Viral Brain Teaser: ‘ತೆರೆಸಾ ಬ್ರೇನ್​ ಟೀಸರ್​’ಗೆ ಉತ್ತರ ಕಂಡುಕೊಳ್ಳಲು ಯಾರಿಗೂ ಆಗುತ್ತಿಲ್ಲ, ನಿಮಗೆ?

Relationship: ನೆಟ್ಟಿಗರೇನೋ ಈ ಬ್ರೇನ್​ ಟೀಸರ್​ಗೆ ಉತ್ತರ ಕಂಡುಹಿಡಿಯಲು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಆದರೆ ಸರಿಯಾದ ಉತ್ತರ ಹುಡುಕುವಲ್ಲಿ ವಿಫಲರಾಗಿದ್ದಾರೆ. ನೀವು ಕುಶಾಗ್ರಮತಿಗಳು, ಖಂಡಿತ ಈ ಬ್ರೇನ್ ಟೀಸರ್​ನಲ್ಲಿರುವ ಒಗಟನ್ನು ಬಿಡಿಸುತ್ತೀರಿ ಎಂಬ ಆಶಯ ನಮ್ಮದು. ಬನ್ನಿ ಹಾಗಿದ್ದರೆ ಸಂಬಂಧದ ಸುತ್ತ ಹೆಣೆದಿರುವ ಈ ಸವಾಲಿಗೆ ಉತ್ತರ ಕಂಡುಹಿಡಿಯಿರಿ.

Viral Brain Teaser: 'ತೆರೆಸಾ ಬ್ರೇನ್​ ಟೀಸರ್​'ಗೆ ಉತ್ತರ ಕಂಡುಕೊಳ್ಳಲು ಯಾರಿಗೂ ಆಗುತ್ತಿಲ್ಲ, ನಿಮಗೆ?
ತೆರೆಸಾ ಬ್ರೇನ್ ಟೀಸರ್​ ನಿಮಗಾಗಿ...
Follow us
ಶ್ರೀದೇವಿ ಕಳಸದ
|

Updated on: Nov 01, 2023 | 11:13 AM

Brain Health: ನೆಟ್​ಮಂದಿಗೆ ಈ ಬ್ರೇನ್​ ಟೀಸರ್​ ಅತ್ಯಂತ ಕಡುಕಷ್ಟದ್ದಾಗಿದೆ. ಪ್ರಯತ್ನಿಸಿದ ಎಲ್ಲರೂ ಕೈಚೆಲ್ಲಿ ಕುಳಿತಿದ್ದಾರೆ. ‘ಸಂಬಂಧ’ದ ಬಗ್ಗೆ ಇರುವ ಈ ಬ್ರೇನ್​ ಟೀಸರ್​​ ಅನ್ನು ಇನ್​ಸ್ಟಾಗ್ರಾಂನಲ್ಲಿ (Instagram) ಪೋಸ್ಟ್ ಮಾಡಲಾಗಿದೆ. ಮೊದಲ ನೋಟಕ್ಕೆ ಇದು ಸಂಬಂಧದ ಮೇಲೆ ಇರುವ ಸರಳವಾದ ಸವಾಲು ಎಂದು ನಿಮಗೆ ಅನ್ನಿಸಬಹುದು. ಆದರೆ ಆಳಕ್ಕೆ ಹೋದಂತೆ ಇದು ಹೆಚ್ಚು ಸಂಕೀರ್ಣವಾಗುತ್ತದೆ. ಆದರೆ ನೀವು ಬುದ್ಧಿವಂತರಾಗಿರುವುದರಿಂದ ನಿಮಗಿದು ಸುಲಭವೆನ್ನಿಸಬಹುದೇನೋ. ತೆರೆಸಾ ಅವರ ಮಗಳು ನನ್ನ ಮಗಳ ತಾಯಿಯಾಗಿದ್ದರೆ ನಾನು ತೆರೆಸಾಗೆ ಏನಾಗಬೇಕು? ಇದು ಪ್ರಶ್ನೆ. ಉತ್ತರದ ಆಯ್ಕೆಗಳು 1. ಅಜ್ಜಿ, 2. ತಾಯಿ, 3. ಮಗಳು, 4. ಮೊಮ್ಮಗಳು, 5. ನಾನು ತೆರೆಸಾ. ಇವುಗಳಲ್ಲಿ ಸರಿಯಾದ ಉತ್ತರ ಯಾವುದು ಎಂದು ಕಂಡುಹಿಡಿಯಿರಿ.

