Viral Video: ಲೆಹೆಂಗಾದಲ್ಲಿ ಇಷ್ಟೊಂದು ಸಲೀಸಾಗಿ ಪಲ್ಟಿ ಹೊಡೆದದ್ದು ಹೇಗೆ? ಯುವತಿಗೆ ನೆಟ್ಟಿಗರ ಪ್ರಶ್ನೆ

Lehenga: ಕಲಾವಿದೆ ಸ್ನೇಹಾ ನಡುರಸ್ತೆಯಲ್ಲಿ ಲೆಹೆಂಗಾ ಧರಿಸಿ ಪಲ್ಟಿ ಹೊಡೆದಿರುವ ವಿಡಿಯೋ ನೆಟ್ಟಿಗರನ್ನು ಬಾಯಿ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡುತ್ತಿದೆ. 14 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದು, 1.4 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಅನೇಕರು ನಾವು ನಿಮ್ಮ ಅಭಿಮಾನಿಗಳು ಎಂದು ಹೇಳಿದ್ದಾರೆ. ನೀವೂ ಒಮ್ಮೆ ಈ ವಿಡಿಯೋ ನೋಡಿ.

Viral Video: ಲೆಹೆಂಗಾದಲ್ಲಿ ಇಷ್ಟೊಂದು ಸಲೀಸಾಗಿ ಪಲ್ಟಿ ಹೊಡೆದದ್ದು ಹೇಗೆ? ಯುವತಿಗೆ ನೆಟ್ಟಿಗರ ಪ್ರಶ್ನೆ
ನಡುರಸ್ತೆಯಲ್ಲಿ ಲೆಹೆಂಗಾದಲ್ಲಿ ಪಲ್ಟಿ ಹೊಡೆಯುತ್ತಿರುವ ಸ್ನೇಹಾ
Follow us
ಶ್ರೀದೇವಿ ಕಳಸದ
|

Updated on: Nov 01, 2023 | 10:24 AM

Stunt: ರೀಲ್ಸ್​ಗಾಗಿ ತಮ್ಮನ್ನು ತಾವೇ ಕೆದಕಿಕೊಳ್ಳುತ್ತ ಸಾಗುವ ಕಾಲದಲ್ಲಿ ನಾವಿದ್ದೇವೆ. ಸೃಜನಾತ್ಮಕವಾದದ್ದು, ಸಾಹಸಾತ್ಮಕವಾದದ್ದು, ಕಲಾತ್ಮಕವಾದ್ದು, ಮಾಹಿತಿಪೂರ್ಣವಾದದ್ದು ಹೀಗೆ ಯಾವುದೇ ಒಂದು ಕೌಶಲ ನಮ್ಮಲ್ಲಿ ಅಡಗಿದೆಯೇ? ಅಡಗಿದ್ದರೆ ಅದನ್ನು ಸಾಮಾಜಿಕ ಜಾಲತಾಣಕ್ಕೆ ‘ಕಂಟೆಂಟ್​ (Content)’ ಆಗಿ ಪರಿವರ್ತಿಸುವುದು ಹೇಗೆ ಎನ್ನುವುದನ್ನೇ ಆಲೋಚಿಸುತ್ತ, ಪ್ರಸ್ತುತಪಡಿಸುತ್ತ ನಮ್ಮಷ್ಟಕ್ಕೆ ನಾವೇ ಒಂದು ಐಡೆಂಟಿಟಿಯನ್ನು ತಂದುಕೊಳ್ಳುತ್ತ ಸಾಗುತ್ತಿದ್ದೇವೆ. ಇದಕ್ಕೆ ಉದಾಹರಣೆಯಾಗಿ ಈ ವಿಡಿಯೋ ನೋಡಿ. ದೊಡ್ಡದಾದ ಲೆಹೆಂಗಾ ಧರಿಸಿದ ಯುವತಿಯೊಬ್ಬಳು ನಡುರಸ್ತೆಯಲ್ಲಿ ನಿರಾಯಾಸವಾಗಿ ಪಲ್ಟಿ ಹೊಡೆದಿರುವುದು ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಫ್ಲಿಪ್​ಕಾರ್ಟ್​; ಮುರಿದ ಕಿಚನ್​ ಚಿಮಣಿ, ಕೊನೆಗೂ ಪರಿಹಾರ ಪಡೆದ ಗ್ರಾಹಕರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್ 19ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ಈ ವಿಡಿಯೋ ನೋಡಿದ ನೆಟ್​ಮಂದಿ ಈಕೆಯ ಕೌಶಲ ಮತ್ತು ಸಾಹಸಕ್ಕೆ ನಿಬ್ಬೆರಗಾಗುತ್ತಿದೆ. ಸ್ನೇಹಾ ಬಕ್ಲಿ ಎಂಬ ಯೂಟ್ಯೂಬರ್​, ವ್ಲಾಗರ್​ ತಮ್ಮ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈತನಕ ಸುಮಾರು 14 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 1.4 ಮಿಲಿಯನ್​ಗಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿದ್ದಾರೆ.

