Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದಾಳಿಕೋರರಿಂದ ತನ್ನ ಪೋಷಕನನ್ನು ರಕ್ಷಿಸಿದ ನಾಯಿಯ ವಿಡಿಯೋ ವೈರಲ್

Brave: ಸ್ವಂತ ಮಕ್ಕಳೇ ಕೈಬಿಟ್ಟರೂ ಸಾಕಿದ ನಾಯಿಗಳು ಮಾತ್ರ ಕೈಬಿಡವು ಎಂದು ನೆಟ್ಟಿಗರು ಹೇಳುತ್ತಿರುವುದು ಇದಕ್ಕೇ. ಮನುಷ್ಯರಿಗಿಂತ ನಮಗೆ ನಾಯಿಗಳೇ ಹೆಚ್ಚು ಪ್ರಿಯ. ಅವುಗಳಿಗಿರುವ ನಿಷ್ಠೆ ಯಾವ ಜೀವಿಗೂ ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಅಕಸ್ಮಾತ್ ನಾಯಿ ತನ್ನ ಪೋಷಕನೊಂದಿಗೆ ಇರದಿದ್ದರೆ ಇಷ್ಟೊತ್ತಿಗೆ ಏನಾಗುತ್ತಿತ್ತೋ. ನೀವೂ ಈ ವಿಡಿಯೋ ನೋಡಿ.

Viral Video: ದಾಳಿಕೋರರಿಂದ ತನ್ನ ಪೋಷಕನನ್ನು ರಕ್ಷಿಸಿದ ನಾಯಿಯ ವಿಡಿಯೋ ವೈರಲ್
ದಾಳಿಕೋರರಿಂದ ತನ್ನ ಪೋಷಕನನ್ನು ರಕ್ಷಿಸುತ್ತಿರುವ ನಾಯಿ
Follow us
ಶ್ರೀದೇವಿ ಕಳಸದ
|

Updated on:Oct 30, 2023 | 12:49 PM

Dogs: ನಾಯಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧ. ನಂಬಿಕೆ, ನಿಷ್ಠೆ ಮತ್ತು ಅಂತಃಕರಣವೆಂದಾಗ ಕಣ್ಮುಂದೆ ಬರುವ ಪ್ರಾಣಿಗಳಲ್ಲಿ ನಾಯಿಯೇ ಮೊದಲು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪೋಷಕನೊಬ್ಬ ಫುಟ್​ಪಾತ್​ನಲ್ಲಿ ತನ್ನ ನಾಯಿಯೊಂದಿಗೆ ವಾಕ್ ಹೊರಟಿದ್ದಾನೆ. ಬೈಕ್​ಮೇಲೆ ಬಂದ ದುಷ್ಕರ್ಮಿಗಳು ಪೋಷಕನ ಮೇಲೆ ದಾಳಿ (Attack) ನಡೆಸಲು ತೊಡಗಿದಾಗ ನಾಯಿ ಅವನ ಮೇಲೆ ಪ್ರತಿದಾಳಿ ಮಾಡಿ ತನ್ನ ಪೋಷಕನನ್ನು ರಕ್ಷಿಸುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ನಾಯಿಯನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾಯಿಗಳೆಂದರೆ ಉತ್ತಮ ಸ್ನೇಹಿತರು ಎನ್ನುವುದು ಈ ವಿಡಿಯೋದಿಂದ ಸಾಬೀತಾಗುತ್ತದೆ. ಅಕ್ಟೋಬರ್​ 27ರಂದು X ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಈತನಕ ಸುಮಾರು 23 ಮಿಲಿಯನ್​ ಜನರು ನೋಡಿದ್ದಾರೆ. 27,000 ಜನರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. 3,300 ಜನರು ಪ್ರತಿಕ್ರಿಯಿಸಿದ್ದಾರೆ.

ಪೋಷಕನನ್ನು ದಾಳಿಕೋರನಿಂದ ರಕ್ಷಿಸುವ ನಾಯಿಯ ವಿಡಿಯೋ

ಅದಕ್ಕೇ ನನಗೆ ಎಲ್ಲ ಪ್ರಾಣಿಗಳಿಗಿಂತ ನಾಯಿಯೇ ಉತ್ತಮ ಎನ್ನಿಸುವುದು ಎಂದು ಒಬ್ಬರು ಹೇಳಿದ್ದಾರೆ. ಬೆಕ್ಕಿಗಿಂತ ನಾನು ನಾಯಿಯನ್ನು ಇಷ್ಟಪಡಲು ಇದೇ ಕಾರಣ ಎಂದಿದ್ದಾರೆ ಇನ್ನೊಬ್ಬರು. ಈ ನಾಯಿಗೆ ಟ್ರೀಟ್ ಕೊಡಿಸಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಾಯಿಗಳು ದೇವರ ಪ್ರತಿರೂಪ ಎಂದಿದ್ದಾರೆ ಮಗದೊಬ್ಬರು. ನಾನು ಮನುಷ್ಯರಿಗಿಂತ ನಾಯಿಯನ್ನೇ ನಂಬುತ್ತೇನೆ, ಚಿಕ್ಕಂದಿನಿಂದಲೂ ನಾಯಿಯೇ ನನ್ನ ಪರಮಾಪ್ತ ಗೆಳೆಯ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ

ಅಕಸ್ಮಾತ್​ ಅವನೊಂದಿಗೆ ನಾಯಿ ಇರದಿದ್ದರೆ ಇಷ್ಟೊತ್ತಿಗೆ ಏನಾಗಿರುತ್ತಿತ್ತೋ ಎಂದಿದ್ದಾರೆ ಒಬ್ಬರು. ನಾಯಿಯೇ ನಮ್ಮ ಮನೆ ದೇವರು ಎಂದೊಬ್ಬರು ಹೇಳಿದ್ದಾರೆ. ಸ್ವಂತ ಮಕ್ಕಳಿಗಿಂತ ನಾಯಿಯೇ ವಾಸಿ ಎಂದಿದ್ದಾರೆ ಇನ್ನೊಬ್ಬರು. ಇಷ್ಟಕ್ಕೇ ಬಿಡದೆ, ಆ ನಾಯಿ ಆ ದಾಳಿಕೋರರನ್ನು ಬೆನ್ನಟ್ಟಿ ಕಚ್ಚಬೇಕಿತ್ತು, ಪಾಠ ಕಲಿಸಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು. ಏನೇ ಆಗಲಿ ಮನುಷ್ಯ ಮನುಷ್ಯನೇ, ನಾಯಿಗೆ ಎಂದೂ ಸಮವಲ್ಲ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:40 pm, Mon, 30 October 23

ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