AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಸರ್ಕಸ್ಸಿಗನ ಲೈಸನ್ಸ್​ ಈಗಾಗಲೇ ರದ್ದಾಗಿರಬೇಕಲ್ಲವೆ?

Rash Driving: ನೆಟ್ಟಿಗರು ಇದು ಕೇರಳದ ವಿಡಿಯೋ ಇರಬೇಕು ಎಂದು ಊಹಿಸುತ್ತಿದ್ದಾರೆ. ದ್ವಿಚಕ್ರವಾಹನ ಸವಾರನು ಸರ್ಕಸ್​ ಕಂಪೆನಿಯಲ್ಲಿದ್ದನೇನೋ, ಇಲ್ಲೇಕೆ ಬಂದಿದ್ದಾನೆ ಎಂಬಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಇವನಿಗೆ ಏನೋ ಸಮಸ್ಯೆ ಇದೆ, ಜೈಲಿಗೆ ಅಟ್ಟಲೇಬೇಕು ಇಲ್ಲವಾದರೆ ಇವನು ಪಾಠ ಕಲಿಯಲಾರ, ಅಷ್ಟೇ ಅಲ್ಲ ಇನ್ನೊಬ್ಬರ ಜೀವಕ್ಕೂ ಕುತ್ತು ತರುತ್ತಾನೆ ಎನ್ನುತ್ತಿದ್ದಾರೆ.

Viral Video: ಈ ಸರ್ಕಸ್ಸಿಗನ ಲೈಸನ್ಸ್​ ಈಗಾಗಲೇ ರದ್ದಾಗಿರಬೇಕಲ್ಲವೆ?
ಟ್ರಾಫಿಕ್​ನಲ್ಲಿ ಸರ್ಕಸ್​ ಮಾಡುತ್ತಿರುವ ದ್ವಿಚಕ್ರವಾಹನ ಸವಾರ
ಶ್ರೀದೇವಿ ಕಳಸದ
|

Updated on:Oct 28, 2023 | 3:14 PM

Share

Driving: ಈತನಿಗೆ ಹುಚ್ಚು ಹಿಡಿದಿದೆಯೇ? ಇದು ಕೇರಳ (Kerala). ಕೇರಳದಲ್ಲಿ ಇಷ್ಟು ನಿಧಾನವಾಗಿ ಬಸ್​ ಓಡಿಸುತ್ತಾರೆಯೇ? ಈಗಾಗಲೇ ಈ ದ್ವಿಚಕ್ರವಾಹನ ಸವಾರನ ಲೈಸನ್ಸ್​ ರದ್ದಾಗಿರುತ್ತದೆ. ಈ ಬಸ್​ ಡ್ರೈವರ್ ಕೆಳಗಿಳಿದು ದ್ವಿಚಕ್ರವಾಹನ ಸವಾರನಿಗೆ ಹೊಡೆಯಲಿ ಎಂದು ಕಾಯುತ್ತಿದ್ದೇನೆ. ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ದ್ವಿಚಕ್ರಸವಾರನಿಗೆ ಜೈಲುಶಿಕ್ಷೆಯಾಗಲೇಬೇಕು. ಕೇರಳದಲ್ಲಿ ಯಾಕೆ ಜನ ಹೀಗೆ? ಬಸ್​ ಢಿಕ್ಕಿ ಹೊಡೆದು ಸಾವನ್ನಪ್ಪಿದರೆ ಏನು ಗತಿ? ಬಸ್​ ಚಾಲಕ ಇಷ್ಟೊಂದು ಸಂಯಮದಿಂದ ವರ್ತಿಸುತ್ತಿರುವುದೇಕೆ? ಬಸ್​ ಚಾಲಕನಿಗೆ ಕೋಪ ಬರಲಿ ಎಂದು ನಿರೀಕ್ಷಿಸುತ್ತಿದ್ದೇನೆ. ಬಸ್ಸಿನ ಹಾರ್ನ್​ ಕೇಳುತ್ತ ನಾನಂತೂ ನಾಗಿನ್​ ಡ್ಯಾನ್ಸ್ ಮಾಡುತ್ತಿದ್ದೇನೆ… ರೆಡ್ಡಿಟ್​ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ಫ್ಲಿಪ್​ಕಾರ್ಟ್​ನಿಂದ ನಕಲಿ ಪಾರ್ಸೆಲ್​​; ರೂ 1 ಲಕ್ಷ ಕೊಟ್ಟು ಆರ್ಡರ್ ಮಾಡಿದ್ದು ಸೋನಿ ಟಿವಿ, ತಲುಪಿದ್ದು ಏನು? 

