Viral: ಫ್ಲಿಪ್ಕಾರ್ಟ್ನಿಂದ ನಕಲಿ ಪಾರ್ಸೆಲ್; ರೂ 1 ಲಕ್ಷ ಕೊಟ್ಟು ಆರ್ಡರ್ ಮಾಡಿದ್ದು ಸೋನಿ ಟಿವಿ, ತಲುಪಿದ್ದು ಏನು?
Flipkart: ದೊಡ್ಡಪರದೆಯ ಟಿವಿಯಲ್ಲಿ ವಿಶ್ವಕಪ್ ಫುಟ್ಬಾಲ್ ನೋಡುವ ಮಹದಾಸೆಯಿಂದ ಈ ವ್ಯಕ್ತಿ ಫ್ಲಿಪ್ಕಾರ್ಟ್ನಲ್ಲಿ ಒಂದು ಲಕ್ಷ ರೂಪಾಯಿ ಪಾವತಿಸಿ ಸೋನಿ ಟಿವಿ ಆರ್ಡರ್ ಮಾಡುತ್ತಾರೆ. ಕಾತರದಿಂದ ಕಾಯುತ್ತಿದ್ದವರಿಗೆ ಬಂದು ತಲುಪಿದ್ದು ಥಾಮ್ಸನ್ ಟಿವಿ. ಇದರಿಂದ ಆಘಾತಕ್ಕೆ ಒಳಗಾದ ವ್ಯಕ್ತಿ ಗ್ರಾಹಕ ಸೇವೆಗೆ ಸಂಪರ್ಕಿಸುತ್ತಾರೆ. ಹದಿನೈದು ದಿನಗಳಾದರೂ ಸಮಸ್ಯೆ ಬಗೆಹರಿಯುವುದಿಲ್ಲ.
Online Fraud : ವ್ಯಕ್ತಿಯೊಬ್ಬರು ದೊಡ್ಡ ಹೊಸ ಟಿವಿಯಲ್ಲಿ ವಿಶ್ವ ಫುಟ್ಬಾಲ್ ವೀಕ್ಷಿಸಬೇಕೆಂಬ ಕನಸನ್ನು ಹೊತ್ತು ಫ್ಲಿಪ್ಕಾರ್ಟ್ನಲ್ಲಿ (Flipkart) ರೂ. 1 ಲಕ್ಷ ಪಾವತಿಸಿ ಸೋನಿ ಟಿವಿ (Sony TV) ಆರ್ಡರ್ ಮಾಡಿದ್ದಾರೆ. ಆದರೆ ಸೋನಿ ಬಾಕ್ಸ್ನಲ್ಲಿ ಅವರಿಗೆ ಥಾಮ್ಸನ್ ಟಿವಿ ತಲುಪಿದೆ. ಈ ವಂಚನೆಯಿಂದ ಮನನೊಂದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ವೈರಲ್ ಆಗಿರುವ ಈ ಪೋಸ್ಟ್ನಡಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಕೆಲ ಸಲಹೆ ಸೂಚನೆಗಳನ್ನೂ ಕೊಟ್ಟಿದ್ದಾರೆ. ಗ್ರಾಹಕಸೇವೆಗೆ ಸಂಪರ್ಕಿಸಿದಾಗ ಸರಿಯಾಗಿ ಸ್ಪಂದಿಸದ ಫ್ಲಿಪ್‌ಕಾರ್ಟ್ ಸಾಮಾಜಿಕ ಜಾಲತಾಣದಲ್ಲಿ ಕೂಡ ಪ್ರತಿಕ್ರಿಯಿಸಿದೆ.
