Viral Video: ಸ್ಪೈಡರ್ಮ್ಯಾನ್ ಸಮಾವೇಶ; ವಿಶ್ವದಾಖಲೆಗಾಗಿ ಒಗ್ಗೂಡಿದ್ದ ಸಾವಿರಾರು ಸ್ಪೈಡರ್ಮ್ಯಾನ್ಗಳು
GWR: ಸ್ಪೈಡರ್ಮ್ಯಾನ್ ಎಂದರೆ ಮಕ್ಕಳಿಂದ ಹಿಡಿದು ಅನೇಕರಿಗೆ ವಿಚಿತ್ರ ಆಕರ್ಷಣೆ. ಇದೀಗ ವಿಶ್ವದ ನಾನಾ ಭಾಗಗಳಿಂದ ಸ್ಪೈಡರ್ಮ್ಯಾನ್ ವೇಷಧಾರಿಗಳು ಅರ್ಜೈಂಟೈನಾಗೆ ಬಂದು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಇಲ್ಲಿ ಭಾಗವಹಿಸಿದ ಸಾವಿರಕ್ಕೂ ಹೆಚ್ಚು ಜನರು, ಈ ಸಮಾವೇಶವನ್ನು ವಿಶ್ವ ಗಿನ್ನೀಸ್ ದಾಖಲೆ ಪರಿಗಣಿಸುವುದೇ? ಎಂದು ತುದಿಗಾಲಲ್ಲಿ ಕಾಯುತ್ತಿದ್ದಾರೆ.
Spiderman: ಅರ್ಜೈಂಟೈನಾದ ಬ್ಯೂನಸ್ ಐರಿಸ್‌ನಲ್ಲಿ ಭಾನುವಾರ ನಡೆದ ಸ್ಪೈಡರ್ಮ್ಯಾನ್ ಸಮಾವೇಶದಲ್ಲಿ 1,000ಕ್ಕೂ ಹೆಚ್ಚು ಐಕಾನಿಕ್ ಮಾರ್ವೆಲ್ ಸೂಪರ್ ಹೀರೋ, ಸ್ಪೈಡರ್ಮ್ಯಾನ್ಗಳು ಭಾಗವಹಿಸಿದ್ದರು. ಒಬೆಲಿಸ್ಕ್ ಸ್ಮಾರಕದಲ್ಲಿ ಈ ಸಮಾವೇಶವು ಆಯೋಜನೆಗೊಂಡಿತ್ತು. ಅರ್ಜೈಂಟೈನಾದ ಉಕಿ ಡೀನ್ ಇದನ್ನು ಆಯೋಜಿಸಿದ್ದರು. ಈ ಸಮಾವೇಶವನ್ನು ಹಮ್ಮಿಕೊಂಡ ಉದ್ದೇಶ ಗಿನ್ನೀಸ್ ದಾಖಲೆ ನಿರ್ಮಿಸುವುದಾಗಿತ್ತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಜೂನ್ 3 ರಂದು ಮಲೇಷಿಯಾದ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ (Sony Pictures Entertainment) ಆಯೋಜಿಸಿದ್ದ ಸಮಾವೇಶವು ‘ಅತೀ ದೊಡ್ಡ ಸ್ಪೈಡರ್ಮ್ಯಾನ್ ಸಮಾವೇಶ’ ಎಂದು ದಾಖಲೆ ಬರೆದಿತ್ತು.