ರೆಡ್ಡಿಟ್​ನಲ್ಲಿ ಈ ವಿಡಿಯೋವನ್ನು 3 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 500 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಟ್ರಾಫಿಕ್​ನಲ್ಲಿ ರಸ್ತೆ ಮಧ್ಯೆ ಹೇಗೆಂದರೆ ಹಾಗೆ ದ್ವಿಚಕ್ರವಾಹನ ಓಡಿಸುತ್ತ ತನ್ನ ಜೀವದ ಬಗ್ಗೆಯೂ ಆಲೋಚನೆ ಇಲ್ಲದೆ ಹೊರಟಿದ್ದಾನೆ. ಅವನಿಗೆ ಪಾಠ ಕಲಿಸಬೇಕೆಂದು ಅವನ ಬೆನ್ನಟ್ಟಿ ಹೊರಟಿದ್ದಾನೆ ಬಸ್​ ಚಾಲಕ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ದ್ವಿಚಕ್ರವಾಹನ ಸವಾರನ ಈ ಅಪಾಯಕಾರೀ ನಡೆ

ಈ ವಿಡಿಯೋ ನೋಡಿದ ಅನೇಕರು ಬಸ್​ ಚಾಲಕನಿಗೆ ಯಾಕೆ ಕೋಪ ಬರುತ್ತಿಲ್ಲ? ಎಂದಿದ್ದಾರೆ. ಬಸ್​ ಚಾಲಕನೂ ಇಲ್ಲಿ ಮೂರ್ಖತನ ಪ್ರದರ್ಶಿಸುತ್ತಿದ್ದಾನೆ ಎಂದಿದ್ದಾರೆ ಇನ್ನೊಂದಿಷ್ಟು ಜನ. ದ್ವಿಚಕ್ರವಾಹನ ಸವಾರ ಬಹುಶಃ ಹೀಗೆಯೇ ಒಂದು ದಿನ ರಸ್ತೆಯಲ್ಲಿಯೇ ತನ್ನ ಕಥೆ ಮುಗಿಸಿಕೊಳ್ಳುತ್ತಾನೇನೋ ಎಂದಿದ್ದಾರೆ ಮತ್ತೊಂದಿಷ್ಟು ಜನ. ಕೇರಳದಲ್ಲಿ ಇಂಥದೆಲ್ಲ ಸಾಮಾನ್ಯ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಸಪ್ತ ಸಾಗರದಾಚೆ ಎಲ್ಲೋ; ಅಮ್ಮ ಮಗನ ಮಲ್ಟಿಲಿಂಗ್ವಲ್ ಮ್ಯಾಷಪ್​ 

ದ್ವಿಚಕ್ರ ಸವಾರನಿಗೆ ತಲೆ ಸರಿ ಇಲ್ಲ, ತಾನು ಹಾಳಾಗಿ ಹೋಗುವುದಲ್ಲದೆ ಇನ್ನೊಬ್ಬರನ್ನೂ ಇವನು ಬಲಿ ತೆಗೆದುಕೊಳ್ಳವುದು ಗ್ಯಾರಂಟಿ! ಇವನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದಿದ್ದಾರೆ ಒಬ್ಬರು. ಇಂಥವರನ್ನು ಹೀಗೆಯೇ ಬಿಡಬಾರದು, ಬುದ್ಧಿ ಕಲಿಸಬೇಕು. ಬುದ್ಧಿ ನೆಟ್ಟಗಿರುವ ಯಾರೂ ಹೀಗೆ ವರ್ತಿಸಲಾರರು ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:12 pm, Sat, 28 October 23