ ನಡೆದಿದೆ. ಅವಧ್ ಕಿಶೋರ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಕಿರುಚಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ತಕ್ಷಣ ಸ್ಪಂದಿಸಿ ಬಾಗಿಲು ತೆರೆದು ಒಳಗೆ ಹೋಗಿ ಬೆಂಕಿ ನಂದಿಸಿ ವೃದ್ಧನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೃದ್ಧೆಯೊಬ್ಬರ ಆತ್ಮಹತ್ಯೆಯಿಂದ ಕುಟುಂಬದಲ್ಲಿ ಗೊಂದಲ ಉಂಟಾಗಿದ್ದು, ಹಳ್ಳಿಯಲ್ಲೂ ನೀರವ ಮೌನ ಆವರಿಸಿದೆ.

ಇದನ್ನೂ ಓದಿ: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್

ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ ವೃದ್ಧ:

ಕುಟುಂಬದ ಕೆಲವರು ಜಾತ್ರೆ ವೀಕ್ಷಿಸಲು ನಗರಕ್ಕೆ ತೆರಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮನೆಯಲ್ಲಿ ಸೊಸೆ ಮತ್ತು ಮಾವ ಮಾತ್ರ ಇದ್ದಿದ್ದರಿಂದ ಮಾವ ಸೊಸೆಯ ಬಳಿ ಚಹಾ ಮಾಡಿ ಕೊಡಲು ಹೇಳಿದ್ದು, ಸೊಸೆ ಎಷ್ಟೇ ಹೊತ್ತಾದ್ದರೂ ಚಹಾ ಕೊಡದ ಕಾರಣ ಮಾವ ಕೋಪಗೊಂಡು ಪರಸ್ಪರ ವಾಗ್ವಾದ ನಡೆದಿದೆ. ವಾಗ್ವಾದ ಜಗಳಕ್ಕಿಳಿದು ಅಂತಿಮವಾಗಿ ಮಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿರುವುದು ತನಿಖೆಯ ವೇಳೆ ಕುಟುಂಬಸ್ಥರು ತಿಳಿಸಿದ್ದಾರೆ.

ಮೃತದೇಹವನ್ನು ಬಂಡಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಬಾಬೇರು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪರಸ್ಪರ ಜಗಳದಿಂದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:08 pm, Sun, 29 October 23