ಇದನ್ನೂ ಓದಿ : Viral Video: ಲೆಹೆಂಗಾದಲ್ಲಿ ಇಷ್ಟೊಂದು ಸಲೀಸಾಗಿ ಪಲ್ಟಿ ಹೊಡೆದದ್ದು ಹೇಗೆ? ಯುವತಿಗೆ ನೆಟ್ಟಿಗರ ಪ್ರಶ್ನೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಐದು ದಿನಗಳ ಹಿಂದೆ Instagram ನಲ್ಲಿ ಹಂಚಿಕೊಂಡ ಈ ಪೋಸ್ಟ್​ ಅನ್ನು ಈತನಕ ಸುಮಾರು 20 ಮಿಲಿಯನ್​ ಜನರು ನೋಡಿದ್ದಾರೆ. ಹಲವಾರು ಜನರು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ತೆರೆಸಾ ಅವರ ಮಗಳು ನನ್ನ ಮಗಳ ತಾಯಿಯಾಗಿದ್ದರೆ, ಇದರರ್ಥ: ತೆರೆಸಾ ಅವರ ಮಗಳು = ನನ್ನ ಮಗಳ ತಾಯಿ, ಎಂದಿದ್ದಾರೆ  ಕೆಲವರು. ನಿನ್ನ ಮಗಳ ತಾಯಿ ನೀನು, ಆದುದರಿಂದ ತೆರೆಸಾಳ ಮಗಳು ನೀನು ಎಂದಿದ್ದಾರೆ ಇನ್ನೂ ಕೆಲವರು. ಅತ್ತೆ ಅಲ್ಲವೆ?  ಎಂದು ಕೇಳಿದ್ದಾರೆ ಮತ್ತಷ್ಟು ಜನ.

ಇಲ್ಲಿದೆ ತೆರೆಸಾ ಬ್ರೇನ್​ ಟೀಸರ್

View this post on Instagram

A post shared by Menace3k (@menace3k)

ತೆರೆಸಾ ಅವರ ಮಗಳು ನಿಮ್ಮ ಮಗಳ ತಾಯಿಯಾಗಿದ್ದರೆ ಮತ್ತು ನೀವು ನಿಮ್ಮ ಮಗಳ ತಾಯಿಯಾಗಿದ್ದರೆ, ನೀವು ತೆರೆಸಾ ಅವರ ಮಗಳಾಗಬೇಕಲ್ಲವೆ? ಎಂದಿದ್ದಾರೆ ಒಬ್ಬರು. ನೀವು ತಂದೆ ಎಂದಿದ್ದಾರೆ ಇನ್ನೊಬ್ಬರು. ಮತ್ತೊಬ್ಬರು, ಅಜ್ಜಿ, ಏಕೆಂದರೆ ತೆರೆಸಾ ನನ್ನ ಮಗಳಾಗಿದ್ದರೆ ನೀವು ನನಗೆ ಅಜ್ಜಿಯಾಗುತ್ತೀರಿ ಎಂದಿದ್ದಾರೆ.

ಒಟ್ಟಾರೆಯಾಗಿ ಈ ಉತ್ತರಗಳನ್ನು ಓದಿದ ಮೇಲೆ ನಿಮಗೆ ಏನೆನ್ನಿಸಿತು? ಸರಿಯಾದ ಉತ್ತರ ಯಾವುದೆಂದು ನೀವು ತೀರ್ಮಾನಿಸುತ್ತೀರಿ? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್