AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಮುದ್ರದೊಳಗೆ ತೇಲುತ್ತಿರುವ ಮನೆ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ

Floating: ಸಮುದ್ರದೊಳಗೆ ಮನೆಯೊಂದು ತೇಲಿಬರುತ್ತಿರುವ ವಿಡಿಯೋ ಇದೀಗ X ನಲ್ಲಿ ವೈರಲ್ ಆಗುತ್ತಿದೆ. ಈ ಮನೆ ಇಲ್ಲಿ ಹೇಗೆ ಬಂತು ಎನ್ನುವುದರಿಂದ ಹಿಡಿದು ಇಂಥ ಮನೆಗಳ ಬಗ್ಗೆ ವಿವರವನ್ನು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಮೂರು ಲಕ್ಷ ಜನರು ಈ ವಿಡಿಯೋ ನೋಡಿ ಅಚ್ಚರಿಗೆ ಒಳಗಾಗಿದ್ದು ಒಂದೆಡೆ. ತಮಾಷೆಯ ಪ್ರತಿಕ್ರಿಯೆಗಳು ಇನ್ನೊಂದೆಡೆ. ನೀವು ಈ ವಿಡಿಯೋ ನೋಡಿ ಏನು ಹೇಳುತ್ತೀರಿ?

Viral Video: ಸಮುದ್ರದೊಳಗೆ ತೇಲುತ್ತಿರುವ ಮನೆ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ
ಶ್ರೀದೇವಿ ಕಳಸದ
|

Updated on: Oct 30, 2023 | 2:16 PM

Share

Sea : ಮಧ್ಯಕಾಲದಲ್ಲಿ ಜನರು ಹೊಸ ಭೂಮಿ, ಸಂಪತ್ತು, ಚಿನ್ನಬೆಳ್ಳಿಯನ್ನು ಹುಡುಕಲು ಸಮುದ್ರದ ಮೂಲಕ ಪ್ರಯಾಣಿಸುತ್ತಿದ್ದರು. ಆಗ ಅವರೆಲ್ಲಾ ತಮ್ಮದೇ ಆದ ವಿಧಾನದಲ್ಲಿ ಪ್ರಯಾಣಿಸಿದರು. ಕೆಲವರು ಯಶಸ್ವಿಯೂ ಆದರು. ಅವರವರಿಗೆ ಕಂಡ ಅಚ್ಚರಿಗಳನ್ನೂ ಅನುಭವಿಸಿದರು, ಸಂಶೋಧನೆಗೂ (Research) ಒಳಪಡಿಸಿದರು ಮತ್ತು ಅಭಿವೃದ್ಧಿಗೂ ಅದು ಸಹಾಯವಾಯಿತು. ಒಟ್ಟಾರೆಯಾಗಿ ನೆಲೆ ಕಂಡುಕೊಳ್ಳಲು ಅನುಕೂಲವಾಯಿತು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಗಮನಿಸಿ. ಸಮುದ್ರದೊಳಗೆ ಮನೆಯೊಂದು ತೇಲುತ್ತಲಿದೆ. ನೆಟ್ಟಿಗರು ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿ ಸಾಕಷ್ಟು ಜನರು ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ದಾಳಿಕೋರರಿಂದ ತನ್ನ ಪೋಷಕನನ್ನು ರಕ್ಷಿಸಿದ ನಾಯಿಯ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್​ 28ರಂದು X ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈತನಕ ಸುಮಾರು 3 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ಇದನ್ನು ಮರುಹಂಚಿಕೆ ಮಾಡಿದ್ದಾರೆ. ನೂರಾರು  ಜನರು ಈ ವಿಡಿಯೋದಡಿ ತಮ್ಮ ಅಭಿಪ್ರಾಯಗಳನ್ನು ತೇಲಿಸಿದ್ದಾರೆ. ನಿಮಗೂ ಈ ವಿಡಿಯೋ ನೋಡಬೇಕೆಂಬ ಆಸೆ ಆಗುತ್ತಿದೆಯಾ?

ಸಮುದ್ರದೊಳಗೆ ತೇಲುತ್ತಿರುವ ಮನೆ

ಈ ಮನೆ ಸಮುದ್ರದಲ್ಲಿ ಹೇಗೆ ಬಂದಿರಬಹುದು? ಪ್ರವಾಹದಿಂದ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಊಹಿಸಬಹುದು. ದುಬಾರಿ ಮನೆಗಳಿಗಿಂತ ಇಂಥ ಮನೆಗಳೇ ಸೂಕ್ತ ಎಂದು ಭಾವಿಸಿರುವ ಜನರ ಮನೆ ಇದಾಗಿರಬಹುದು ಎಂದಿದ್ದಾರೆ ಒಬ್ಬರು. ಭವಿಷ್ಯದಲ್ಲಿ ಎಲ್ಲರೂ ಇಂಥ ಮನೆಗಳ ಮೊರೆ ಹೋಗುತ್ತಾರೋ ಏನೋ, ಯೂಸ್ ಅಂಡ್ ಥ್ರೋದಂತೆ ಎಂದಿದ್ದಾರೆ ಇನ್ನೊಬ್ಬರು. ಈ ಮನೆ ನಂದಂತೂ ಅಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ

ಇದು ಲೈವ್​ ಆ್ಯಕ್ಷನ್ ಲೆಗೋ ಸಿನೆಮಾ ಎಂದಿದ್ದಾರೆ ಒಬ್ಬರು. ಈ ಮನೆಯನ್ನು ಯಾರೂ ಖರೀದಿಸಬೇಡಿ ಎಂದಿದ್ದಾರೆ ಇನ್ನೊಬ್ಬರು. ಸ್ಪಾಂಜ್​ಬಾಬ್ ಎಲ್ಲಿ? ಎಂದಿದ್ದಾರೆ ಮತ್ತೊಬ್ಬರು. ಇಂಥ ಮನೆಗಳನ್ನು ನಿರ್ಮಿಸುವಲ್ಲಿ ನನಗೆ ಬಹಳ ಆಸಕ್ತಿ ಇದೆ, ಇದು ಬಹಳ ಒಳ್ಳೆಯ ಕೆಲಸ ಎಂದಿದ್ದಾರೆ ಮಗದೊಬ್ಬರು. ಆಕಾಶಬುಟ್ಟಿಯಂತೆ ಕಾಣುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಇಂಥ ಮನೆಗಳನ್ನು ನೋಡಿದ್ದೇವೆ ಬಹಳಷ್ಟು ಜನರು ಇಂಥ ಮನೆಗಳಲ್ಲಿ ವಾಸಿಸುತ್ತಾರೆ ಎಂದಿದ್ದಾರೆ ಮತ್ತೊಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!