Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ

Inspirational Story: ಈ ರೋಗದಿಂದ ಮುಕ್ತಿಯೇ ಇಲ್ಲ ಎಂದು ತಿಳಿದಾಗ ನಾನು ಆತ್ಮಹತ್ಯೆಗೂ ಪ್ರಯತ್ನಿಸಿದ್ದಿದೆ. ಆದರೆ ನಂತರ ಅದು ತಪ್ಪು ಎನ್ನಿಸಿತು. ಕೆಲ ಚಿಕಿತ್ಸೆಗಳಿಗೆ ಒಳಗಾಗುತ್ತ ನನ್ನನ್ನು ನಾನೇ ಸ್ವೀಕರಿಸತೊಡಗಿದ ಮೇಲೆ ಬದುಕಿನ ಹಾದಿ ವಿಸ್ತರಿಸತೊಡಗಿತು. ಏನೇ ಆಗಲಿ, ನಾನು ನನ್ನ ಬದುಕನ್ನು ಬದುಕಿಯೇ ತೀರುತ್ತೇನೆ ಎಂಬ ಛಲವನ್ನು ಬೆಳೆಸಿಕೊಳ್ಳುತ್ತ ಸಾಗುತ್ತಿದ್ದೇನೆ' ನಿಶಾ

Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ
ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ
Follow us
ಶ್ರೀದೇವಿ ಕಳಸದ
|

Updated on:Oct 27, 2023 | 3:20 PM

Dystonia: ‘ಆರು ವರ್ಷದವಳಿದ್ದಾಗ ನನ್ನ ದೇಹ ತನ್ನಷ್ಟಕ್ಕೆ ತಾನೇ ಚಲಿಸುವುದು (ಆನೈಚ್ಛಿಕ) ಅನುಭವಕ್ಕೆ ಬಂದಿತು. ಇದರಿಂದಾಗಿ ನಾನು ಮಾತನಾಡಲು, ಓದಲು, ಬರೆಯಲು, ತಿನ್ನಲು, ಕುಳಿತುಕೊಳ್ಳಲು, ನಡೆಯಲು ಕಷ್ಟವನ್ನು ಅನುಭವಿಸತೊಡಗಿದೆ. ಒಟ್ಟಾರೆಯಾಗಿ ದೈನಂದಿನ ಚಟುವಟಿಕೆಗಳನ್ನು ಪೂರೈಸಿಕೊಳ್ಳುವುದು ಸಾಹಸವೆಂಬಂತಾಯಿತು. ನನ್ನ ಪೋಷಕರು ಸಾಕಷ್ಟು ಡಾಕ್ಟರುಗಳನ್ನು ಸಂಪರ್ಕಿಸಿದರು. ಆದರೆ ಯಾವ ಡಾಕ್ಟರೂ ನನಗಿರುವ ಸಮಸ್ಯೆಯನ್ನು ಪತ್ತೆ ಹಚ್ಚಲಿಲ್ಲ. ಮುಂದೆ 10 ವರ್ಷದವಳಾದಾಗ ಎಪಿಲೆಪ್ಸಿ (Epilepsy) ರೋಗ ಪತ್ತೆಯಾಯಿತು. ಅನೈಚ್ಛಿಕ ಸ್ನಾಯುಗಳ ಚಲನೆಯಿಂದಾಗಿ ನನ್ನ ಆರೋಗ್ಯ ಕ್ಷೀಣಿಸುತ್ತ ಬಂದಿತು. 17 ನೇ ವಯಸ್ಸಿನಲ್ಲಿದ್ದಾಗ ಡಿಸ್ಟೋನಿಯಾ (Dystonia) ರೋಗಕ್ಕೂ ಈಡಾದೆ. ಆಗ ಆತ್ಮಹತ್ಯೆಗೂ ಪ್ರಯತ್ನಿಸಿದೆ.’

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ಸೂಪರ್​ ಮಾರ್ಕೆಟ್​ನಿಂದ ತಂದ ಪಾಲಕ್​ ಸೊಪ್ಪಿನಲ್ಲಿ ಕಪ್ಪೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಶಾಶ್ವತವಾದ ಚಿಕಿತ್ಸೆ ಈ ರೋಗಕ್ಕೆ ಇಲ್ಲವಾದರೂ ನನ್ನ ದೀರ್ಘಕಾಲದ ನೋವನ್ನು ಶಮನ ಮಾಡುವ ಚಿಕಿತ್ಸೆಗಳು ಲಭ್ಯವಿದ್ದವು. ಕೆಲ ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾದೆ. ನನ್ನ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಕಲಿತೆ. ಭವಿಷ್ಯದಲ್ಲಿ ಇನ್ನೂ ಉತ್ತಮ ದಿನಗಳು ಬರುತ್ತವೆ ಎಂಬ ನಂಬಿಕೆ ಚಿಗುರೊಡೆಯತೊಡಗಿತು. ನಾನೀಗ ಭರವಸೆಯಿಂದ ಬದುಕುತ್ತಿದ್ದೇನೆ.’ ನಿಶಾ ಡಿ.ವಿ.

ಬದುಕುವ ಭರವಸೆ ಕಳೆದುಕೊಳ್ಳದ ನಿಶಾ

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನ officialpeopleofindia ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. 4 ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ ಸುಮಾರು 1.3 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ನಿಶಾ ಅವರಿಗೆ ಧೈರ್ಯ ತುಂಬಿದ್ದಾರೆ. ಅಪರೂಪದ ಕಾಯಿಲೆಗೆ ಒಳಗಾದರೂ ಅದನ್ನು ಮೆಟ್ಟಿ ನಿಲ್ಲುತ್ತಿರುವ ನಿಶಾಳ ಛಲದ ಮನೋಭಾವವನ್ನು ಶ್ಲಾಘಿಸಿದ್ದಾರೆ.

ಇದನ್ನು ಓದಿ : Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?!

ಇಂಥ ಗಟ್ಟಿ ಜನರನ್ನು ನೋಡಿದಾಗ ನಮ್ಮ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ ಎನ್ನಿಸುತ್ತವ ಎಂದು ಅನೇಕರು ಹೇಳಿದ್ದಾರೆ. ಆಕೆ ತನ್ನನ್ನು ಒಪ್ಪಿಕೊಂಡಿದ್ದಾಳಲ್ಲ, ಅದಕ್ಕಿಂತ ದೊಡ್ಡದು ಬದುಕಿನಲ್ಲಿ ಇನ್ನೇನೂ ಇಲ್ಲ, ಆದರೆ ಆ ಪ್ರಕ್ರಿಯೆಯನ್ನು ಒಳಗೊಳ್ಳುವ ಹಂತಗಳಿವೆಯಲ್ಲ, ಅದು ಬಹಳ ಯಾತನಾಮಯವಾಗಿರುತ್ತದೆ. ಒಟ್ಟಿನಲ್ಲಿ ಅವಳ ಬಗ್ಗೆ ಗೌರವ ಮೂಡುತ್ತಿದೆ ಎಂದಿದ್ದಾರೆ ಇನ್ನೂ ಕೆಲವರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:17 pm, Fri, 27 October 23

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