ಇದನ್ನೂ ಓದಿ : Viral Video: ಸಮುದ್ರದೊಳಗೆ ತೇಲುತ್ತಿರುವ ಮನೆ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ
ಉಕಿ ಡೀನ್, ‘ಹಿಂದಿನ ದಾಖಲೆಯನ್ನು ಮುರಿಯುವ ಉದ್ದೇಶದಿಂದ 700 ಜನರನ್ನು ಕರೆಯಲು ಬಯಸಿದ್ದೆ. ಆದರೆ ಅದಕ್ಕೂ ಮೀರಿ ಜನರು ಇಲ್ಲಿ ಒಗ್ಗೂಡಿದ್ದಾರೆ. 1,000 ಕ್ಕೂ ಹೆಚ್ಚು ಸಹಿಗಳನ್ನು ನಾವು ಸಂಗ್ರಹಿಸಿದ್ದೇವೆ. ಸ್ಪೈಡರ್ಮ್ಯಾನ್ ಎಂಬ ಪರಿಕಲ್ಪನೆ ಒಂದು ಕ್ರೇಝ್. ನನಗಂತೂ ಇದು ಅಪರಿಮಿತ ಸಂತೋಷ ನೀಡುತ್ತದೆ. ಗಿನ್ನೀಸ್ ವಿಶ್ವ ದಾಖಲೆ ಇದನ್ನು ಪರಿಗಣಿಸಬಹುದೋ? ಘೋಷಣೆಗಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ.
ಸ್ಪೈಡರ್ಮ್ಯಾನ್ ಸಮಾವೇಶದ ಝಲಕ್
ದಾಖಲೆಗಾಗಿ ಭಾಗವಹಿಸಲು ಆಸಕ್ತಿ ಇರುವವರಿಂದ ಸಹಿ ಮತ್ತೆ ಫೋಟೋಗಳನ್ನು ಸಂಗ್ರಹಿಸಲಾಯಿತು. ನಂತರ ನಿಗದಿಯಾದ ದಿನ ಮಟಮಟ ಮಧ್ಯಾಹ್ನ ಅವರೆಲ್ಲರೂ ಉತ್ಸಾಹದಿಂದ ಸ್ಪೈಡರ್ಮ್ಯಾನ್ ವೇಷ ಧರಿಸಿ ಪಾಲ್ಗೊಂಡರು. ಕೆಲವರು ಕೆಂಪು ಟೈ ಮತ್ತು ಸೂಪರ್ ಹೀರೋ ಮುಖವಾಡ ಧರಿಸಿದ್ದರು. ಕೆಲವರು ಸೂಪರ್ ಹೀರೋ ಮುಖವಾಡದೊಂದಿಗೆ ಸೂಟ್ ಧರಿಸಿದ್ದರು.
ಇದನ್ನೂ ಓದಿ : Viral Video: ಆಸ್ಟ್ರೇಲಿಯಾ; ದೈತ್ಯ ಹಾವುಗಳ ರಕ್ಷಣೆ, ಎಂಥ ಪ್ರಶಾಂತತೆ ಈಕೆಯ ಮೊಗದಲ್ಲಿ
25 ವರ್ಷದ ಸಾಕರ್ ತರಬೇತುದಾರ ಜುವಾನ್ ಮೆಂಚನ್, ನಾನು ಮೂಲತಃ ನಾಚಿಕೆ ಸ್ವಭಾವದವನು. ಈ ಮುಖವಾಡದಿಂದಾಗಿ ನನ್ನ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ಮತ್ತು ನನ್ನನ್ನು ಪ್ರಸ್ತುಪಡಿಸಿಕೊಳ್ಳಲು ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದಿದ್ದಾನೆ. ಅಲ್ಲಿದ್ದ ಉಳಿದವರೂ ಜುವಾನ್ನ ಅಭಿಪ್ರಾಯವನ್ನು ಅನುಮೋದಿಸಿದರು. 18 ವರ್ಷದ ಮಟಿಯಾಸ್ ಕೋನ್ಸ್ ಎಂಬಾತ ಸ್ಟಾನ್ ಲೀ ಹೇಳಿದ, ‘ಯಾರಾದರೂ ಮುಖವಾಡ ಧರಿಸಬಹುದು’ ಎನ್ನುವುದನ್ನು ಕೂಗಿ ಹೇಳಿದನು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:16 pm, Mon, 30 October 23