ಇದನ್ನೂ ಓದಿ : Viral Video: ಸಪ್ತ ಸಾಗರದಾಚೆ ಎಲ್ಲೋ; ಅಮ್ಮ ಮಗನ ಮಲ್ಟಿಲಿಂಗ್ವಲ್ ಮ್ಯಾಷಪ್
ಆರ್ಯನ್ ಎಂಬ X ಖಾತೆದಾರರು ತಮಗಾದ ಈ ವಂಚನೆ ಕುರಿತು ಸಾಕ್ಷಿ ಸಮೇತ ಪೋಸ್ಟ್ ಮಾಡಿದ್ದಾರೆ. ನಕಲಿ ಪಾರ್ಸೆಲ್ ತಲುಪುತ್ತಿದ್ದಂತೆ ತಕ್ಷಣವೇ ಫ್ಲಿಪ್‌ಕಾರ್ಟ್‌ನ ಗ್ರಾಹಕ ಸೇವೆಯೊಂದಿಗೆ ಸಂಪರ್ಕ ಸಾಧಿಸಿ ಅವರು ತಮಗಾದ ಸಮಸ್ಯೆಯನ್ನು ತಿಳಿಸಿದ್ದಾರೆ. ಆದರೆ ಎರಡು ವಾರಗಳ ನಂತರವೂ ಸಮಸ್ಯೆ ಬಗೆಹರಿಯದಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಸೋನಿ ಟಿವಿ ಬದಲಾಗಿ ಥಾಮ್ಸನ್ ಟಿವಿ
I had purchased a Sony tv from @Flipkart on 7th oct, delivered on 10th oct and sony installation guy came on 11th oct, he unboxed the tv himself and we were shocked to see a Thomson tv Inside Sony box that too with no accessories like stand,remote etc 1/n pic.twitter.com/iICutwj1n0
— Aryan (@thetrueindian) October 25, 2023
‘ನಾನು ಅಕ್ಟೋಬರ್ 7 ರಂದು @Flipkart ನಿಂದ Sony ಟಿವಿ ಖರೀದಿಸಿದೆ, ಅಕ್ಟೋಬರ್ 10ರಂದು ಸೋನಿಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಅಕ್ಟೋಬರ್ 11 ರಂದು ಇನ್ಸ್ಟಾಲ್ಲೇಷನ್ ಮಾಡಲು ಬರಲಿದ್ದೇನೆ ಎಂದು ತಿಳಿಸಿದರು. ಆ ಪ್ರಕಾರ ಅವರೇ ಅನ್‌ಬಾಕ್ಸ್ ಮಾಡಿದರು. ಆದರೆ ಸೋನಿ ಬಾಕ್ಸ್ನಲ್ಲಿ ಒಳಗಿದ್ದ ಟಿವಿ ಥಾಮ್ಸನ್ ಕಂಪೆನಿಯದ್ದಾಗಿತ್ತು. ಇಷ್ಟೇ ಅಲ್ಲ ಸ್ಟ್ಯಾಂಡ್, ರಿಮೋಟ್ ಮತ್ತಿತರೇ ಸಾಮಾನುಗಳಿಲ್ಲದ ಬಾಕ್ಸ್ ಅದಾಗಿತ್ತು. ಇದನ್ನು ನೋಡಿ ಇಬ್ಬರೂ ಆಘಾತಕ್ಕೆ ಒಳಗಾದೆವು.’ ಎಂದು ಆರ್ಯನ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳಿಗೆ ಜಗ್ಗದೇ ಬದುಕುತ್ತಿರುವ ನಿಶಾ
‘ಈ ಕುರಿತು ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ಗೆ ತಕ್ಷಣವೇ ತಿಳಿಸಿದೆ. ಅವರು ಟಿವಿಯ ಫೋಟೋಗಳನ್ನು ಅಪ್ಲೋಡ್ ಮಾಡಲು ತಿಳಿಸಿದರು. ಆ ಪ್ರಕಾರ ಮಾಡಿದೆ. ಆದರೆ ಎರಡು ಮೂರು ಬಾರಿ ಅಪ್ಲೋಡ್ ಮಾಡಲು ತಿಳಿಸಿದರು. ಆಗಲೂ ಮಾಡಿದೆ. ಆದರೆ ಈತನಕವು ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ’ ಎಂದು ಆರ್ಯನ್ ಹೇಳಿದ್ದಾರೆ. ನೆಟ್ಟಿಗರ ಪಾಲ್ಗೊಳ್ಳುವಿಕೆಯಿಂದ ಈ ಥ್ರೆಡ್ ಬಲುಬೇಗನೇ ವೈರಲ್ ಆಗಿದೆ. ನೀವು ‘ಓಪನ್ ಬಾಕ್ಸ್ ಡೆಲಿವರಿ’ ಯನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಅನೇಕರು ಅಚ್ಚರಿಯಿಂದ ಕೇಳಿದ್ದಾರೆ. ಈ ಟಿವಿಯನ್ನು Omnitechretail ಎಂಬ ಮಾರಾಟಗಾರರಿಂದ ಖರೀದಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಫ್ಲಿಪ್‌ಕಾರ್ಟ್ ಕ್ಷಮೆ ಯಾಚಿಸಿ, ವಿವರಗಳನ್ನು ಮೆಸೇಜ್ ಮಾಡಲು ವಿನಂತಿಸಿಕೊಂಡಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:06 pm, Sat, 28 October 23