ಲೆಹೆಂಗಾದಲ್ಲಿ ಸ್ನೇಹಾ ಪಲ್ಟಿ ಹೊಡೆದ ವಿಡಿಯೋ

View this post on Instagram

A post shared by Sneha Bakli (@snehaa6943)

ತುಂಬಾ ಅದ್ಭುತವಾಗಿ ಮಾಡಿದ್ದೀರಿ ಎಂದು ಅನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ. ನೀವಿದನ್ನು ಇಷ್ಟೊಂದು ಲೀಲಾಜಾಲವಾಗಿ ಮಾಡುವುದು ಹೇಗೆ? ಎಷ್ಟು ಹೊಗಳಿದರೂ ಸಾಲದು ಎಂದಿದ್ದಾರೆ ಒಬ್ಬರು. ನೀವು ವಿಶಿಷ್ಟವಾದ ಪ್ರತಿಭೆ ಹೊಂದಿದ್ದೀರಿ ಎಂದಿದ್ದಾರೆ ಇನ್ನೊಬ್ಬರು. ನಾನಂತೂ ಮೂಕವಿಸ್ಮಿತನಾಗಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ನನಗೆ ಹೊಟ್ಟೆಕಿಚ್ಚಾಗುತ್ತಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ಮುರ್ಷಿದಾಬಾದ್​; ಮಟಮಟ ಮಧ್ಯಾಹ್ನ ನಡುರಸ್ತೆಯಲ್ಲಿ 18 ಲಕ್ಷ ನಗದು ದೋಚಿದ ಕಳ್ಳರು

ನಿಮ್ಮ ಅಭಿಮಾನಿ ನಾನು, ನೀವು ತುಂಬಾ ಚೆನ್ನಾಗಿ ನರ್ತಿಸುತ್ತೀರಿ ಎಂದಿದ್ದಾರೆ ಒಬ್ಬರು. ನನಗೂ ಈಗ ನಿಮ್ಮಂತೆ ಮಾಡಬೆಕು ಎನ್ನಿಸುತ್ತಿದೆ, ಆದರೆ ಪ್ಯಾಂಟ್​ ಧರಿಸಿಯೇ ನನಗಿದು ಸಾಧ್ಯವಿಲ್ಲ ಅಂಥದ್ದರಲ್ಲಿ ಲೆಹೆಂಗಾ ಧರಿಸಿ… ಎಂದಿದ್ದಾರೆ ಇನ್ನೊಬ್ಬರು. ಸಾಹಸ ಮತ್ತು ಕೌಶಲ ಗೊತ್ತಿರುವವರಿಗೆ ಬಟ್ಟೆ ಎಂದೂ ತೊಡಕಾಗಲಾರದು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೊಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್