Viral Video: ಬ್ಯಾಂಗ್​ ಬ್ಯಾಂಗ್​​​; ಪ್ರೀ ವೆಡ್ಡಿಂಗ್ ಸಾಂಗ್​​ಗೆ ಪ್ರತಿಕ್ರಿಯಿಸಿದ ಹೃತಿಕ್ ರೋಷನ್

Hrithik Roshan: 'ಎಲ್ಲರಂತೆ ಫೋಟೋ ವಿಡಿಯೋ ಶೂಟ್​ ಬೇಡ ಎಂದು ನನ್ನ ಹುಡುಗಿ ಹೇಳಿದಳು. ನಾವಿಬ್ಬರೂ ಅತ್ಯುತ್ತಮ ಡ್ಯಾನ್ಸರ್ಸ್​ ಅಲ್ಲ, ಆದರೂ ತಕ್ಕಮಟ್ಟಿಗೆ ಓಕೆ. ವಿಭಿನ್ನವಾಗಿ ಏನು ಮಾಡಬಹುದು ಯೋಚಿಸು ಎಂದಳು. ಏನಾದರೂ ಅವಳಿಗೆ ಸರ್​ಪ್ರೈಝ್​ ಕೊಡಲೇಬೇಕು ಎಂದು ಯೋಚಿಸತೊಡಗಿದೆ. ಈ ಐಡಿಯಾ ಕೊಟ್ಟಾಗ ಆಕೆಯಲ್ಲಿ ಮತ್ತಷ್ಟು ಉತ್ಸಾಹ ಚಿಮ್ಮಿತು.'

Viral Video: ಬ್ಯಾಂಗ್​ ಬ್ಯಾಂಗ್​​​; ಪ್ರೀ ವೆಡ್ಡಿಂಗ್ ಸಾಂಗ್​​ಗೆ ಪ್ರತಿಕ್ರಿಯಿಸಿದ ಹೃತಿಕ್ ರೋಷನ್
ಕರಣ್ ಕಶ್ಯಪ್​ ಮತ್ತು ಸಾಕ್ಷಿ ಕಶ್ಯಪ್​ ಪ್ರೀ ವೆಡ್ಡಿಂಗ್ ಸಾಂಗ್​ನಲ್ಲಿ
Follow us
ಶ್ರೀದೇವಿ ಕಳಸದ
|

Updated on: Oct 31, 2023 | 1:41 PM

Pre Wedding Shoot: ವಿವಾಹಪೂರ್ವ ಫೋಟೋ, ವಿಡಿಯೋ ಶೂಟ್​ಗಾಗಿ ಪ್ರತೀ ಜೋಡಿಯೂ ಬಹಳ ಯೋಚಿಸಿ ತೊಡಗಿಕೊಳ್ಳುತ್ತದೆ. ಥೀಮ್​ ಬೇಸ್ಡ್ ಶೂಟಿಂಗ್​ಗಾಗಿ ವಿಶೇಷ ತಯಾರಿ ನಡೆಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಜೋಡಿ ತಮ್ಮ ಪ್ರೀ ವೆಡ್ಡಿಂಗ್ ಶೂಟ್​ ಅನ್ನು ವಿಭಿನ್ನವಾಗಿ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ಹೃತಿಕ್ ರೋಷನ್​ನ (Hrithiq Roshan) ‘ಬ್ಯಾಂಗ್ ಬ್ಯಾಂಗ್​’ ಹಾಡಿನ ದೃಶ್ಯ ಮತ್ತು ಸನ್ನಿವೇಶವನ್ನು ಮರುಸೃಷ್ಟಿಸಲಾಗಿದೆ. ಹೃತಿಕ್​ ರೋಷನ್ ಮತ್ತು ಕತ್ರೀನಾ ಕೈಫ್​ರನ್ನು ಈ ವಿಡಿಯೋಗೆ ಈ ಜೋಡಿ ಟ್ಯಾಗ್ ಮಾಡಿದ್ದು, ಹೃತಿಕ್​ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು ಗಮನ ಸೆಳೆದಿದೆ.

