Viral Video: ಸಪ್ತ ಸಾಗರದಾಚೆ ಎಲ್ಲೋ; ಅಮ್ಮ ಮಗನ ಮಲ್ಟಿಲಿಂಗ್ವಲ್ ಮ್ಯಾಷಪ್​

Mashup: ತಮಿಳಿನ ಈ ಅಮ್ಮ ಮಗ ಮಲ್ಟಿಲಿಂಗ್ವಲ್ ಮ್ಯಾಷಪ್​ನಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತರು. ಇದೀಗ ಅವರ ಹೊಸ ವಿಡಿಯೋ ವೈರಲ್ ಆಗುತ್ತಿದೆ. ಐದು ಭಾಷೆಗಳ ಸಿನೆಮಾ ಗೀತೆಗಳ ತುಣುಕುಗಳನ್ನು ಅವರು ಪ್ರಸ್ತುತಪಡಿಸಿದ್ದು ಅವುಗಳಲ್ಲಿ ಸಪ್ತ ಸಾಗರದಾಚೆ ಎಲ್ಲೋ ಹಾಡು ಕೂಡ ಸೇರಿದೆ. ಕನ್ನಡದ ಸಿನಿಪ್ರಿಯರು ಈ ವಿಡಿಯೋದಡಿ ಅತ್ಯಂತ ಹರ್ಷದಿಂದ ಪ್ರತಿಕ್ರಿಯಿಸಿ ಅಮ್ಮನ ಧ್ವನಿಯನ್ನು ಶ್ಲಾಘಿಸಿದ್ದಾರೆ.

Viral Video: ಸಪ್ತ ಸಾಗರದಾಚೆ ಎಲ್ಲೋ; ಅಮ್ಮ ಮಗನ ಮಲ್ಟಿಲಿಂಗ್ವಲ್ ಮ್ಯಾಷಪ್​
Follow us
ಶ್ರೀದೇವಿ ಕಳಸದ
|

Updated on: Oct 28, 2023 | 12:00 PM

Music: ತಮಿಳಿನ ಸನತ್​ ಶ್ರೀ ಕೃಷ್ಣನ್​ ತನ್ನ ತಾಯಿಯೊಂದಿಗೆ ಮಲ್ಟಿಲಿಂಗ್ವಲ್​ ಮ್ಯಾಷಪ್​  (Multilingual Mashup) ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಮತ್ತೊಂದು ಹೊಸ ಮ್ಯಾಷಪ್​​ನೊಂದಿಗೆ ಅವರು ಸುದ್ದಿಯಲ್ಲಿದ್ದಾರೆ. ಐದು ಭಾಷೆಗಳ ಐದು ಹಾಡುಗಳನ್ನು ತನ್ನ ತಾಯಿಯೊಂದಿಗೆ ಹಾಡಿದ್ದಾರೆ. ಹೇಶಮ್ ಅಬ್ದುಲ್​ ವಹಾಬ್​, ಎ ಆರ್ ರೆಹಮಾನ್​, ಇಳಯರಾಜಾ, ಚರಣ ರಾಜ್​, ಹ್ಯಾರೀಸ್ ಜಯರಾಜ್​ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ತೆಲುಗು ಭಾಷೆಯ ಚಿತ್ರಗೀತೆಗಳ ತುಣುಕುಗಳನ್ನು ಪ್ರಸ್ತುತಪಡಿಸಿದ್ದಾರೆ.

ಇದನ್ನೂ ಓದಿ : Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್ 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು 10 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 5.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಅವರವರ ಭಾಷೆಯ ಹಾಡುಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಹಾಡನ್ನು ಹಾಡಿದ್ದು, ಅನೇಕ ಕನ್ನಡಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಅಮ್ಮ ಮಗನ ಮಲ್ಟಿಲಿಂಗ್ವಲ್​ ಮ್ಯಾಷಪ್​ ಇಲ್ಲಿದೆ

ಅಮ್ಮನ ಧ್ವನಿ ತುಂಬಾ ಚೆನ್ನಾಗಿದೆ. ಅಮ್ಮಾ ಫ್ಯಾನ್ಸ್​ ಲೈಕ್​ ಬಟನ್ ಪ್ಲೀಸ್​… ಎಂದು ಹೇಳುತ್ತಿದ್ದಾರೆ ಅನೇಕರು. ನಮ್ಮ ಕನ್ನಡ ಸೂಪರ್​, ಕನ್ನಡದ  ಹಾಡು ಬಹಳ ಚೆಂದ, ಕರ್ನಾಟಕದಿಂದ ನಿಮಗೆ ತುಂಬು ಪ್ರೀತಿ… ಅಂತೆಲ್ಲ ಬಹುಪಾಲು ಜನರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಮಲಯಾಳ, ತಮಿಳು ಅಭಿಮಾನಿಗಳೂ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ

ಕರ್ನಾಟಕದವನಾದ ನಾನು ನಿಮ್ಮೆಲ್ಲ ರೀಲ್​ಗಳನ್ನು ನೋಡುತ್ತೇನೆ, ಬಹಳ ಚೆನ್ನಾಗಿ ಪ್ರಸ್ತುತಪಡಿಸುತ್ತೀರಿ, ನಾನು ನಿಮ್ಮ ಅಭಿಮಾನಿ ಎಂದಿದ್ದಾರೆ ಒಬ್ಬರು. ಯಾವ ಭಾಷೆಯ ಹಾಡನ್ನು ನಿಮ್ಮ ತಾಯಿ ಹಾಡಿದರೂ ಅದಕ್ಕೆ ವಿಶೇಷ ಸ್ಪರ್ಶವಿರುತ್ತದೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಅಮ್ಮನಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