ಇದನ್ನೂ ಓದಿ : Viral: ಪನೀರ್​ ಪ್ರಿಯರಿಗಾಗಿ ಇಲ್ಲಿದೆ ವಿಶೇಷ ಫೋಟೊ; ಇದನ್ನು ನೋಡಿದ ಮೇಲೆ ನೀವು ಏನು ಹೇಳುತ್ತೀರಿ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋವನ್ನು ಅಕ್ಟೋಬರ್​ 21ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಕರಣ್ ಮತ್ತು ಸಾಕ್ಷಿ, ಕತ್ರೀನಾ ಮತ್ತು ಹೃತಿಕ್​ರಂತೆ ವಸ್ತ್ರವಿನ್ಯಾಸ ಮಾಡಿಕೊಂಡು ಈ ಹಾಡಿಗೆ ಹೆಜ್ಜೆ ಹಾಕಿ ಅಭಿನಯಿಸಿದ್ದಾರೆ. ಸಾಕ್ಷಿ, ‘ಕರಣ್, ನಾವು ಅಷ್ಟೇನು ದೊಡ್ಡ ನರ್ತಕರಲ್ಲ. ಆದರೆ ಪ್ರೀ ವೆಡ್ಡಿಂಗ್​ ಬದಲು ಏನಾದರೂ ವಿಶೇಷವಾಗಿ ಮಾಡಬೇಕು ಎನ್ನುವುದು ನನ್ನ ಇಚ್ಛೆ’ ಎಂದಿದ್ದರು. ಆಗ ಕರಣ್​ ಆಕೆಗೆ ಏನಾದರೂ ಸರ್​​ಪ್ರೈಝ್ ಕೊಡಬೇಕೆಂದು ನಿರ್ಧರಿಸಿದರು. ಅದೇ ಇವರಿಬ್ಬರ ಬ್ಯಾಂಗ್​ ಬ್ಯಾಂಗ್​ ಮರುಸೃಷ್ಟಿ. ಅದೀಗ  ಹೀಗೆ ಭರ್ಜರಿಯಾಗಿ ಕಾರ್ಯಗತವಾಗಿದೆ.

ಇಲ್ಲಿದೆ ಬ್ಯಾಂಗ್​ ಬ್ಯಾಂಗ್​ ಮರುಸೃಷ್ಟಿ

ಈತನಕ ಈ ವಿಡಿಯೋವನ್ನು 23,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನಟ ಹೃತಿಕ್ ರೋಷನ್ ಅವರ ಕಣ್ಣಿಗೆ ಈ ವಿಡಿಯೋ ಬಿದ್ದಿದ್ದು, ಸುಂದರವಾಗಿದೆ ಅಭಿನಂದನೆಗಳು ನಿಮಗೆ ಎಂದು ಹಾರೈಸಿದ್ದಾರೆ. ಈ ಹಾಡಿನ ನೃತ್ಯಸಂಯೋಜನೆ, ನಿರ್ದೇಶನ ಬಹಳ ಉತ್ತಮವಾಗಿ ಮೂಡಿಬಂದಿದೆ. ಇದು ಮೂಲಹಾಡಿನಂತೆಯೇ ಭಾಸವಾಗುತ್ತದೆ, ಈ ತಂಡಕ್ಕೆ ಮತ್ತು ಜೋಡಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಅನೇಕ ನೆಟ್ಟಿಗರು. ಇದು ಯಾವ ಸಿನೆಮಾ ಸಾಂಗ್​ಗೂ ಕಡಿಮೆ ಇಲ್ಲ, ನೀವಿಬ್ಬರೂ ಹೀರೋ ಹೀರೊಯಿನ್​ ಥರವೇ ಕಾಣುತ್ತಿದ್ದೀರಿ ಎಂದಿದ್ದಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